ಮೈಸೂರು: ಕೋವಿಡ್ -19 ಸಂಕಷ್ಟದ ಸಮಯದಲ್ಲಿ ಕೇಂದ್ರ ಸರ್ಕಾರ ಪಿ.ಎಂ.ಜಿ.ಕೆ.ಎ.ವೈ ಯೋಜನೆಯಡಿ ಅಂತ್ಯೊದಯ ಪಡಿತರ ಚೀಟಿ, ಆದ್ಯತಾ ಪಡಿತರ ಚೀಟಿಯ ಪ್ರತಿ ಸದ್ಯಸರಿಗೆ ಮೇ ತಿಂಗಳಿಗೆ 5 ಕೆ ಜಿ ಅಕ್ಕಿಯನ್ನು ಹೆಚ್ಚುವರಿ ಬಿಡುಗಡೆ ಮಾಡಿದೆ ಎಂದು ಆಹಾರ, ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕರಾದ ಪಿ.ಶಿವಣ್ಣ ಅವರು ತಿಳಿಸಿದ್ದಾರೆ.
ಮೈಸೂರು ಜಿಲ್ಲೆಯಲ್ಲಿ 50122 ಎಎವೈ ಪಡಿತರ ಚೀಟಿಗಳು , 659560 ಬಿಪಿಎಲ್ ಪಡಿತರ ಚೀಟಿಗಳು ಮತ್ತು 32511 ಆದ್ಯತೇತರ ಪಡಿತರ ಚೀಟಿಗಳಿದ್ದು, ಮೇ ತಿಂಗಳಿಗೆ ಅಕ್ಕಿಯನ್ನು 48406.28 ಕ್ವಿಂಟಾಲ್ , ರಾಗಿಯನ್ನು 71353.92 ಕ್ವಿಂಟಾಲ್ ಮತ್ತು ಗೋಧಿಯನ್ನು 13191.20 ಕ್ವಿಂಟಾಲ್ ಬಿಡುಗಡೆ ಮಾಡಲಾಗಿದೆ.
ಹೊಸದಾಗಿ ಬಿ.ಪಿ.ಎಲ್ ಪಡಿತರ ಚೀಟಿ ಕೋರಿ ಸಲ್ಲಿಕೆಯಾಗಿರುವ ಕಾರ್ಡುದಾರರಿಗೆ ತಲಾ 10 ಕೆ.ಜಿ ಯಂತೆ ಉಚಿತವಾಗಿ ಅಕ್ಕಿ ವಿತರಿಸಲಾಗುವುದು. ಬೇರೆ ಯಾವುದೇ ಪಡಿತರ ಚೀಟಿಯಲ್ಲಿ ಕಾರ್ಡುದಾರರ ಹೆಸರು ಇಲ್ಲದವರಿಗೆ ಮಾತ್ರ ಪಡಿತರ ವಿತರಿಸಲಾಗುವುದು. ಕಾರ್ಡುದಾರರುತಮ್ಮ ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು ಹಾಗೂ ಹೊಸದಾಗಿ ಎ.ಪಿ.ಎಲ್ ಪಡಿತರ ಚೀಟಿ ಕೋರಿ ಸಲ್ಲಿಕೆಯಾಗಿರುವ ಕಾರ್ಡುದಾರರಿಗೆ 10 ಕೆ.ಜಿ ಅಕ್ಕಿಯನ್ನು ಪ್ರತಿ ಕೆ.ಜಿ ಗೆ ರೂ.15 ರಂತೆ ವಿತರಣೆ ಮಾಡಲಾಗುವುದು.
ಅಂತ್ಯೋದಯ ಪಡಿತರ ಚೀಟಿ ಪ್ರತಿ ಪಡಿತರ ಚೀಟಿಗೆ 15 ಕೆ.ಜಿ ಅಕ್ಕಿ ಮತ್ತು 20 ಕೆ.ಜಿ ರಾಗಿಯನ್ನು ನೀಡುವುದಲ್ಲದೆ, ಪಿಎಂಜಿಕೆಎವೈ ಯೋಜನೆಯಡಿ ಪ್ರತಿ ಸದಸ್ಯರಿಗೆ 5 ಕೆ.ಜಿ ಅಕ್ಕಿ ಉಚಿತವಾಗಿ ನೀಡಲಾಗುವುದು.
ಆದ್ಯತಾ ಪಡಿತರ ಚೀಟಿ (ಬಿ ಪಿ ಎಲ್ ) ಗೆ ಪ್ರತಿ ಸದಸ್ಯನಿಗೆ 02 ಕೆ.ಜಿ ಅಕ್ಕಿ ಮತ್ತು 3 ಕೆ.ಜಿ ರಾಗಿಯನ್ನು ಮತ್ತು ಪ್ರತಿ ಪಡಿತರ ಚೀಟಿಗೆ 2 ಕೆ.ಜಿ ಗೋಧಿ ಮತ್ತು ಪಿಎಂಜಿಕೆಎವೈ ಯೋಜನೆಯಡಿ ಪ್ರತಿ ಸದಸ್ಯರಿಗೆ 5 ಕೆ.ಜಿ ಅಕ್ಕಿ ಉಚಿತವಾಗಿ ನೀಡಲಾಗುವುದು. ಆದ್ಯತೇತರ ಪಡಿತರ ಚೀಟಿಗೆ ಏಕ ವ್ಯಕ್ತಿ ಪಡಿತರ ಚೀಟಿಗೆ 5 ಕೆ.ಜಿ ಅಕ್ಕಿ ಎರಡು ಮತ್ತು ಮೇಲ್ಪಟ್ಟ ಸದಸ್ಯರಿರುವ ಪಡಿತರ ಚೀಟಿಗೆ 10 ಕೆ.ಜಿ ಅಕ್ಕಿಯನ್ನು ಪ್ರತಿ ಕೆ.ಜಿ ಗೆ ರೂ.15 ರಂತೆ ವಿತರಣೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

By admin