ಮೈಸೂರು, ಡಿಸೆಂಬರ್ 14 – ನಂಜನಗೂಡು ತಾಲ್ಲೂಕಿನ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಿದೆ.
ಅಲೆಮಾರಿ/ಅರೆ ಅಲೆಮಾರಿ ಬಾಲಕ ಮತ್ತು ಬಾ¯ಕಿಯರಿಗೆ 1 ರಿಂದ 10 ನೇ ತರಗತಿಯವರಿಗೆ 2000 ರೂ. ಮತ್ತು ರಾಜ್ಯ ವಿದ್ಯಾರ್ಥಿ ವೇತನ ದರಗಳು 1 ರಿಂದ 5ನೇ ತರಗತಿಯ ಬಾಲಕ/ಬಾಲಕಿಯರಿಗೆ 10 ತಿಂಗಳಿಗೆ 250 ರೂ. ಅಡ್‍ಹಾಕ್ ಗ್ರಾಂಟ್ 500 ರೂ. ಒಟ್ಟು 750 ರೂ. 6 ರಿಂದ 8ನೇ ತರಗತಿಯವರೆಗೆ 400 ರೂ. ಅಡ್‍ಹಾಕ್ ಗ್ರಾಂಟ್ 500 ಒಟ್ಟು 750 ರೂ. ತರಗತಿ 9 ರಿಂದ 10ನೇ ತರಗತಿಯವರೆಗೆ 500 ರೂ. ಮತ್ತು ಅಡ್‍ಗ್ರಾಂಟ್ 500 ರೂ. ಒಟ್ಟು 1000 ರೂ. ದರಗಳನ್ನು ನಿಗದಿಪಡಿಸಲಾಗಿದೆ.
ಅರ್ಜಿ ಸಲ್ಲಿಸಲು ಶಾಲೆಯಲ್ಲಿ ಪ್ರವೇಶ ಪಡೆದಿರುವ ಸ್ಯಾಟ್ಸ್ ಐಡಿ http://sts.karnataka.gov.in ನಲ್ಲಿ ಹಾಗೂ www.ssp,karnataka.gov.in ವಿದ್ಯಾರ್ಥಿಯ ಆಧಾರ್ ಸಂಖ್ಯೆ, ಪೋóಷಕರ ಆಧಾರ್ ಸಂಖ್ಯೆ, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಸರ್ಕಾರಿ ವಿದ್ಯಾರ್ಥಿ ನಿಲಯದಲ್ಲಿ ಪ್ರವೇಶ ಪಡೆದಿದಲ್ಲಿ, ವಿದ್ಯಾರ್ಥಿ ನಿಲಯ ಪ್ರವೇಶ ಸಂಖ್ಯೆ (ಸಂಬಂಧಿಸಿದ ಇಲಾಖೆಯಿಂದ ಪಡೆದಿದ್ದು), ಆಧಾರ್ ಸಂಖ್ಯೆ ಇಲ್ಲದಿದ್ದಲ್ಲಿ ನೋಂದಣಿ ಮಾಡಿಸಿದ ಇ.ಐ.ಡಿ ಸಂಖ್ಯೆ , ಬ್ಯಾಂಕ್ ಖಾತೆ ಸಂಖ್ಯೆ, ಐ.ಎಫ್.ಎಸ್.ಸಿ ಸಂಖ್ಯೆ, ಬ್ಯಾಂಕಿನ ವಿಳಾಸ, ಪೋಷಕರ ಆಧಾರ್ ನಂಬರ್‍ಗೆ ಲಿಂಕ್ ಮಾಡಿರುವ ಮೊಬೈಲ್ ಸಂಖ್ಯೆ ಹಾಗೂ ಭೌತಿಕ ಅನುಮತಿ ಪತ್ರದೊಂದಿಗೆ ಅರ್ಹ ಅಭ್ಯರ್ಥಿಗಳು ಅನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಕುಟುಂಬದ ವಾರ್ಷಿಕ ಆದಾಯವು ಅಲೆಮಾರಿ/ಅರೆ ಅಲೆಮಾರಿ ವಿದ್ಯಾರ್ಥಿಗಳಿಗೆ 2.50 ಲಕ್ಷ ಹಾಗೂ ರಾಜ್ಯ ಸರ್ಕಾರದ ವಿದ್ಯಾರ್ಥಿ ವೇತನ 1 ಲಕ್ಷ ಪ್ರವರ್ಗ -1 ರ ವಿದ್ಯಾರ್ಥಿಗಳಿಗೆ ಮಾತ್ರ, ವಾರ್ಷಿಕ ವರಮಾನ 44,500 ಪ್ರವರ್ಗ -2ಎ.3ಎ.3ಬಿ ಇತರೆ ಹಿಂದುಳಿದ ವರ್ಗಗಳಿಗೆ,