ಮೈಸೂರು: ನರಸಿಂಹ ರಾಜ ಕ್ಷೇತ್ರದ ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ಉಚಿತವಾಗಿ ವಾರ್ಡ್ ನಂಬರ್ 35 ರ ವ್ಯಾಪ್ತಿಯ ರಾಘವೇಂದ್ರ ನಗರ ಕಾಲೋನಿಯಲ್ಲಿರುವ ಪ್ರತಿ ಮನೆಗೂ ಮೆಡಿಕಲ್ ಕಿಟ್ ಗಳನ್ನು ವಿತರಿಸಲಾಯಿತು.

ಈ ಸಂದರ್ಭ ನಗರ ಭಾ.ಜ.ಪ. ಪ್ರಧಾನ ಕಾರ್ಯದರ್ಶಿ ಗಿರೀಧರ್ ಮಾತನಾಡಿ ನರಸಿಂಹರಾಜ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಕೊರೊನಾ ಸೋಂಕಿತರಿದ್ದು,  ಕೊರೊನಾ ನಿರ್ಮೂಲನೆ ಮಾಡಲು ಕೈಜೋಡಿಸುವುದು ಈ ಕ್ಷೇತ್ರದ ಪ್ರತಿಯೊಬ್ಬ ನಾಗರಿಕರ ಕರ್ತವ್ಯ. ಈ ದೃಷ್ಟಿಯಿಂದ ಕ್ಷೇತ್ರದ ಯಾರೊಬ್ಬರು ಉಪವಾಸದಿಂದ ಇರಬಾರದು ಎಂಬಾ ನಿಟ್ಟಿನಿಂದ ಎಲ್ಲ ಮನೆಮನೆಗೆ ಆಹಾರ ಪಡಿತರ ವಿತರಣೆ ಜೊತೆಗೆ ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ ಎಂಬ ನಿಟ್ಟಿನಲ್ಲಿ ಪ್ರತಿ ಮನೆಗೂ ಮೆಡಿಕಲ್ ಕಿಟ್ ವಿತರಣೆ ಮಾಡಲಾಗುತ್ತಿದೆ ಎಂದರು.

ನಗರ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ  ಜೋಗಿ ಮಂಜು ಮಾತನಾಡಿ ಈ ವ್ಯಾಪ್ತಿಯಲ್ಲಿ ಅತಿಹೆಚ್ಚು ಅಲ್ಪಸಂಖ್ಯಾತ ರು ಹಾಗೂ ಹಿಂದುಳಿದ ವರ್ಗದವರು ವಾಸಿಸುತ್ತಿದ್ದು, ಮೈಸೂರು ನಗರ ಕೊರೊನಾ ಮುಕ್ತ ಮಾಡಲು ಇಂತಹ ಜಾಗಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಗಳನ್ನು ಅತಿಹೆಚ್ಚು ಮಾಡಿ ಮೈಸೂರು ನಗರವನ್ನು ಕೊರೊನಾ ಮುಕ್ತ ವನ್ನಾಗಿ ಮಾಡಲು ಯುವಕರು ಪಣ ತೋಡಬೇಕು ಎಂದು ಹೇಳಿದರು.

ಈ ಸಂದರ್ಭ ಆನಂದ್, ಗೋಪಾಲ್, ಮಣಿರತ್ನಂ, ಪ್ರಸಾದ್, ವಿಜಯಕುಮಾರ್ ಮುಂತಾದವರು ಇದ್ದರು.

By admin