ಸರಗೂರು: ಸಮಾಜದಲ್ಲಿ ತುಳಿತಕ್ಕೆ ಒಳಗಾದ ವೀರಶೈವ-ಲಿಂಗಾಯತ ಸಮುದಾಯದ ಏಳಿಗೆಗೆ ಎಲ್ಲರೂ ಸಂಘಟಿತರಾಗಿ ಶ್ರಮಿಸಬೇಕಿದೆ ಎಂದು ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಘಟಕದ ನಿದರ್ೇಶಕ ಟಿ.ಎಸ್.ಲೋಕೇಶ್ ಸಲಹೆ ನೀಡಿದರು.

ಪಟ್ಟಣದ ಜೆಎಸ್ಎಸ್ ಶಿವಾನುಭವ ಮಂಟಪದಲ್ಲಿ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಸರಗೂರು ತಾಲೂಕು ಘಟಕದಿಂದ ಆಯೋಜಿಸಿದ್ದ ಗ್ರಾಮ ಪಂಚಾಯಿತಿ ಸದಸ್ಯರು, ವಿಎಸ್ಎಸ್ಎನ್ ನಿದರ್ೇಶಕರು, ವೀರಶೈವ ಸಹಕಾರ ಸಂಘದ ನಿದರ್ೇಶಕರಿಗೆ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಂಘಟನೆಯ ಕೊರತೆಯಿಂದ ಜನಸಂಖ್ಯೆಗೆ ಅನುಗುಣವಾಗಿ ರಾಜಕೀಯ ಪ್ರತಿನಿಧಿಗಳಿಲ್ಲ. ಸಮಾಜದ ನಾಯಕರು ರಾಜ್ಯದಲ್ಲಿ ಹಲವಾರು ವರ್ಷಗಳು ಮುಖ್ಯಮಂತ್ರಿಗಳಾಗಿದ್ದರೂ ತುಳಿತಕ್ಕೆ ಒಳಗಾಗಿದ್ದೇವೆ. ಇದನ್ನು ಸರಿಪಡಿಸಲು ಎಲ್ಲರೂ ಸಂಘಟಿತರಾಗಬೇಕು. ಸಾಮಾಜಿಕ, ಆಥರ್ಿಕ, ಶೈಕ್ಷಣಿಕ ಪ್ರಗತಿ ಸಾಧಿಸಿ, ರಾಜಕೀಯದಲ್ಲಿ ಪ್ರಬಲರಾಗಬೇಕು. ಆ ಮೂಲಕ ಸಮುದಾಯದ ಏಳಿಗೆಗೆ ಯತ್ನಿಸಬೇಕು ಎಂದು ಅವರು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಘಟಕದ ಅಧ್ಯಕ್ಷ ಶಿವಮೂತರ್ಿ ಕಾನ್ಯ, ಗ್ರಾಮೀಣ ಭಾಗದಲ್ಲಿ ಜನರಿಗೆ ಅಗತ್ಯ ಮೂಲ ಸೌಲಭ್ಯಗಳನ್ನು ನೀಡಬೇಕು. ಮಕ್ಕಳ ಶಿಕ್ಷಣಕ್ಕೆ ಎಲ್ಲರೂ ಒತ್ತು ನೀಡಬೇಕು. ಮಹಿಳೆಯರು, ಯುವ ಶಕ್ತಿ ರಾಜಕೀಯದಲ್ಲಿ ಬೆಳೆಯಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾಸಭಾದ ಸರಗೂರು ತಾಲೂಕು ಘಟಕದ ಅಧ್ಯಕ್ಷ ಡಿ.ಜಿ.ಶಿವರಾಜು ಮಾತನಾಡಿ, ಮಹಾಸಭಾ, ವೀರಶೈವ ಸಮಾಜದ ಸಹಕಾರದಿಂದಾಗಿ ಸಮುದಾಯ ಭವನ ನಿಮರ್ಾಣಕ್ಕೆ 2 ಎಕರೆ ಭೂಮಿ ಖರೀದಿಸಲಾಗಿದ್ದು, ಇದಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು. ಇನ್ನು ಮುಂದೆಯೂ ಭವನ ನಿಮರ್ಾಣಕ್ಕೆ ಇಂಥದೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾಸಭಾದ ಸರಗೂರು ತಾಲೂಕು ಘಟಕದ ಅಧ್ಯಕ್ಷ ಡಿ.ಜಿ.ಶಿವರಾಜು, ಮಹಾಸಭಾದ ರಾಜ್ಯ ಘಟಕದ ನಿದರ್ೇಶಕ ಎಚ್.ಎಸ್.ಸೋಮಶೇಖರ್ ಮಾತನಾಡಿದರು. ಹಂಚೀಪುರ ಮಠದ ಚನ್ನಬಸವಸ್ವಾಮೀಜಿ, ಬಿಡಗಲು ಪಡುವಲು ವಿರಕ್ತ ಮಠದ ಮಹದೇವಸ್ವಾಮೀಜಿ ಆಶರ್ೀವಚನ ನೀಡಿದರು. ಮಹಸಭಾದ ರಾಜ್ಯ ಘಟಕದ ನಿದರ್ೇಶಕ ವಿರೂಪಾಕ್ಷ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಮೂತರ್ಿ ಮಾರ್ಬಳ್ಳಿ, ಪ್ರಧಾನ ಕಾರ್ಯದಶರ್ಿ ಎಚ್.ಕೆ.ಚೆನ್ನಪ್ಪ, ಕೋಶಾಧ್ಯಕ್ಷ ಕೆ.ಕೆ.ಖಂಡೇಶ್, ಕಾರ್ಯದಶರ್ಿ ಕೆ.ಸಿ.ಶಿವಕುಮಾರ್, ನಿದರ್ೇಶಕರಾದ ಕೆ.ಬಿ.ನಾಗಭೂಷಣ, ಕೆ.ಶಿವಕುಮಾರ್, ಜೆ.ಪಿ.ಚಂದ್ರಶೇಖರ್, ಪಿ.ನಾಗರಾಜಪ್ಪ, ಟಿ.ಮಲ್ಲಿಕಾಜರ್ುನ, ಎಂ.ದ್ರಾಕ್ಷಾಯಿಣಿ, ಎಸ್.ಎಂ.ದ್ರಾಕ್ಷಾಯಿಣಿ ಲಿಂಗರಾಜು, ಸುಮಿತ್ರ, ಕೆ.ಆರ್.ನಗರದ ಕೆಂಪರಾಜು, ಮೊತ್ತ ಬಸವರಾಜಪ್ಪ, ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಸರಗೂರು ತಾಲೂಕು ಘಟಕದ ಪ್ರಧಾನ ಕಾರ್ಯದಶರ್ಿ ಸಿದ್ದಪ್ಪ, ಹಿರಿಯ ಮುಖಂಡ ಶಿವಪ್ಪಾಜಿ, ಎಸ್.ಎನ್.ಮಹದೇವಪ್ಪ, ಚಾಮಲಾಪುರ ಗಿರೀಶ್, ಕಾರ್ಯದಶರ್ಿ ಶೇಖರ್(ಕೆಂಡಗಣ್ಣಸ್ವಾಮಿ) ಪದಾಧಿಕಾರಿಗಳು, ಮಹಿಳಾ ಘಟಕದ ಅಧ್ಯಕ್ಷ ಸುನಂದರಾಜು, ಪ್ರಧಾನ ಕಾರ್ಯದಶರ್ಿಗಳು, ಪದಾಧಿಕಾರಿಗಳು, ಯುವ ಘಟಕದ ಅಧ್ಯಕ್ಷ ಪರಶಿವಮುತರ್ಿ, ಪ್ರಧಾನ ಕಾರ್ಯದಶರ್ಿಗಳು, ಪದಾಧಿಕಾರಿಗಳು, ಬಸವ ಬಳಗದ ಅಧ್ಯಕ್ಷ ಮಹದೇವಸ್ವಾಮಿ, ಪ್ರಧಾನ ಕಾರ್ಯದಶರ್ಿಗಳು ಹಾಗೂ ಪದಾಧಿಕಾರಿಗಳು ಸಮಾಜದ ಮುಖಂಡರು ಹಾಜರಿದ್ದರು.

ಮಹಾಸಭಾ ಸರಗೂರು ತಾಲೂಕು ಘಟಕದಿಂದ ಗ್ರಾಮ ಪಂಚಾಯಿತಿ ಸದಸ್ಯರು, ವಿಎಸ್ಎಸ್ಎನ್ ನಿದರ್ೇಶಕರು, ವೀರಶೈವ ಸಹಕಾರ ಸಂಘದ ನಿದರ್ೇಶಕರನ್ನು ಸನ್ಮಾನಿಸಲಾಯಿತು.

By admin