ಶ್ರೀ ರಾಮಕೃಷ್ಣ ಪರಮಹಂಸ 186ನೇ ಜಯಂತಿ ಅಂಗವಾಗಿ ಕಾಂಗ್ರೆಸ್ ಮುಖಂಡ ಎನ್ ಎಂ ನವೀನ್ ಕುಮಾರ್ ರವರು ರಾಮಕೃಷ್ಣ ನಗರದ ವೃತ್ತದಲ್ಲಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಆನಂತರ ಸಿಹಿ ವಿತರಿಸಿದರು ನಂತರ ಮಾತನಾಡಿ ವಿವೇಕಾನಂದನಗರ, ರಾಮಕೃಷ್ಣನಗರದ ವೃತ್ತಗಳಲ್ಲಿರುವಂತೆ ಶಾರದಾದೇವಿನಗರದಲ್ಲಿಯೂ ಶಾರದಾಮಾತೆಯ ಪ್ರತಿಮೆ ನಿರ್ಮಾಣವಾಗಬೇಕು, ತನ್ಮೂಲಕ ಮೂವರು ಮಹನೀಯರನ್ನು ಕೊಡುಗೆಯನ್ನು ಶಾಶ್ವತವಾಗಿ ನೆನೆಯುವ ಕೆಲಸವಾಗುತ್ತದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಯುವ ಮುಖಂಡ ಎನ್ ಎಂ ನವೀನ್ ಕುಮಾರ್ ,ಸಿ ಜಿ ಗಂಗಾಧರ್ ,ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ ,ರಾಕೇಶ್ ಕುಂಚಿಟಿಗ ,ವಿನಯ್ ಕಣಗಾಲ್ , ನವೀನ್ ಕೆಂಪಿ ,ಎಂ ಬಿ ವಿನಯ್ ಕುಮಾರ್ ,ಎಸ್ ಎನ್ ರಾಜೇಶ್ ,ರಾಜೇಶ್ ,ಸುನೀಲ್ ,ಹಾಗೂ ಇನ್ನಿತರರು ಹಾಜರಿದ್ದರು