ಚಾಮರಾಜನಗರ:  ಅತಿಯಾದ ಮೊಬೈಲ್ ಬಳಕೆ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಮತ್ತು  ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಎಂದು ಸಿಮ್ಕಾನ್ ಫೌಂಡೇಶನ್ ನ ಯೋಜನಾಧಿಕಾರಿ “ಬಸವರತ್ನ ರಾಷ್ಟ್ರ ಪ್ರಶಸ್ತಿ ಪುರಸ್ಕೃತ” ರಾಜೇಶ್ ನಾಯಕ ಜಿ ಆರ್ ಅಭಿಪ್ರಾಯ ಪಟ್ಟರು.
ಮರಿಯಾಲ ಗ್ರಾಮದ ಮುರುಘ ರಾಜೇಂದ್ರ ವಿದ್ಯಾಸಂಸ್ಥೆಯಲ್ಲಿ ಸಹೃದಯಿ ಫೌಂಡೇಶನ್ ಮತ್ತು ಬ್ಲ್ಯಾಕ್ & ವೈಟ್ ಫೌಂಡೇಶನ್ ವತಿಯಿಂದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರಿಗೆ ಆಯೋಜಿಸಿದ “ಮೊಬೈಲ್ ಮತ್ತು ಸಾಮಾಜಿಕ ಜಾಲತಾಣದ ದುಷ್ಪರಿಣಾಮ ಹಾಗೂ ವೈಜ್ಞಾನಿಕ ಬಳಕೆ ಜಾಗೃತಿ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ಅತಿಯಾದ ಮೊಬೈಲ್ ಬಳಕೆ ವ್ಯಸನವಾಗಿ ಮಾರ್ಪಡುತ್ತದೆ. ಇದರಿಂದ ಪ್ರತಿ ಮಾಹಿತಿಯನ್ನು ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿ, ಇದೇ ನಿಜವೆಂದು ಭ್ರಮಿಸುವಂತೆ ಮಾಡುತ್ತದೆ. ಇದರಿಂದ ಮನುಷ್ಯ ” ಇನ್ಪುಟ್ ಡಿವೈಸ್ ” ನಂತೆ ವರ್ತನೆ ಬಳಸಿಕೊಳ್ಳುವ ಸ್ಥಿತಿ ಬಂದೊದಗಲಿದೆ. ಮುಂದೆ ಅವಶ್ಯಕತೆ ಇಲ್ಲದಿದ್ದರೂ ಮೊಬೈಲ್ ದೇಹದ ಭಾಗದಂತೆ ಒಪ್ಪಿಕೊಳ್ಳುವಂತೆ ಮನುಕುಲವನ್ನು ಕಾಡಲಿದೆ ಎಂದು ವಿವರಿಸಿದರು.


ಕೋವಿಡ್ 19 ನಂತರ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಆನ್ ಲೈನ್ ತರಗತಿಗಳು ಪ್ರಾರಂಭವಾಗಿದ್ದು. ಮಕ್ಕಳು ಹೆಚ್ಚಿನ ಕಾಲವನ್ನು ಮೊಬೈಲ್ ಕಳೆಯುವುದ್ದರಿಂದ, ಮಕ್ಕಳು ಮೊಬೈಲ್ ಗೆ ವ್ಯಸನರಾಗದಂತೆ ಪೋಷಕರು ಹೆಚ್ಚಿನ ನಿಗವಹಿಸಬೇಕಾಗಿದೆ. ಇಂದಿನ ಸಾಮಾಜಿಕ ಜಾಲತಾಣ ಉಪಯೋಗದ ಜೊತೆಗೆ ಅಪಾಯಕಾರಿಯು ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಚಿತ್ರ ವೀಕ್ಷಣೆ  ಮಾಡುವುದು, ಬ್ಯಾಂಕ್ ಖಾತೆಗಳನ್ನು ಹ್ಯಾಕ್ ಮಾಡುವುದು, ಮೊಬೈಲ್ ನಲ್ಲಿ ಮಾತನಾಡುತ್ತಾ ವಾಹನ ಚಾಲನೆ ನಡೆಸಿ ಅಪಘಾತಗಳಿಗೆ ಕಾರಣವಾಗುವುದು ಮುಂತಾದ ಘಟನೆಗಳು ಸಮಾಜದ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತವೆ.


ಸೆಲ್ಪಿ ತೆಗೆಯುವ ಹುಚ್ಚಿನಲ್ಲಿ ಬಹಳಷ್ಟು ಮಂದಿ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದು. ಮೊಬೈಲ್ ಟವರ್ ಬೇಕಾಬಿಟ್ಟಿ ಅಳವಡಿಸುತ್ತಿರುವ ಕಾರಣ ಇದು ಪರಿಸರ ಮತ್ತು ಪ್ರಾಣಿ ಪಕ್ಷಿಗಳ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಟವರ್ ಅಳವಡಿಕೆ ಕುರಿತು ಸಾಕಷ್ಟು ನಿಯಮಗಳಿದ್ದು ಇವುಗಳ ಪಾಲನೆಯಾಗುತ್ತಿಲ್ಲ. ಈ ಕುರಿತು ಜನಸಾಮಾನ್ಯರಿಗೆ ವಿಷಯದ ಅರಿವು ಇಲ್ಲ ಈ ಕುರಿತು ಪ್ರತಿಯೊಬ್ಬರೂ ಜಾಗೃತಿ ಮೂಡಿಸಿ ಕೊಳ್ಳಬೇಕು ಎಂದುರು.
 ಈ ಸಂದರ್ಬದಲ್ಲಿ ಪ್ರಾಂಶುಪಾಲರಾದ ಮಹದೇವಸ್ವಾಮಿ, ಬ್ಲ್ಯಾಕ್ & ವೈಟ್ ಫೌಂಡೇಶನ್ ಅಧ್ಯಕ್ಷರಾದ ಶಾಂತರಾಜ್ ಕೆಸ್ತೂರು, ಮಹೇಶ್, ಸೈಕಲ್ ಪ್ಯೂರ್ ಅಗರಬತ್ತಿ ಗುರುಮಲ್ಲಪ್ಪ, ವಿರುಪಾಕ್ಷ, ಕೆ.ಸಿ.ಮಹೇಂದ್ರ ನಿರಂಜನ್, ಅಶೋಕ, ಶಿವಶಂಕರ, ಎಂ.ಆರ್.ಸ್ವಾಮಿ ,  ಹಾಗೂ ವಿದ್ಯಾರ್ಥಿಗಳು ಸಿಬ್ಬಂದಿವರ್ಗದವರು ಹಾಜರಿದ್ದರು.