
ಚಾಮರಾಜನಗರ: ತಾಲೂಕಿನ ಕೋಡಿಮೋಳೆ ಗ್ರಾಮದ ಭಗತ್‌ಸಿಂಗ್ ಯುವಸೇನೆ ವತಿಯಿಂದ ಚಾಮರಾಜನಗರದಲ್ಲಿರುವ ಮೂಡಲದ್ವನಿ ವೃದ್ಧಾಶ್ರಮ ಟ್ರಸ್ಟ್‌ನಲ್ಲಿರುವ ವಯೋವೃದ್ಧರಿಗೆ ಅನ್ನದಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಭಗತ್‌ಸಿಂಗ್ ಯುವಸೇನೆ ಸದಸ್ಯ ಮಲ್ಲೇಶ್ ಅವರ ಹುಟ್ಟುಹಬ್ಬದ ಅಂಗವಾಗಿ ಚಾಮರಾಜನಗರ ಮೂಡಲಧ್ವನಿ ವೃದ್ಧಾಶ್ರಮದ ೫೦ ಮಂದಿಗೆ ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ಯುವಸೇನೆ ಅಧ್ಯಕ್ಷ ಕಾಂತರಾಜ್, ಸಿ.ಎಸ್.ನಾಗರಾಜ್, ಯೋಗೇಶ್, ಹೇಮಂತ್ ಕುಮಾರ್, ಹರ್ಷ, ಮೂಡಲಧ್ವನಿ ಆಶ್ರಮದ ವ್ಯವಸ್ಥಾಪಕ ಶಂಕರ್, ಸಿಬ್ಬಂದಿ ಶಿಲ್ಪ, ಸಿದ್ದರಾಜು ಹಾಜರಿದ್ದರು.
