ಎಚ್.ಡಿ.ಕೋಟೆ: ತಾಲೂಕಿನ ಮಾರ್ಚಳ್ಳಿ, ದೆಗ್ಗಲ್ಹುಂಡಿ ಗ್ರಾಮದಲ್ಲಿ ಬುಧವಾರ ಗ್ರಾಮ ದೇವತೆ ಮಾರಮ್ಮನವರ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.
ಜಾತ್ರಾ ಮಹೋತ್ಸವ ಅಂಗವಾಗಿ ಅಮ್ಮನವರಿಗೆ ಗುಡಿ ಚಪ್ಪರ ಕಟ್ಟಿ, ವಿವಿಧ ಬಗೆಯ ಹೂವಿನಿಂದ ಅಲಂಕಾರ ಮಾಡಲಾಗಿತ್ತು. ದೇವರ ಗುಡಿಯನ್ನು ಹಸಿರು ತೋರಣದಿಂದ ಮಧುವಣಗಿತ್ತಿಯಂತೆ ಸಿಂಗಾರಿಸಲಾಗಿತ್ತು. ದೇವಸ್ಥಾನಕ್ಕೆ ಸುಣ್ಣ, ಬಣ್ಣ ಬಳಿದು, ದೇವತೆಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಭಕ್ತರು ಈರುಳ್ಳಿ ಸರವನ್ನು ಹೊತ್ತು ತಂದು ಹರಕೆ ತೀರಿಸಿದರು. ನಂತರ ಮಹಾಮಂಗಳಾರತಿ ಮಾಡಲಾಯಿತು. ಇದಲ್ಲದೆ ಭಕ್ತರು ದೇವತೆಗೆ ನಮಿಸಿದರು. ಬಸವೇಶ್ವರ ದೇವರಿಗೂ ವಿಶೇಷ ಪೂಜೆ ಸಲ್ಲಿಸಿದರು. ಮಾರ್ಚಳ್ಳಿ, ದೆಗ್ಗಲ್ಹುಂಡಿ ಗ್ರಾಮಸ್ಥರು ಹಾಜರಿದ್ದರು.

By admin