ಚಾಮರಾಜನಗರ: ತಾಲೂಕಿನ ಪ್ರಸಿದ್ದ ಯಾತ್ರಾಸ್ಥಳ ಕನಕಗಿರಿಯಲ್ಲಿ ಏ.೨೭ ರಿಂದ ಮೇ ೫ ರವರಗೆ ನಡೆಯುವ ಅತಿಶಯ ಮಹೋತ್ಸವದ ಸಂಬಂಧ ಪೂಜಾಕಾರ್ಯಕ್ರಮಗಳ ಸಾನಿದ್ಯ ವಹಿಸಲು ಜೈನಕ್ಷೇತ್ರ ಶ್ರವಣಬೆಳಗೊಳದಿಂದ ಮೈಸೂರು ಮಾರ್ಗ ಸೋಮವಾರ ಚಾಮರಾಜನಗರ ಜಿಲ್ಲೆಯ ಕನಕಗಿರಿಗೆ ಆಗಮಿಸಿದ ಮುನಿಶ್ರೀ ಅಮೋಘಕೀರ್ತಿ ಮತ್ತು ಅಮರಕೀರ್ತಿ ಮಹಾರಾಜರನ್ನು ಕ್ಷೇತ್ರದ ಭುವನಕೀರ್ತಿ ಭಟ್ಟಾರಕಸ್ವಾಮೀಜಿ ಅದ್ದೂರಿಯಾಗಿ ಸ್ವಾಗತಿಸಿ ಬರಮಾಡಿಕೊಂಡರು.
ಇದೇವೇಳೆ ವಿಜಯಪಾರ್ಶ್ವನಾಥ ಸ್ವಾಮೀಜಿ ಮೂರ್ತಿಗೆ ಅಭಿಷೇಕ ನೆರವೇರಿಸಲಾಯಿತು.
ಪೂರ್ಣಕುಂಭ, ವಾದ್ಯಗೋಷ್ಠಿ ಜತೆ ಬರಮಾಡಿಕೊಂಡು ಮುನಿಶ್ರೀಗಳಿಗೆ ಪಾದಪೂಜೆ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಕನಕಗಿರಿ ಅತಿಶಯ ಮಹೋತ್ಸವ ಸಮಿತಿ ಪದಾಧಿಕಾರಿಗಳು ಭಾಗವಹಿಸಿದ್ದರು.