ಚಾಮರಾಜನಗರ: ನಗರದ ರಾಮಸಮುದ್ರ ಪೂರ್ವ ಠಾಣೆ ನೂತನ ಪೋಲಿಸ್ ಇನ್ಸ್‌ಪೆಕ್ಟರ್ ಶ್ರೀಕಾಂತ್ ಅವರನ್ನು ಕನ್ನಡಪರಸಂಘಟನೆಗಳ ಮುಖಂಡರು ರಾಮಸಮುದ್ರ ಪೂರ್ವ ಪೋಲಿಸ್ ಠಾಣೆಯಲ್ಲಿ ಸನ್ಮಾನಿಸಿದರು.
ನಿಜಧ್ವನಿ ಸೇನಾಸಮಿತಿ ಅಧ್ಯಕ್ಷ ಗೋವಿಂದರಾಜು ಮಾತನಾಡಿ, ಶ್ರೀಕಾಂತ್ ಅವರು ಹಿಂದೆ ಚಾಮರಾಜನಗರದಲ್ಲಿ ಕರ್ತವ್ಯ ನಿರ್ವಹಣೆ ಮಾಡಿದ್ದರು. ಇಲ್ಲಿಂದ ವರ್ಗಾವಣೆಯಾಗಿ ರಾಜ್ಯದ ವಿವಿಧ ಜಿಲ್ಲೆಗಳ ಠಾಣೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಮತ್ತೇ ಚಾಮರಾಜನಗರದಲ್ಲಿ ಸೇವೆ ಮಾಡಲು ಅವಕಾಶ ಸಿಕ್ಕಿರುವುದು ನಗರದ ಜನತೆ ಹೆಮ್ಮೆಪಡುವ ವಿಚಾರವಾಗಿದೆ ಎಂದರು.
ಸನ್ಮಾನಸ್ವೀಕರಿಸಿದ ಪೋಲಿಸ್ ಇನ್ಸ್‌ಪೆಕ್ಟರ್ ಶ್ರೀಕಾಂತ್ ಮಾತನಾಡಿ, ಚಾಮರಾಜನಗರದ ಕನ್ನಡಪರಸಂಘಟನೆಗಳು ಗಡಿಜಿಲ್ಲೆಯ ರಕ್ಷಣೆ ಮಾಡುವ ಸಂಬಂಧ ಇಂದಿಗೂ ಅನೇಕ ಹೋರಾಟ ಕೈಗೊಳ್ಳುತ್ತ ಬಂದಿವೆ.s
ಸಂಘಟನೆಗಳು ನೊಂದವರ, ಶೋಷಿತರ ಪರ ಕೆಲಸ ಮಾಡಬೇಕು, ಸಾರ್ವಜಕರ ರಕ್ಷಣೆ ವಿಚಾರಕ್ಕೆ ಬಂದಾಗ ಪೋಲಿಸ್ ಇಲಾಖೆಗೆ ತಮ್ಮ ಸಹಕಾರ ನೀಡಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಎಪಿಎಂಸಿ ಸದಸ್ಯ ವೆಂಕಟರಾವ್ ಸಾಠೆ, ಅಖಿಲಕರ್ನಾಟಕ ಕನ್ನಡಮಹಾಸಭೆ ಅಧ್ಯಕ್ಷ ಚಾರಂಶ್ರೀನಿವಾಸಗೌಡ, ಪಣ್ಯದಹುಂಡಿರಾಜು, ಗಡಿನಾಡ ಕನ್ನಡ ರಕ್ಷಣಾವೇದಿಕೆ ಅಧ್ಯಕ್ಷ ಚಾ.ರ.ಕುಮಾರ್, ಮರಿಯಾಲದಹುಂಡಿಕುಮಾರ್, ರಾಮಸಮುದ್ರ ಬಂಗಾರಸ್ವಾಮಿ, ಆಟೋಆಕಾಶ್, ಜಗದೀಶ್, ಕೃಷ್ಣಮೂರ್ತಿ, ಮಹಾದೇವಯ್ಯ ಮಹಾಲಿಂಗೇಶ ಹಾಜರಿದ್ದರು.
