ಪ್ರಭಾಸತೀಶ್ ಇವರು ಪ್ರತಿ ದಿನದ 24 ಗಂಟೆಗಳಲ್ಲಿ ಸುಮಾರು 14 ಗಂಟೆಗಳಿಗೂ ಹೆಚ್ಚು ಸಮಯ ಯೋಗ ಮಾಡುವುದರ ಜೊತೆಗೆ ವಿದ್ಯಾರ್ಥಿ, ರೋಗಿಗಳು, ವೃದ್ಧರುಗಳು ಮತ್ತು ಯೋಗಾಸ್ತಕರಿಗೆ ಯೋಗ ಹೇಳಿಕೊಡುವುದರಲ್ಲಿ ನಿರತರಾಗಿರುವ ಇವರು, ಕಳೆದ 35ವರ್ಷಗಳಿಂದ ಯೋಗವು ಇವರ ನರನಾಡಿಗಳೆಲ್ಲಾ ಆವರಸಿ ಇವರನ್ನು ಆರೋಗ್ಯವಂತಳನ್ನಾಗಿಸುವುದರ ಜೊತೆಗೆ ಒಬ್ಬ ಉತ್ತಮ ‘ಯೋಗಮಾಸ್ಟರ್’ರಾಗಿದ್ದಾರೆಂಬುದರಲ್ಲಿ ಎರಡು ಮಾತಿಲ್ಲ.
ಇಡೀ ಜೀವನದಲ್ಲಿ ಯೋಗಕ್ಕೆ ಹೆಚ್ಚು ಸಮಯ ಮೀಸಲಾಗಿಟ್ಟಿದ್ದೇನೆಂಬುದು ಇವರ ಹೆಮ್ಮೆಯ ಸಂಗತಿಯೂ ಹೌದು. ಪ್ರಭಾಸತೀಶ್ ಅವರೇ ತಿಳಿಸುವಂತೆ, ‘ಮನೆಗೊಬ್ಬ ಯೋಗಿನಿ, ಮನೆಯಂಗಳದಲ್ಲಿ ಯೋಗ’ ಹೀಗೆ ಮನೆಯಲ್ಲಿ ಒಬ್ಬರು ಯೋಗದ ಅರಿವನ್ನು ಪಡೆದುಕೊಂಡರೆ ಮನೆಯಂಗಳದಲ್ಲೇ ಯೋಗಮಾಡಿ ಆರೋಗ್ಯ ವೃದ್ಧಿಸಿಕೊಳ್ಳುವುದರ ಜೊತೆಗೆ ಕುಟುಂಬದ ಆರೋಗ್ಯದಿಂದ ಸಮಾಜಿಕ ಆರೋಗ್ಯ, ರಾಜ್ಯದ ಮತ್ತು ರಾಷ್ಟ್ರ-ಅಂತರಾಷ್ಟ್ರೀಯಕ್ಕೆ ಯೋಗ ವ್ಯಾಪಿಸುತ್ತದೆ ಮತ್ತು ಎಲ್ಲರ ಆರೋಗ್ಯ ವೃದ್ಧಿಸಿ ಆರೋಗ್ಯವಂತ ರಾಷ್ಟ್ರವನ್ನಾಗಿಸುತ್ತದೆ ಎಂಬುದು ಇವರ ಸಲಹೆಯಾಗಿದೆ.
ಜೂನ್ 21 ಅಂತರಾಷ್ಟ್ರೀಯ ಯೋಗ ದಿನಾಚರಣೆ ದಿನ. ಈ ದಿನದಲ್ಲಿ ಇವರು 108 ಸೂರ್ಯ ನಮಸ್ಕಾರವನ್ನು ತಮ್ಮ ಶಿಷ್ಯವೃಂದದವರಿಂದ ಮಾಡಿಸುವುದರ ಜೊತೆಗೆ ತಾವು ಅದರಲ್ಲೇ ಬಾಗಿಯಾಗಿ, ಯೋಗ ಮಾಡುವುದರ ಜೊತೆಗೆ, ಯೋಗ ಬಗ್ಗೆ ವಿಚಾರದ ಬಗ್ಗೆ ಅನೇಕ ವಿಚಾರಗಳನ್ನು ಸಾರಾಗವಾಗಿ ಮಾತನಾಡುವ ಇವರ ಯೋಗ ಕುರಿತು ಅರಿವು ಮೂಡಿಸುವ ಪ್ರಯತ್ನವನ್ನು ಈಗಾಗಲೇ ಸಾಕಷ್ಟು ಮಾಡಿದ್ದು, ಜೊತೆಗೆ ಬಡವರಿಗೆ ಉಚಿತವಾಗಿ ಯೋಗವನ್ನು ಹೇಳಿಕೊಡುತ್ತಾರೆ. ಇವರ ಇನ್ನೊಂದು ವಿಷೇಶವೆಂದರೆ ನೌಲಿ ಕ್ರಿಯೆಯನ್ನು ಮಾಡುತ್ತಾರೆ ಈ ಕ್ರಿಯೆಯನ್ನು ಸಾಮಾನ್ಯವಾಗಿ ಮಹಿಳೆಯರು ಮಾಡುವುದಿಲ್ಲ ಆದರೆ ಇವರು ನೌಲಿಕ್ರಿಯೆಯನ್ನು ಈಗಾಗಲೇ ಹಲವೆಡೆ ಪ್ರದರ್ಶನ ಮಾಡಿದ್ದಾರೆ. ಇವರಂತೆ ಇವರು ಮಗಳು ಕಾಂಚನಗಂಗಾ ಕೂಡ ಯೋಗ ಸಾಧನೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುವ ಕಾಂಚನಗಂಗಾ ಅಂತರಾಷ್ಟ್ರೀಯ ಯೋಗ ಶಿಕ್ಷಕಿಯಾಗಿದ್ದಾರೆ. ಇವರ ಸಾಧನೆಗೆ ಪ್ರಭಾಸತೀಶ್ ಅವರ ಸಾಧನೆಯೇ ಪ್ರೇರಣೆಯಾಗಿದೆ ಎಂದರೆ ತಪ್ಪಾಗಲಾರದು.
ಇತ್ತೀಚಿನ ದಿನಗಳಲ್ಲಿ ಒತ್ತಡದ ಬದುಕಿನತ್ತ ಸಾಗುತ್ತಿರುವ ಜನರು, ಒತ್ತಡ ಬದುಕೇ ಸಾಮಾನ್ಯ ಬದುಕಾಗಿದೆ ಎಂಬಂತೆ ಬದುಕನ್ನು ಸ್ವೀಕರಿಸಿದ್ದಾರೆ. ಆದರೆ ಈ ಬದುಕು ಇದೇ ರೀತಿ ಹೀಗೆ ಮುಂದುವರೆಯುವುದೇ ಆದರೆ ಎಲ್ಲರಲ್ಲೂ ಕ್ರಮೇಣ ಒತ್ತಡದಿಂದ ಸಣ್ಣಪುಟ್ಟ ತಲೆದೋರುವ ಸಮಸ್ಯೆಯು ಆಸಿಡಿಟಿಯಿಂದ ಪ್ರಾರಂಭವಾಗಿ ನಂತರ ಇದು ಸಕ್ಕರೆ ಖಾಯಿಲೆಯಿಂದ ಶುರುವಾಗಿ ಇನ್ನಿತರೇ ಖಾಯಿಲೆಗೆ ಒಳಗಾಗಿ ಒಂದೊಂದಾಗಿ ಆರೋಗ್ಯದ ಮೇಲೆ ಹೆಚ್ಚು ದುಷ್ಪರಿಣಾಮ ಬೀರುತ್ತಾ ಆರೋಗ್ಯ ಕ್ಷೀಣಿಸುತ್ತಾ ಹೋಗುತ್ತದೆ. ಆದ್ದರಿಂದ ಯೋಗ ಜೀವನದಿಂದ ಬರುವ ಎಲ್ಲಾ ರೀತಿಯ ಖಾಯಿಲೆಯನ್ನು ದೂರವಿಡಲು ಸಹಕಾರಿಯಾಗುವ ಜೊತೆಗೆ, ಇಂದಿನ ಒತ್ತಡದ ಜೀವನ ಶೈಲಿಗೆ ಯೋಗ ಮತ್ತು ಯೋಗ ಶಿಕ್ಷಣ ಪ್ರತಿಯೊಬ್ಬರಿಗೂ ಅತ್ಯವಶ್ಯಕವಾಗಿದೆ ಎಂಬುದು ಪ್ರಭಾಸತೀಶ್ ಅವರ ನಿಲುವುವಾಗಿದೆ.
ಅವರ ಈ ಹೆಮ್ಮೆಯ ಸಾಧನೆ ಮತ್ತು ಇವರ ಯೋಗ ಸೇವೆಯ ಭಾಗ್ಯ ಎಲ್ಲರಿಗೂ ಲಭಿಸಲಿ ಎಂಬುದೇ ಮೈಸೂರು ಮಿರರ್ ಹಾರೈಕೆ.
ಪ್ರಭಾಸತೀಶ್, ಯೋಗಮಾಸ್ಟರ್, ಮನು ಅಷ್ಟಾಂಗ ಯೋಗ ಮಂದಿರ, ಮೈಸೂರು. ಮೊ:9620195250