ಮೈಸೂರು: ಸರ್ಕಾರದ ಹಾಗೂ ಜಿಲ್ಲಾಧಿಕಾರಿಗಳ ನಿರ್ದೇಶನದನ್ವಯ ಮೈಸೂರು ನಗರ ಪಾಲಿಕೆ ವತಿಯಿಂದ ನಗರದ ಎಲ್ಲಾ ನೋಂದಾಯಿತ ಹಾಗೂ ನೋಂದಾಯಿಸಲ್ಪಡದ ಬೀದಿ ಬದಿ ವ್ಯಾಪಾರಿಗಳಿಗೆ ಹಾಗೂ ವಿಶೇಷಚೇತನರಿಗೆ ಉಚಿತವಾಗಿ ಕೋವಿಡ್-19 ಲಸಿಕೆಯನ್ನು ನೀಡುವ ಮಹತ್ವದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಜೂನ್ 16 ರಿಂದ 20ರವರೆಗೆ ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಪುರಭವನದಲ್ಲಿ ನೋಂದಾಯಿತ ಹಾಗೂ ನೋಂದಾಯಿಸಲ್ಪಡದ ಎಲ್ಲಾ ಬೀದಿ ಬದಿ ವ್ಯಾಪಾರಿಗಳು ಹಾಗೂ ಜೂನ್ 17ರಿಂದ 19ರವರೆಗೆ ಬೆಳಿಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ತಿಲಕ್‍ನಗರದ ಅಂಧ ಮಕ್ಕಳ ಸರ್ಕಾರಿ ಪಾಠಶಾಲೆಯಲ್ಲಿ ವಿಶೇಷ ಚೇತನರಿಗೆ ಲಸಿಕೆ ನೀಡಲಾಗುವುದು.
ಬೀದಿ ಬದಿ ವ್ಯಾಪಾರಿಗಳು ಕಡ್ಡಾಯವಾಗಿ ಆಧಾರ್ ಕಾರ್ಡ್, ಬೀದಿ ಬದಿ ವ್ಯಾಪಾರದ ಗುರುತಿನ ಪತ್ರ, ವ್ಯಾಪಾರ ಪ್ರಮಾಣ ಪತ್ರ, ಪಿ.ಎಂ.ಸ್ವಾ-ನಿಧಿಯಡಿ ನೊಂದಾಯಿಸಲ್ಪಟ್ಟ ಅರ್ಜಿ ಹಾಗೂ ಎಲ್.ಓ.ಆರ್. ಪ್ರತಿಯನ್ನು ನೀಡಬೇಕು. ವಿಶೇಷ ಚೇತನರು ಇಲಾಖೆಯಿಂದ ನೀಡಿರುವ ವಿಶೇಷ ಚೇತನರ ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡ್ ಅನ್ನು ಕಡ್ಡಾಯವಾಗಿ ನೀಡಬೇಕು.
ಲಾಕ್‍ಡೌನ್ ಜಾರಿಯಲ್ಲಿರುವುದರಿಂದ ಲಸಿಕೆ ಪಡೆಯುವವರಿಗೆ ವಾಹನ ಸೌಲಭ್ಯ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದ್ದು, ವಲಯವಾರು ವಾಹನ ಸೌಲಭ್ಯ ಪಡೆಯಲು ಇಚ್ಛಿಸುವವರು ಮೈಸೂರು ಮಹಾನಗರ ಪಾಲಿಕೆಯ ಸಿಬ್ಬಂಧಿಗಳಾದ ನಳಿನಿ ಪಿ.ಆರ್., ವಲಯ ಕಚೇರಿ-1 & 9 ದೂ. ಸಂಖ್ಯೆ: 9844316512, ಉಷಾಪೂರ್ಣ, ವಲಯ ಕಚೇರಿ-2 ದೂ. ಸಂಖ್ಯೆ: 9481515527, ಮುನಿಲಕ್ಷ್ಮಮ್ಮ, ವಲಯ ಕಚೇರಿ-3 ದೂ. ಸಂಖ್ಯೆ: 9886041972, ರಮೇಶ್, ವಲಯ ಕಚೇರಿ 4 ಮತ್ತು 5 ದೂ. ಸಂಖ್ಯೆ: 9449124422, ಜಮುನಾ, ವಲಯ ಕಚೇರಿ-6 ದೂ. ಸಂ: 9740129562, ಸಂತೋಷ್, ವಲಯ ಕಚೇರಿ-7 & 8 ದೂ. ಸಂ: 9972634378 ರವರನ್ನು ಸಂಪರ್ಕಿಸಬಹುದು ಎಂದು ಮೈಸೂರು ಮಹಾನಗರ ಪಾಲಿಕೆಯ ಉಪ ಆಯುಕ್ತರು ತಿಳಿಸಿದ್ದಾರೆ.