ಬೆಂಗಳೂರು: ಸದಾಶಿವನಗರ ನಾಗಸೇನಾ ವಿದ್ಯಾಲಯದಲ್ಲಿ ಸಾಮಾಜಿಕ ಪರಿವರ್ತನೆಯ ಹರಿಕಾರ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 137ನೇ ಜಯಂತಿ ಪ್ರಯುಕ್ತ ರಿ ಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾದ್ಯಕ್ಷ ಡಾ.ಎಂ.ವೆಂಕಟಸ್ವಾಮಿ ಅವರು ನಾಲ್ವಡಿ ಕೃಷ್ಣರಾಜ ಒಡೆಯರ್ ಭಾವಚಿತ್ರಕ್ಕೆ  ಪುಷ್ಪ ನಮನ ಸಲ್ಲಿಸಿದರು.
ಇದೇ ವೇಳೆ ಡಾ. ಎಂ. ವೆಂಕಟಸ್ವಾಮಿ ರವರ ಅವರ 67ನೇ ಹುಟ್ಟುಹಬ್ಬದ ಪ್ರಯುಕ್ತ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕೊರೊನಾ ಸೇನಾನಿಗಳು, ಕೂಲಿ ಕಾರ್ಮಿಕರು, ಪೌರಕಾರ್ಮಿಕರು ಬಡವರಿಗೆ ದಿನಸಿ ಸಾಮಾಗ್ರಿಗಳ ಪಡಿತರ ಕಿಟ್ ವಿತರಣೆ ಮಾಡಲಾಗುತ್ತಿದೆ. ಸಾಂಕೇತಿಕವಾಗಿ 100 ಕ್ಕೂ ಹೆಚ್ಚು ಬಡರವರಿಗೆ  ಪಡಿತರ ಕಿಟ್ ವಿತರಿಸಿದರು.
ಪ್ರಸಕ್ತ ಸನ್ನಿವೇಶದಲ್ಲಿ  ಸಾಮಾಜಿಕ ಪರಿವರ್ತನೆಯ ಪರಿಕಲ್ಪನೆ ಮತ್ತು ಮುಂದಿರುವ ಸವಾಲುಗಳು ಎಂಬ ವಿಷಯವಾಗಿ ವೆಬಿನಾರ್ ನಡೆಯಿತು. ಉಪ ಮುಖ್ಯಮಂತ್ರಿಗಳು ಉನ್ನತ ಶಿಕ್ಷಣ ಮಂತ್ರಿ ಡಾ. ಸಿ ಎನ್. ಅಶ್ವಥ್ ನಾರಾಯಣ್, ಮಾಜಿ ಸಚಿವೆ ಡಾ. ಬಿ ಟಿ ಲಲಿತಾ ನಾಯಕ್, ಸಾಮಾಜಿಕ ಚಿಂತಕರುಗಳಾದ ಡಾ. ಬಾಬುರಾವ್ ಮುಡಬಿ, ಲೋಲಾಕ್ಷ ಸೇರಿದಂತೆ ಅನೇಕರು ಗಣ್ಯರು ವೆಬಿನಾರ್ ನಲ್ಲಿ ಭಾಗಿಯಾಗಿ ಹೊಸ ವಿಷಯಗಳ ಬಗ್ಗೆ ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

By admin