

ಡಾರ್ಲಿಂಗ್ ಕೃಷ್ಣ ಅಭಿನಯಿಸಿ, ನಿರ್ದೇಶನ ಮಾಡಿದ್ದ ಕಳೆದ ೨೦೨೦ರ ಆರಂಭದಲ್ಲಿಬಿಡುಗಡೆಯಾಗಿ ಸಿನಿಮಾ ಸೂಪರ್ ಹಿಟ್ ಆಗಿದ್ದ ಲವ್ ಮಾಕ್‌ಟೈಲ್ ಸಿನೆಮಾದ ಭಾಗ-೨ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಸಾಕಷ್ಟುಕುತೂಹಲ ಹುಟ್ಟಿಸಿದೆ. ಲವ್ ಮಾಕ್‌ಟೈಲ್ ೧ರಲ್ಲಿ ನಿಧಿಮಾ ಪಾತ್ರಸಾಕಷ್ಟು ಸದ್ದು ಮಾಡಿತ್ತು. ಸಿನಿಮಾದಲ್ಲಿ ನಿಧಿಮಾಪಾತ್ರ ಮೃತಪಡುತ್ತೆ. ಲವ್ ಮಾಕ್‌ಟೈಲ್ ೨ನಲ್ಲಿ ಈ ಪಾತ್ರ ಇರುವುದಿಲ್ಲ ಎಂದು ಚಿತ್ರತಂಡ ಹೇಳಿತ್ತು.ಆದರೂ ಲವ್ ಮಾಕ್‌ಟೈಲ್ ೨ ಟ್ರೈಲರ್‌ನಲ್ಲಿನಿಧಿಮಾ ನೆನಪಲ್ಲಿ ಆದಿ ಪಾತ್ರ ಕಾಲ ಕಳೆಯುತ್ತೆ.ನಂತರ ಮತ್ತೊಂದು ಮದುವೆ ಆಗುವುದಕ್ಕೆತೀರ್ಮಾನ ಮಾಡುತ್ತಾರೆ.
ಆಮೇಲೆ ಏನಾಗಲಿದೆ ಎನ್ನುವುದೇ ಕಥೆಯ ಜೀವಾಂಶ ಎಂಬುಂದು ಟ್ರೈಲರ್‌ನಲ್ಲೇತಿಳಿಯಲಿದೆ.ಲವ್ ಮಾಕ್‌ಟೈಲ್೨ ಸಿನಿಮಾ ಬಿಡುಗಡೆಆದ ಬಳಿಕ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾನಾಗರಾಜ್ ಚಾರ್ಮ್ ಹೆಚ್ಚಿತು. ಈ ಸಿನಿಮಾಸಕ್ಸಸ್ ಬಳಿಕ ಈ ಸ್ಟಾರ್ ಜೋಡಿ ದಾಂಪತ್ಯಜೀವನಕ್ಕೂ ಕಾಲಿಟ್ಟು ಇದೇ ಫೆಬ್ರವರಿಗೆಒಂದು ವರ್ಷ ಆಗಲಿದೆ. ಇದೇ ಸಂತಸದಲ್ಲಿಲವ್ ಮಾಕ್‌ಟೈಲ್ -೨ ಸಿನಿಮಾ ಪ್ರೇಮಿಗಳದಿನಕ್ಕೆ ಮೂರು ದಿನ ಮುಂಚಿತವಾಗಿ ಬಿಡುಗಡೆಮಾಡುವ ಪ್ಲಾನ್‌ನಲ್ಲಿ ಚಿತ್ರತಂಡ ಇದೆ. ಚಿತ್ರದಲ್ಲಿಕ್ಯಾಮೆರಾ ವರ್ಕ್ ಸೊಗಸಾಗಿ ಮೂಡಿ ಬಂದಿದೆ.ರಾಘವೇಂದ್ರ ಕಾಮತ್ ಬರೆದಿರುವ ಸಾಹಿತ್ಯಕ್ಕೆನಕುಲ್ ಅಭ್ಯಂಕರ್ ಸಂಗೀತ ನೀಡಿದ್ದಾರೆ.ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ, ಮಿಲನಾನಾಗರಾಜ್, ಅಮೃತಾ ಅಯ್ಯಂಗಾರ್, ರಚನಾಇಂದರ್, ಸುಶ್ಮಿತಾ ಗೌಡ ಅಭಿನಯಿಸಿದ್ದಾರೆ.