ಹಾಸನ: ಕೋವಿಡ್-19 ಎರಡನೇ ಅಲೆಯು ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸೋಂಕಿನಿAದಾಗಿ ಕೆಲವು ಕುಟುಂಬಗಳಲ್ಲಿ ಎಲ್ಲಾ ಸದಸ್ಯರು ಸೋಂಕಿಗೆ ತುತ್ತಾಗುತ್ತಿರುವ ಕಾರಣ ಅಂತಹ ಕುಟುಂಬಗಳ ಮಕ್ಕಳು ಕುಟುಂಬದಿAದ ದೂರವಿರಬೇಕಾದ ಹಾಗೂ ಮಾನಸಿಕ ಖಿನ್ನತೆಗೆ ಒಳಗಾಗುವ ಸಂದರ್ಭ ಎದುರಾಗುವ ಸಾಧ್ಯತೆಯಿದೆ.
ಸಂತ್ರಸ್ತ ಮಕ್ಕಳು ಹಾಗು ವಿವಿಧ ರೀತಿಯ ದೌರ್ಜನ್ಯ, ಕಿರುಕುಳ, ಅಸಹಾಯಕತೆಯಿಂದ ಬಳಲುವ ಮಕ್ಕಳಿಗೆ ನೆರವು ನೀಡಲು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸಹಾಯವಾಣಿ ಸ್ಥಾಪಿಸಿದೆ. ದೂ. ಸಂ 080-47181177 ಗೆ ಕರೆ ಮಾಡಿ ನೆರವು ಪಡೆಯಬಹುದು ಹಾಗೂ ಸಂತ್ರಸ್ತ ಮಕ್ಕಳ ಪಾಲನೆ- ರಕ್ಷಣೆಯ ಅವಶ್ಯಕತೆ ಇದ್ದಾಗ 1098 ಗೆ ಸಂಪರ್ಕಿಸಬಹುದಾಗಿದೆ. ಕೋವಿಡ್ 19 ನಿಂದ ಮಕ್ಕಳಲ್ಲಿ ಆತಂಕ ಖಿನ್ನತೆ ಇತರೆ ಮಾನಸಿಕ ಸಮಸ್ಯೆಗಳು ಕಂಡು ಬಂದರೆ ಆಪ್ತಸಮಾಲೋಚನೆ ಪಡೆಯಲು ಮಕ್ಕಳು ಅಥವಾ ಮಕ್ಕಳ ಪೋಷಕರು ಮಕ್ಕಳ ಉಚಿತ ಮತ್ತು ಸಮಾಲೋಚನೆ ಸಹಾಯವಾಣಿ 14499 ಈ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ. ಈ ಸಂಖ್ಯೆಯು ರಜಾ ದಿನಗಳನ್ನು ಹೊರತುಪಡಿಸಿ ಉಳಿದೆಲ್ಲ ದಿನಗಳಲ್ಲಿ ಬೆಳಿಗ್ಗೆ 8 ರಿಂದ ಸಂಜೆ 8 ಗಂಟೆಯವರೆಗೆ ಕಾರ್ಯ ನಿರ್ವಹಿಸುತ್ತದೆ ಹಾಗೂ ಸಂತ್ರಸ್ತ ಮಕ್ಕಳು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಅಥವಾ ಸಿಬ್ಬಂದಿಗಳ ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು 7019037937, ರಕ್ಷಣಾಧಿಕಾರಿಗಳು (ಸಾಂಸ್ಥಿಕ) 7353976372, ರಕ್ಷಣಾಧಿಕಾರಿಗಳು (ಅಸಾಂಸ್ಥಿಕ) 9986087274, ಆಪ್ತ ಸಮಾಲೋಚಕರು 9964564176, ಸಮಾಜ ಕಾರ್ಯಕರ್ತರು 9945963649/94827564423, ಕ್ಷೇತ್ರ ಕಾರ್ಯಕರ್ತರು 9945963649/94827564423, ಅಧ್ಯಕ್ಷರು ಮಕ್ಕಳ ಕಲ್ಯಾಣ ಸಮಿತಿ ಹಾಸನ 9241669497 ಇವರನ್ನು ಸಂಪರ್ಕಿಸಬಹುದಾಗಿದೆ.