ಮೈಸೂರು ನಗರದ ಮಂಡಿ ಪೊಲೀಸ್ ಠಾಣಾ ಸರಹದ್ದು ಮಂಡಿ ಮೊಹಲ್ಲಾದ ಪುಲಕೇಶಿ ರಸ್ತೆ ಮತ್ತು ಎಂ.ಕೆ.ಡಿ.ಕೆ. ರಸ್ತೆಯ ೨ನೇ ಕ್ರಾಸ್ ಕೂಡುವ ಸ್ಥಳದಲ್ಲಿ ಟಾಟಾ ಗೂಡ್ಸ್ ಕ್ಯಾರಿಯರ್ ವಾಹನ ನೋಂದಣಿ ಸಂಖ್ಯೆ: ಒಊ-೧೧ಂಐ-೩೮೫೦ ರಲ್ಲಿ ಅಕ್ರಮವಾಗಿ ಸ್ಮಗ್ಲಿಂಗ್ ಮಾಡಿದ ಶ್ರೀಗಂಧದ ಮರದ ತುಂಡುಗಳನ್ನು ಮೈಸೂರಿನ ಸ್ಮಗ್ಲರ್ ಒಬ್ಬರಿಂದ ಖರೀದಿಸಿಕೊಂಡು ಬೆಂಗಳೂರಿನ ಕಡೆಗೆ ಸಾಗಾಣಿಕೆ ಮಾಡಲು ತಯಾರಿ ಮಾಡಿಕೊಳ್ಳುತ್ತಿರುವ ಬಗ್ಗೆ ಗುಪ್ತ ಮಾಹಿತಿ ಸಂಗ್ರಹಿಸಿದ ಸಿ.ಸಿ.ಬಿ. ಪೊಲೀಸರು, ಸದರಿ ವಾಹನದ ಮೇಲೆ ರಾತ್ರಿ ೧೧:೦೦ ಗಂಟೆ ಸಮಯದಲ್ಲಿ ದಾಳಿ ಮಾಡಿ, ಈ ಸ್ಮಗ್ಲಿಂಗ್ ದಂಧೆಯಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಸದರಿಯವರ ವಶದಲ್ಲಿದ್ದ ಟಾಟಾ ಗೂಡ್ಸ್ ಕ್ಯಾರಿಯರ್ ವಾಹನ ನೋಂದಣಿ ಸಂಖ್ಯೆ: ಒಊ-೧೧-ಂಐ-೩೮೫೦ ರಲ್ಲಿ ಚಾಲಕರ ಸೀಟಿನ ಹಿಂಭಾಗ ಗೌಪ್ಯವಾಗಿ ನಿರ್ಮಿಸಿದ್ದ ಕ್ಯಾಬಿನ್ ಒಂದರಲ್ಲಿ ಅಡಗಿಸಿಟ್ಟಿದ್ದ ಒಂದು ಕೋಟಿ ಮೌಲ್ಯದ ಒಟ್ಟು ೭೦೦ ಕೆ.ಜಿ. ತೂಕದ ಶ್ರೀಗಂಧದ ಮರದ ತುಂಡುಗಳು, ೨ ಮೊಬೈಲ್ ಫೋನ್‌ಗಳು, ೧೫,೦೦೦/-ರೂ ನಗದು ಹಣ ಹಾಗೂ ಟಾಟಾ ಕಂಪೆನಿಯ ಗೂಡ್ಸ್ ಕ್ಯಾರಿಯರ್ ವಾಹನವನ್ನು ಮುಂದಿನ ಕ್ರಮಕ್ಕಾಗಿ ಅಮಾನತ್ತು ಪಡಿಸಿಕೊಂಡಿರುತ್ತಾರೆ.
ಈ ಬಗ್ಗೆ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿ.ಸಿ.ಬಿ.ಯಲ್ಲಿ ತನಿಖೆ ಮುಂದುವರೆದಿದ್ದು, ಈ ಸ್ಮಗ್ಲಿಂಗ್ ದಂಧೆಯಲ್ಲಿ ಭಾಗಿಯಾಗಿ ಇಷ್ಟು ಬೃಹತ್ ತೂಕದ ಶ್ರೀಗಂಧವನ್ನು ಅಕ್ರಮವಾಗಿ ಸಂಗ್ರಹಿಸಿಕೊಟ್ಟಂತಹ ಮತ್ತು ಇದನ್ನು ಖರೀದಿ ಮಾಡಿಕೊಳ್ಳುತ್ತಿದ್ದ ಇತರೇ ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ಮುಂದುವರೆದಿರುತ್ತದೆ.
-೨-
ಈ ದಾಳಿ ಕಾರ್ಯವನ್ನು ಮೈಸೂರು ನಗರದ ಡಿ.ಸಿ.ಪಿ.ರವರಾದ ಶ್ರೀಮತಿ. ಗೀತಪ್ರಸನ್ನರವರ ಮಾರ್ಗದರ್ಶನದಲ್ಲಿ ಸಿ.ಸಿ.ಬಿ.ಯ ಎ.ಸಿ.ಪಿ.ರವರಾದ ಸಿ.ಕೆ.ಅಶ್ವಥನಾರಾಯಣರವರ ನೇತೃತ್ವದಲ್ಲಿ ಸಿ.ಸಿ.ಬಿ.ಯ ಇನ್ಸ್‌ಪೆಕ್ಟರ್ ಎ.ಮಲ್ಲೇಶ್, ಎ.ಎಸ್.ಐ. ಆರ್.ರಾಜು, ಸಿಬ್ಬಂದಿಗಳಾದ ಜೋಸೆಫ್ ನೊರೋನ್ಹ, ರಾಧೇಶ್, ಉಮಾಮಹೇಶ್, ಪುರುಷೋತ್ತಮ, ಅನಿಲ್, ರಘು, ಸುನಿಲ್, ಅರುಣ್‌ಕುಮಾರ್, ಶ್ರೀನಿವಾಸ, ಮಮತರವರು ನಡೆಸಿರುತ್ತಾರೆ.