ಮಂಡ್ಯ: ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ವತಿಯಿಂದ ಮಂಡ್ಯ ತಾಲ್ಲೂಕಿನ ಉಮ್ಮಡಹಳ್ಳಿ  ಒಕ್ಕಲಿಗರ ಸಮುದಾಯ ಭವನ, ಒಕ್ಕಲಿಗರ ವಿದ್ಯಾರ್ಥಿನಿಲಯ,ಕೋವಿಡ್ ಕೇರ್ ಸೆಂಟರ್ – ನಲ್ಲಿರುವ ಕೋವಿಡ್ ಸೋಂಕಿತರಿಗೆ ಹೆಲ್ತ್ ಕಿಟ್ ನ್ನು ವಿತರಿಸಲಾಯಿತು. ಇದೊಂದು ರಾಜ್ಯಕ್ಕೆ  ಮಾದರಿಯಾಗಬಲ್ಲ ವಿನೂತನ ಹೆಜ್ಜೆ ಎಂಬ ಭರವಸೆ ಜಿಲ್ಲಾಡಳಿತದ್ದು, ಈ ಮೂಲಕ ಸೋಂಕಿತರಲ್ಲಿ ಕೋವಿಡ್ ನ್ನು ಹಿಮ್ಮೆಟಿಸುವ ಚೈತನ್ಯ ತುಂಬಿದೆ. ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟಲು ಹಾಗೂ ಸೋಂಕಿತರ ಆರೋಗ್ಯದ ದೃಷ್ಟಿಯಿಂದ ಇಡೀ ರಾಜ್ಯದಲ್ಲಿ ಮಂಡ್ಯ ಜಿಲ್ಲೆ ಹೆಲ್ತ್ ಕಿಟ್ ನೀಡುತ್ತಿರುವುದರಲ್ಲಿ  ಮೊದಲು ಎಂಬುವುದು ಗಮನಾರ್ಹವಾಗಿದೆ. ಈ ಹೆಲ್ತ್ ಕಿಟ್ ನಲ್ಲಿ ಒಂದು ಸೆಟ್ ಬೆಡ್, ಬೆಡ್ ಶೀಟ್, ಬಕೆಟ್, ಸ್ಯಾನಿಟೈಸರ್ , 7 ದಿನಕ್ಕೆ ಮಾಸ್ಕ್ ಜೊತೆಗೆ ಇನ್ನಿತರ ಅವಶ್ಯಕ ವಸ್ತುಗಳನ್ನು ನೀಡಲಾಗುತ್ತಿದ್ದು  ಇದರ ಮೂಲಕ ಸೋಂಕಿತರ ಆರೋಗ್ಯದ ಜೊತೆ, ಕೋವಿಡ್ ಹರಡುವುದನ್ನು ತಡೆಗಟ್ಟಲು ಸಹಕಾರಿಯಾಗಿದೆ.

By admin