ಮೈಸೂರು : ರಾಜ್ಯದ ಅಭಿವೃದ್ಧಿಗೆ ಮೈಸೂರು ಮಹಾರಾಜರು ಅಪಾರ ಕೊಡುಗೆ ನೀಡಿದ್ದು, ಕೃಷಿ, ಶಿಕ್ಷಣ, ಕೈಗಾರಿಕೆಗೆ ಭದ್ರ ಬುನಾದಿ ಹಾಕಿದ್ದಾರೆ ಎಂದು ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಎಸ್.ಬೊಮ್ಮಾಯಿ ಅವರು ತಿಳಿಸಿದರು.

ಇಂದು ಕಲಾಮಂದಿರದಲ್ಲಿ ನಡೆದ ಮೈಸೂರು ಪೇಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್ ೭೫ ನೇ ವ?ದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ೭೫ ವ?ಗಳ ಹಿಂದೆ ದೂರದೃಷ್ಟಿಯನ್ನು ಇಟ್ಟುಕೊಂಡು ಮೈಸೂರು ಪೇಂಟ್ಸ್ ಮತ್ತು ವಾರ್ನಿಷ್ ಲಿಮಿಟೆಡ್ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸ್ಥಾಪಿಸಿದರು. ಚುನಾವಣೆಗೆ ಅಗತ್ಯವಾಗಿರುವ ಅಳಿಸಲಾಗದ ಶಾಹಿಯನ್ನು ಈ ಸಂಸ್ಥೆ ನೀಡುತ್ತದೆ.

ಕರ್ನಾಟಕವನ್ನು ತಾಂತ್ರಿಕತೆಯ ಕೇಂದ್ರ ಎಂದು ಕರೆಯಲಾಗುತ್ತದೆ. ಇದಕ್ಕೆ ಕಾರಣ ಮಹಾರಾಜರು ಅಂದೇ ತಾಂತ್ರಿಕತೆಯನ್ನು ಬಳಸಿ ಕಾರ್ಖಾನೆಗಳನ್ನು ಸ್ಥಾಪಿಸಿರುವುದು ಎಂದು ತಿಳಿಸಿದರು.

ಈ ಸಂಸ್ಥೆ ಖಾಸಗಿ ಸಂಸ್ಥೆಗಳೊಂದಿಗೆ ಪೈಪೋಟಿಯನ್ನು ಎದುರಿಸುತ್ತಿದೆ ಇಂದು ಆಧುನಿಕ ತಂತ್ರಗಾರಿಕೆ ಮಾರುಕಟ್ಟೆ ಸ್ಟ್ರಾಟಜಿ ಅಳವಡಿಸಿಕೊಂಡು ಸಂಸ್ಥೆ ಮುನ್ನಡೆಯಬೇಕಿದೆ. ಇದಕ್ಕೆ ಅಗತ್ಯ ನೆರವನ್ನು ಸರ್ಕಾರ ನೀಡುತ್ತದೆ ಎಂದು ತಿಳಿಸಿದರು.

ವಾಣಿವಿಲಾಸ ಸಾಗರ ಅಣೆಕಟ್ಟು ಈ ವ? ತುಂಬಿದ್ದು, ಇದು ಮಧ್ಯ ಕರ್ನಾಟಕಕ್ಕೆ ನೀರನ್ನು ಒದಗಿಸುವ ಅಣೆಕಟ್ಟೆಯಾಗಿದೆ. ಮಹಾರಾಜರು ನಿರ್ಮಿಸಿದ ಈ ಅಣೆಕಟ್ಟು ಉತ್ತಮ ಕೊಡುಗೆಯಾಗಿದೆ. ಕೆ.ಆರ್.ಎಸ್ ಅಣೆಕಟ್ಟೆಯ ಗೇಟ್‌ಗಳನ್ನು ದುರಸ್ತಿ ಮಾಡುವ ಸೌಭಾಗ್ಯ ನನಗೆ ದೊರೆಯಿತು. ೧೬ ಗೇಟ್‌ಗಳನ್ನು ಹೊಸದಾಗಿ ಅಳವಡಿಸಲಾಗಿದೆ. ಕೆ.ಆರ್.ಎಸ್ ಅಣೆಕಟ್ಟೆ ಗೇಟ್‌ಗಳು ಇನ್ನೂ ೫೦ ವ?ಗಳು ಬಾಳಿಕೆ ಬರುತ್ತವೆ ಎಂದು ತಿಳಿಸಿದರು.

ನಂತರ ಮಾತನಾಡಿದ ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆಯ ಅಧ್ಯಕ್ಷರಾದ ರಘು ಆರ್.ಕೌಟಿಲ್ಯ ಅವರು ನಾಲ್ವಡಿ ಕೃ?ರಾಜ ಒಡೆಯರ್‌ರವರು ಶ್ರೇ? ಜನಪರ ಆಡಳಿತವನ್ನು ನೀಡಿದರು. ಮೈಸೂರು ಪೇಂಟ್ಸ್ ಅಂಡ್ ವಾರ್ನಿ? ಲಿಮಿಟೆಡ್ ಅನ್ನು ನಾಲ್ವಡಿ ಕೃ?ರಾಜ ಒಡೆಯರ್ ಅವರು ಸ್ಥಾಪಿಸಿದರು. ಚುನಾವಣೆಗೆ ವಿಶೇ? ಶಾಹಿಯನ್ನು ಒದಗಿಸುವುದು ಮೈಸೂರು ಪೇಂಟ್ಸ್ ಅಂಡ್ ವಾರ್ನಿ? ಲಿಮಿಟೆಡ್ ಹೆಗ್ಗಳಿಕೆ. ರಾಜ್ಯದ ಅನೇಕ ಸರ್ಕಾರಿ ಉದ್ಯಮಗಳಿದ್ದು, ಅವುಗಳಿಗೂ ಹೆಚ್ಚಿನ ಪ್ರೋತ್ಸಾಹ ಅತ್ಯಗತ್ಯ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಲಸಂಪನ್ಮೂಲ ಸಚಿವರಾದ ಗೋವಿಂದ ಎಂ ಕಾರಜೋಳ, ರಾಜಮಾತೆ ಪ್ರಮೋದಾ ದೇವಿ ಒಡೆಯರ್, ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಲ್. ನಾಗೇಂದ್ರ, ಕೃ?ರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್.ಎ. ರಾಮದಾಸ್, ಮೈಸೂರು ಮಹಾನಗರ ಪಾಲಿಕೆಯ ಮಹಾಪೌರರಾದ ಶಿವಕುಮಾರ್, ಗುಂಡ್ಲುಪೇಟೆ ಶಾಸಕರಾದ ನಿರಂಜನ್ ಕುಮಾರ್, ಮೈಸೂರು ಜಿಲ್ಲಾಧಿಕಾರಿಗಳಾದ ಡಾ.ಕೆ.ವಿ.ರಾಜೇಂದ್ರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.