ಸರಗೂರು: ಕೋವಿಡ್ ನಡುವೆಯೂ ಇತಿಹಾಸ ಪ್ರಸಿದ್ಧ ತಾಲ್ಲೂಕಿನ ಭೀಮನಕೊಲ್ಲಿ ಮಹದೇಶ್ವರ ಜಾತ್ರಾ ಮಹೋತ್ಸವವನ್ನು ಸರಳವಾಗಿ ಆಚರಿಸಲು ದೇವಸ್ಥಾನ ಸಮಿತಿ, ತಾಲ್ಲೂಕು ಆಡಳಿತ ಸಜ್ಜಾಗಿದೆ. ಮಾ.1ರಿಂದ ಮೂರು ದಿನಗಳು ಜಾತ್ರಾ ಮಹೋತ್ಸವ ನಡೆಯಲಿದ್ದು, ಕೋವಿಡ್ನಿಂದಾಗಿ ಜಾತ್ರಾ ಮಹೋತ್ಸವವನ್ನು ಸರಳವಾಗಿ ಆಚರಿಸಲು ಕ್ರಮವಹಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ದೇವರಾಜು ತಿಳಿಸಿದ್ದಾರೆ.
ಮಾ.1ರ ರಾತ್ರಿ 1ಕ್ಕೆ ದೇವರ ಕೋಂಡೋತ್ಸವ, ವೀರಗಾಸೆ ಕಲೆಯೊಂದಿಗೆ ಮಾ.2ರಂದು ಬೆಳಗ್ಗೆ 10ಕ್ಕೆ ರಥೋತ್ಸವ ಇರಲಿದ್ದು, 3ರ ಬುಧವಾರ ಮಧ್ಯರಾತ್ರಿ 2ಕ್ಕೆ ಕಬಿನಿ ಜಲಾಶಯದಲ್ಲಿ ದೇವರ ತೆಪ್ಪೋತ್ಸವ ನಡೆಯಲಿದೆ. ಜಾತ್ರೆಯಲ್ಲಿ ಆಕರ್ಷಣೀಯ ಕೇಂದ್ರ ಬಿಂದುವಾದ ದನಗಳ ಪ್ರದರ್ಶನ ಈ ಬಾರಿ ಇರುವುದಿಲ್ಲ. ಒಂದು ದಿನಕ್ಕೆ ಸೀಮಿತವಾದ ಮನರಂಜನಾ ಕಾರ್ಯಕ್ರಮವನ್ನು ಮಾ.3ರಂದು ರಾತ್ರಿ 9ಕ್ಕೆ ಪರಿಣಿತ ತಂಡದಿಂದ ನಡೆಸಲಾಗುವುದು. ಎಂದಿನಂತೆ ಅಂಗಡಿ ಮುಗ್ಗಟ್ಟುಗಳು ಇರಲಿವೆ ಎಂದರು.
ಪೊಲೀಸ್ ಬಂದೋಬಸ್ತ್: ಕೋವಿಡ್ ಹಿನ್ನೆಲೆಯಲ್ಲಿ ಭಕ್ತರಲ್ಲಿ ಸಾಮಾಜಿಕ ಅಂತರ ಹಾಗೂ ಜಾತ್ರಾ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಬೀಚನಹಳ್ಳಿ ಪೊಲೀಸ್ ಠಾಣೆ ಪಿಎಸ್ಐ ರಾಮಚಂದ್ರನಾಯಕ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಇರಲಿದೆ. ಇದಲ್ಲದೆ ತಾಲ್ಲೂಕು ಆರೋಗ್ಯಾಧಿಕಾರಿ ಟಿ.ರವಿಕುಮಾರ್ ಅವರ ನೇತೃತ್ವದಲ್ಲಿ ಕೋವಿಡ್ ತಪಾಸಣೆ ಏರ್ಪಡಿಸಲಾಗಿದ್ದು, ಸ್ಯಾನೀಟೈಸರ್ ವ್ಯವಸ್ಥೆ ಇರಲಿದೆ ಎಂದು ಸಮಿತಿಯ ಕಾರ್ಯದಶರ್ಿ ದೇವದಾಸ್ ತಿಳಿಸಿದರು.

 

 

By admin