ಮೈಸೂರು, ಫೆಬ್ರವರಿ 08 – ರಮ್ಮನಹಳ್ಳಿ ಪಟ್ಟಣ ಪಂಚಾಯಿತಿ ವತಿಯಿಂದ 2021-22ನೇ ಸಾಲಿನ 24.10% ಮತ್ತು 7.25%ರ ಸ್ಥಳೀಯ ಸಂಸ್ಥೆಯ ನಿಧಿಯ ಅನುದಾನದಡಿ ಮನೆಯ ಮೇಲ್ಛಾನಣಿ ದುರಸ್ಥಿ ಖರೀದಿಗಾಗಿ ಸಹಾಯಧನ ನೀಡಲು ಅರ್ಹ ಫಲಾನುಭವಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ

ಆಸಕ್ತಿಯುಳ್ಳವರು 2022ರ ಫೆಬ್ರವರಿ 15ರ ಸಂಜೆ 4.30ರೊಳಗಾಗಿ ಅರ್ಹ ಫಲಾನುಭವಿಗಳು ದಾಖಲಾತಿಗಳನ್ನು ಸಲ್ಲಿಸಬೇಕು. ನಂತರ ಬರುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು ಎಂದು ರಮ್ಮನಹಳ್ಳಿ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.