ಚಾಮರಾಜನಗರ: ಸಮುದಾಯಭವನಗಳ ನಿರ್ಮಾಣಕ್ಕೆ ಹೆಚ್ಚು ಒತ್ತುಕೊಟ್ಟಂತೆ, ಅವುಗಳ ನಿರ್ವಹಣೆಗೂ ಗಮನಹರಿಸುವುದು ಸೂಕ್ತ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ತಿಳಿಸಿದರು.
ತಾಲೂಕಿನ ಭೋಗಾಪುರ ಗ್ರಾಮದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಶಾಸಕರ ಅನುದಾನ ಸೇರಿ ೩೦ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ಮಹರ್ಷಿ ವಾಲ್ಮೀಕಿ ನೂತನ ಸಮುದಾಯಭವನವನ್ನು ಉದ್ಘಾಟಿಸಿ ಮಾತನಾಡಿದರು.
ರಾಮಾಯಣದಂತಹ ಮಹಾನ್ ಕಾವ್ಯ ಬರೆದ ವಾಲ್ಮೀಕಿಮಹರ್ಷಿ ಹೆಸರಿನಲ್ಲಿ ಸುಸಜ್ಜಿತಭವನ ನಿರ್ಮಾಣವಾಗಿರುವುದು ಸಂತಸದ ವಿಚಾರ. ಗ್ರಾಮಸ್ಥರು ಸಮುದಾಯ ಭವನ ನಿರ್ವಹಣೆಯ ಬಗ್ಗೆ ಕಾಳಜಿವಹಿಸಬೇಕು. ಶಾಲಾಶೈಕ್ಷಣಿಕ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಕಾರ್ಯಕ್ರಮಗಳನ್ನು ಆಯೋಜನೆ ಮಾಡಬೇಕು. ಭವನ ಕೆಲವರ್ಷಗಳ ಹಿಂದೆಯೇ ಉದ್ಘಾಟನೆಗೊಳ್ಳಬೇಕಿತ್ತು. ಅನುದಾನದ ಕೊರತೆಯಿಂದ ಭವನದ ಕಾಮಗಾರಿವಿಳಂಬವಾಯಿತು. ಇನ್ನು ಕ್ಷೇತ್ರದ ಕೆಲಗ್ರಾಮಗಳಲ್ಲಿ ಭವನಗಳ ಕಾಮಗಾರಿ ನಡೆಯುತ್ತಿವೆ. ಅವುಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಕ್ರಮವಹಿಸಲಾಗುವುದು ಎಂದರು.
ಜಿಪಂ ಮಾಜಿಸದಸ್ಯ ಅರಕಲವಾಡಿಸೋಮನಾಯಕ ಮಾತನಾಡಿ, ಶಾಸಕರ ಅಭಿವೃದ್ದಿಪರ ಕಾಳಜಿ ಪರಿಣಾಮ ಕ್ಷೇತ್ರದ ಹಲಗ್ರಾಮಗಳಲ್ಲಿ ಸಮುದಾಯಭವನಗಳು, ಮೂಲಭೂತಸೌಕರ್ಯ ಕಲ್ಪಿಸುವ ಕಾಮಗಾರಿ ಜರುಗುತ್ತಿವೆ ಎಂದರು.
ಜಿಲ್ಲಾಎಸ್ಸಿ ಮೋರ್ಚಾ ಅಧ್ಯಕ್ಷ ಬಿಕಾಂ ಮಹದೇವನಾಯಕ ಮಾತನಾಡಿ, ಸಮುದಾಯದವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣಕೊಡಿಸುವ ಮೂಲಕ ಸಮಾಜದ ಸತ್ಪ್ರಜೆಗಳನ್ನಾಗಿ ಮಾಡಬೇಕು ಎಂದು ಮನವಿ ಮಾಡಿದರು.
ಮಾಜಿ,ಜಿ,ಪಂ ಸದಸ್ತ ಅರಕಲವಾಡಿ ಸೋಮನಾಯಕ ಗ್ರಾಪಂ ಉಪಾಧ್ಯಕ್ಷೆ ಪುಟ್ಟಗೌರಮ್ಮ, ಸದಸ್ಯರಾದ ಮಹೇಶ್, ರಾಜಮ್ಮ, ನಾಗಮ್ಮ, ನಾಗು, ಮುಖಂಡರಾದ ಎಪಿಎಂಸಿ ಮಾಜಿ ಅಧ್ಯಕ್ಷ ಡಿ.ನಾಗೇಂದ್ರ, ತಾಪಂ ಮಾಜಿಸದಸ್ಯ ಮಹಾಲಿಂಗು, ಮಧುಆಚಾರ್, ರಾಮಚಂದ್ರಯ್ಯ, ನಾಗನಾಯ್ಕ, ರಾಜೇಶ್, ರಾಜಗೋಪಾಲ್, ಕೆಲ್ಲಂಬಳ್ಳಿ ಸೋಮೇಶ್, ಮಹೇಶನಾಯ್ಕ, ನಾಗೇಂದ್ರ ಸೇರಿದಂತೆ ಗ್ರಾಮದ ಎಲ್ಲ ಸಮುದಾಯದ ಯಜಮಾನರು, ಗ್ರಾಮಸ್ಥರು,ಅಧಿಕಾರಿಗಳು ಹಾಜರಿದ್ದರು.
