ಚಾಮರಾಜನಗರ: ಕನ್ನಡದ ವೀರ ನಾರಿ ಕಿತ್ತೂರು ರಾಣಿ ಚೆನ್ನಮ್ಮ .ಭಾರತೀಯ ಮಹಿಳೆಯರ ಅಭಿಮಾನದ ಮಹಿಳೆ. ಬ್ರಿಟಿಷರ ವಿರುದ್ಧ ಹೋರಾಡಿದ ಪ್ರಥಮ ಭಾರತೀಯ ವನಿತೆ ಎಂದು ಇನ್ನರ್ ವೀಲ್ ಸಂಸ್ಥೆಯ.ನಿಕಟ ಪೂರ್ವ ಅಧ್ಯಕ್ಷೆ ಲಕ್ಷ್ಮಿ ಶಿವಕುಮಾರ್ ರವರು ತಿಳಿಸಿದರು.

ಅವರು ನಗರದ ಜೈ ಹಿಂದ್ ಪ್ರತಿಷ್ಠಾನದ ಜೈ ಹಿಂದ್ ಕಟ್ಟೆಯಲ್ಲಿ ಋಗ್ವೇದಿ ಯೂತ್ ಕ್ಲಬ್ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜನ್ಮದಿನ ಹಾಗೂ ವಿಜಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಜಾನ್ಸಿ ರಾಣಿ ಲಕ್ಷ್ಮೀಬಾಯಿ ರವರ ಹೋರಾಟಕ್ಕೂ ಮೊದಲೇ ಬ್ರಿಟಿಷರ ವಿರುದ್ಧ ಘರ್ಜಿಸಿದ ಮಹಾನ್ ಕನ್ನಡತಿ ಕಿತ್ತೂರು ಚೆನ್ನಮ್ಮ .

ಋಗ್ವೇದಿ ಯೂತ್ ಕ್ಲಬ್ ಎರಡು ದಿನಗಳ ಕಾಲ ಕಿತ್ತೂರು ರಾಣಿ ಚೆನ್ನಮ್ಮನವರ ವಿಜಯೋತ್ಸವದ ಕಾರ್ಯಕ್ರಮವನ್ನು ರೂಪಿಸಿರುವುದು ಮೆಚ್ಚುಗೆಯ ವಿಚಾರವೆಂದು ತಿಳಿಸಿದರು.

ಕಿತ್ತೂರು ರಾಣಿ ಚೆನ್ನಮ್ಮನ ಕುರಿತು ಮಾತನಾಡಿದ ಸಂಸ್ಕೃತಿ ಚಿಂತಕ ಸುರೇಶ್ ಎನ್ ಋಗ್ವೇದಿ ಮಾತನಾಡಿ ರಾಣಿ ಚೆನ್ನಮ್ಮಳ ಆತ್ಮ ಬಲಯುತವಾದದ್ದು .ಎಲ್ಲಾ ನೋವು ಸೋಲುಗಳ ನಡುವೆ ಸ್ವಾತಂತ್ರ್ಯಕ್ಕಾಗಿ, ತನ್ನ ನಾಡಿಗಾಗಿ ನಿರಂತರವಾಗಿ ಹೋರಾಡಿದ ಇವರ ಜೀವನ ಸಾಧನೆ ಅಧ್ಯಯನ ಒಂದು ಪುಣ್ಯದ ಕಾರ್ಯವಾಗಿದೆ. ಭಾರತದ ಇತಿಹಾಸದಲ್ಲಿ ರಾಣಿ ಚೆನ್ನಮ್ಮನ ಹೆಸರು ಅಜರಾಮರ. ಆಕೆಯ ದಿವ್ಯ ನೆನಪು ಭಾರತೀಯ ಮಹಿಳೆಯರಿಗೆ ಆತ್ಮಗೌರವವನ್ನು ತಂದಿದೆ ಎಂದು ತಿಳಿಸಿದರು.

ಶಾರದಾ ಭಜನಾ ಮಂಡಳಿಯ ಶ್ರೀಮತಿ ಮಾಲ ಮಾತನಾಡಿ ಕಿತ್ತೂರು ರಾಣಿಯ ಬಗ್ಗೆ ಅವರ ವೀರ ಹೋರಾಟದ ಅನೇಕ ಜನಪದ ಸಾಹಿತ್ಯ ,ಹಾಡುಗಳು ,ಕೋಲಾಟ ವೀರ ಗೀತೆಗಳು ಅವರ ಬಗ್ಗೆ ಅಪಾರ ಮಾಹಿತಿ ನೀಡುತ್ತದೆ ಎಂದರು.

ಋಗ್ವೇದಿ ಯೂತ್ ಕ್ಲಬ್ ಅಧ್ಯಕ್ಷ ಶರಣ್ಯ ಎಸ್ ಋಗ್ವೇದಿ ಮಾತನಾಡಿ ಕಿತ್ತೂರು ಮನೆತನ ಸುಪ್ರಸಿದ್ಧವಾದದ್ದು. ಬ್ರಿಟಿಷರ ಥ್ಯಾಕರೆಯನ್ನು ಕೊಂದ ದಿನ ಕಿತ್ತೂರಿನ ವಿಜಯೋತ್ಸವವಾಗಿದೆ.ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಯ ಮೂಲಕ ಕಿತ್ತೂರನ್ನು ವಶಪಡಿಸಿರುವ ಬ್ರಿಟಿಷರ ಆಸೆಗೆ ಸೋಲಿನ ಅನುಭವ ನೀಡಿದವರು ಕಿತ್ತೂರು ರಾಣಿ ಚೆನ್ನಮ್ಮ. ಈಕೆಯ ಧೈರ್ಯ, ಸಾಹಸ ,ಶಕ್ತಿ, ಹೋರಾಟದ ಮನೋಭಾವನೆ, ದೇಶಾಭಿಮಾನ ನಮ್ಮೆಲ್ಲರಿಗೂ ಸದಾ ಆದರ್ಶವಾಗಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಕುಸುಮ, ಶ್ರಾವ್ಯ ಋಗ್ವೇದಿ ಉಪಸ್ಥಿತರಿದ್ದರು.