ಮಂಡ್ಯ: ಮೆ. ಇಫ್ಕೋ, ಮೆ. ಐ.ಪಿ.ಎಲ್ ಹಾಗೂ ಮೆ. ಎಂ.ಸಿ.ಎಫ್ ಸಂಸ್ಥೆಗಳು ರಸಗೊಬ್ಬರದ ದರಗಳನ್ನು ಪರಿಷ್ಕರಿಸಿದ್ದು, ಈ ದರಗಳು ಹಿಂದಿನ ದರಕ್ಕಿಂತ ಹೆಚ್ಚಾಗಿರುತ್ತದೆ, ಆದರೆ ಜಿಲ್ಲೆಯಲ್ಲಿ ಹಳೆಯ (ಮಾರ್ಚ್ -2021ರ) ರಸಗೊಬ್ಬರದ ದಾಸ್ತಾನು ಇದ್ದು, ಈ ರಸಗೊಬ್ಬರವನ್ನು ಹಳೆಯ ದರದಲ್ಲಿಯೇ ಮಾರಾಟ ಮಾಡಲು ಎಲ್ಲಾ ರಸಗೊಬ್ಬರ ಚಿಲ್ಲರೆ ಮಾರಾಟಗಾರರಿಗೆ ಸೂಚಿಸಲಾಗಿದ್ದು, ರಸಗೊಬ್ಬರ ಮಾರಾಟ ಮಳಿಗೆಗಳ ಮುಂಭಾಗದಲ್ಲಿ ಸಂಸ್ಥೆವಾರು ದಾಸ್ತಾನಿರುವ ರಸಗೊಬ್ಬರ ಪ್ರಮಾಣವನ್ನು ಮತ್ತು ದರವನ್ನು ರೈತರಿಗೆ ಸುಲಭವಾಗಿ ಕಾಣಿಸುವ ಹಾಗೂ ಅರ್ಥವಾಗುವ ರೀತಿಯಲ್ಲಿ ಮಾರಾಟ ಮಳಿಗೆಯ ಮುಂದೆ ಪ್ರದರ್ಶಿಸಲು ತಿಳಿಸಲಾಗಿರುತ್ತದೆ. ಅದರಂತೆ ರೈತರು ಹಳೆಯ ರಸಗೊಬ್ಬರವನ್ನು ಹಳೆ ದರದಲ್ಲಿಯೇ ಖರೀದಿ ಮಾಡಿ ಬೆಳೆಗಳಿಗೆ ಬಳಸಲು ತಿಳಿಸಲಾಗಿದೆ.
ಎಲ್ಲಾ ಚಿಲ್ಲರೆ ಮಾರಾಟಗಾರರು ಎಲ್ಲ ರೀತಿಯ ರಸಗೊಬ್ಬರವನ್ನು ಪಾಯಿಂಟ್ ಆಫ್ ಸೇಲ್ ಉಪಕರಣದ ಮುಖಾಂತರ ಮಾರಾಟ ಮಾಡುವುದು ಕಡ್ಡಾಯವಾಗಿದ್ದು ರೈತರು ತಮ್ಮ ಆಧಾರ್ ಸಂಖ್ಯೆಯನ್ನು ನೀಡಿ ರಸಗೊಬ್ಬರವನ್ನು ಖರೀದಿ ಮಾಡಬಹುದಾಗಿದೆ ಹಾಗೂ ಯಾವುದೇ ರಸಗೊಬ್ಬರ ಮಾರಾಟಗಾರರು ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರದಲ್ಲಿ ರಸಗೊಬ್ಬರವನ್ನು ಮಾರಾಟ ಮಾಡಿದಲ್ಲಿ, ಕಳಪೆ ರಸಗೊಬ್ಬರವನ್ನು ಮಾರಾಟ ಮಾಡಿದಲ್ಲಿ, ಅಥವಾ ರಸಗೊಬ್ಬರವನ್ನು ಪಾಯಿಂಟ್ ಆಫ್ ಸೇಲ್ ಉಪಕರಣದ ಮುಖಾಂತರ ಮಾರಾಟ ಮಾಡುವಲ್ಲಿ ನಿಯಮವನ್ನು ಉಲ್ಲಂಘಿಸಿದಲ್ಲ್ಲಿ ರಸಗೊಬ್ಬರ ನಿಯಂತ್ರಣ ಆದೇಶ (1985) ರಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮಂಡ್ಯ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರಾದ ಡಾ. ಬಿ. ಎಸ್. ಚಂದ್ರಶೇಖರ್ ತಿಳಿಸಿದ್ದಾರೆ.

By admin