ಸರಗೂರು: ತಮ್ಮಿಬ್ಬರ ವಿಶೇಷಚೇತನ ಮಕ್ಕಳ ಆರೈಕೆಯಲ್ಲಿ ತೊಡಗಿರುವ ಪೋಷಕರಿಗೆ ಗ್ರಾಮ ಪಂಚಾಯಿತಿ ಸರಕಾರದ ವಸತಿ ಯೋಜನೆಯಡಿ ಮನೆ ಮಂಜೂರು ಮಾಡಿ ನಿಮರ್ಾಣ ಹಂತದಲ್ಲಿದ್ದು, ಹಣವಿಲ್ಲದೆ ಅರ್ಧಕ್ಕೆ ನಿಂತ ಮನೆಯನ್ನು ಪೂರ್ಣಗೊಳಿಸಿ ಅದನ್ನು ಪೋಷಕರಿಗೆ ಹಸ್ತಾಂತರಿಸುವ ಜವಾಬ್ದಾರಿಯನ್ನು ಕನರ್ಾಟಕ ರಿಪಬ್ಲಿಕನ್ ಸೇನಾ, ಮೈಸೂರು ಸೇವಾ ಟ್ರಸ್ಟ್ ವಹಿಸಿಕೊಳ್ಳುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಗ್ರಾಮದ ಸಿದ್ದಾಚಾರಿ ಎಂಬುವರಿಗೆ ಸದಾ ಹಾಸಿಗೆಯಲ್ಲೇ ಮಲಗಿರುವಂಥ ಇಬ್ಬರು ವಿಶೇಷಚೇತನ ಮಕ್ಕಳಿದ್ದಾರೆ. ಪೋಷಕರಿಗೆ ಮಕ್ಕಳನ್ನು ಆರೈಕೆ ಮಾಡುವುದೇ ಕೆಲಸ. ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಇವರಿಗೆ ಗ್ರಾಮ ಪಂಚಾಯಿತಿಯಿಂದ ನೀಡಲಾದ ಮನೆ ನಿಮರ್ಿಸಿಕೊಳ್ಳಲು ಹಣವಿಲ್ಲದೆ ಅರ್ಧಕ್ಕೆ ನಿಂತಿರುವುದನ್ನು ಮನಗಂಡ ಸೇನೆಯ ರಾಜ್ಯ ಸಂಘಟನಾ ಕಾರ್ಯದಶರ್ಿ ರಾಮಕೃಷ್ಣ ಅವರ ತಂಡ ಮನೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿ, ಸೇನೆಯ ರಾಜ್ಯಾಧ್ಯಕ್ಷ ಜಿಗಣಿ ಶಂಕರ್ ಆದೇಶದ ಮೇರೆಗೆ ಅರ್ಧಕ್ಕೆ ನಿಂತ ಮನೆಯನ್ನು ಪೂರ್ಣಗೊಳಿಸುವ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಇದಕ್ಕೆ ಮೈಸೂರು ಸೇವಾ ಟ್ರಸ್ಟ್ನ ಅಧ್ಯಕ್ಷ ರವಿ, ಪ್ರದೀಪ್, ನಾಗೇಶ್, ಸಿದ್ದರಾಮು ಸಾಥ್ ನೀಡುತ್ತಿದ್ದಾರೆ.
ಸೇನೆಯ ರಾಜ್ಯ ಸಂಘಟನಾ ಕಾರ್ಯದಶರ್ಿ ರಾಮಕೃಷ್ಣ ಮಾತನಾಡಿ, ಕೊರೋನಾ ಸಮಯದಲ್ಲಿ ತುಂಬಾ ಕಷ್ಟಕ್ಕೆ ಸಿಲುಕಿದ್ದ ಸಿದ್ದಾಚಾರಿ ಅವರಿಗೆ ಬಾಡಿಗೆ ಮನೆಯ ಬಾಡಿಗೆ ಹಣವನ್ನೂ ಕಟ್ಟಲು ಅಸಾಧ್ಯವಾದ ಪರಿಸ್ಥಿತಿ ಉಂಟಾಗಿದ್ದು, ಎರಡು ತಿಂಗಳಿಂದ ಸ್ವಲ್ಪ ಸುಧಾರಣೆ ಆಗಿದೆ. ಮನೆ ಅರ್ಧಕ್ಕೆ ನಿಂತು ಎರಡು-ಮೂರು ವರ್ಷಗಳೇ ಆಗಿದೆ. ಆದರೆ, ಮನೆ ಇನ್ನೂ ಪೂರ್ಣಗೊಂಡಿಲ್ಲ. ಸದಾ ಮಕ್ಕಳ ಆರೈಕೆಯಲ್ಲಿಯೇ ತೊಡಗಿರುವ ಪೋಷಕರು ಬಾಡಿಗೆ ಮನೆಯಲ್ಲಿ ವಾಸಿಸುವುದು ತುಂಬಾ ಕಷ್ಟಕರವಾಗಲಿದೆ ಎಂದು ತಿಳಿಸಿದರು.
ಈಗಾಗಲೇ ಮನೆ ನಿಮರ್ಾಣಕ್ಕೆ ಬೇಕಾದ ಸಲಕರಣೆಗಳನ್ನು ನೀಡಲಾಗಿದ್ದು, ಇನ್ನು ಮುಂದೆ ಅಗತ್ಯವಾಗಿ ಬೇಕಾದ ಸಲಕರಣೆಗಳನ್ನು ನೀಡಲಾಗುವುದು. ಮನೆಯನ್ನು ಸಂಪೂರ್ಣಗೊಳಿಸಿ ಪೋಷಕರಿಗೆ ಹಸ್ತಾಂತರಗೊಳಿಸುತ್ತೇವೆ ಎಂದು ಹೇಳಿದರು. ಟ್ರಸ್ಟ್ನ ಅಧ್ಯಕ್ಷ ರವಿ, ಪ್ರದೀಪ್, ನಾಗೇಶ್, ಸಿದ್ದರಾಮು ಹಾಜರಿದ್ದರು.