ಮೈಸೂರು: ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆಯು ಮೈಸೂರು ರಂಗಕರ್ಮಿಗಳಿಗಾಗಿ ವೈದ್ಯಕೀಯ ರಂಗಮಿತ್ರ ಎಂಬ ಸಹಾಯವಾಣಿಯನ್ನು ಆರಂಭಿಸಿದೆ.
ಈ ಸಹಾಯವಾಣಿಯನ್ನು ಸಂಪರ್ಕಿಸುವ ಮೈಸೂರಿನ ರಂಗಕರ್ಮಿಗಳಿಗೆ ವೈದ್ಯಕೀಯ ನೆರವು ಸಲಹೆ ಗಳನ್ನು ಒದಗಿಸಿಕೊಡಲಿದೆ. ಹಿರಿಯ ರಂಗಕರ್ಮಿಗಳಾದ ಸಿ. ಬಸವಲಿಂಗಯ್ಯ, ಮಂಡ್ಯ ರಮೇಶ್, ರಾಜಶೇಖರ ಕದಂಬ ಬಿ.ಎಂ.ರಾಮಚಂದ್ರ ವೇದಿಕೆಯ ಅಧ್ಯಕ್ಷರಾದ ಸುರೇಶ್ ಬಾಬು ಮತ್ತು ವೇದಿಕೆಯ ಎಲ್ಲ ಸದಸ್ಯರ ಅಭಿಪ್ರಾಯ ಸಹಕಾರ ಸಹಭಾಗಿತ್ವವನ್ನು ಪಡೆದು ಸಹಾಯವಾಣಿಯನ್ನು ಪ್ರಾರಂಭಿಸಲಾಗಿದೆ. ವೇದಿಕೆಯ ಕಾರ್ಯಕಾರಿ ಮಂಡಳಿ ಸದಸ್ಯರಾದ ಹರಿದತ್ತ ಎಂ.ಪಿ ಅವರು ಸಹಾಯವಾಣಿಯ ಸಂಚಾಲಕರಾಗಿ ಕಾರ್ಯನಿರ್ವಹಿಸಲಿದ್ದಾರೆ ನೆರವು ನಿರೀಕ್ಷಿಸುವವರು ಹರಿದತ್ತ.ಎಂ.ಪಿ: 9019370060, ಮಂಜುಮಂಗಲ: 9164878098, ಕಾತ್ಯಾಯಿನಿ: 8277315586, ನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆಯು ಪ್ರಕಟಣೆಯಲ್ಲಿ ತಿಳಿಸಿದೆ.