ಸರಗೂರು: ತಾಲ್ಲೂಕಿನ ಬಿ.ಮಟಕೆರೆ ಗ್ರಾಮ ಪಂಚಾಯಿತಿಯ ಸಾಮಾಜಿಕ ನ್ಯಾಯ ಸಮಿತಿಗೆ ಅಧ್ಯಕ್ಷರಾಗಿ ಕುಣರ್ೇಗಾಲ ಬೆಟ್ಟಸ್ವಾಮಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗ್ರಾಮ ಪಂಚಾಯಿತಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸರ್ವ ಸದಸ್ಯರ ಒಮ್ಮತದ ಮೇರೆಗೆ ಬೆಟ್ಟಸ್ವಾಮಿ ಅವರು ಸಮಿತಿಗೆ ಅಧ್ಯಕ್ಷರಾಗಿ ನೇಮಕ ಆಗಿದ್ದಾರೆ.
ಇದೇ ಸಂದರ್ಭ ಮಾತನಾಡಿದ ಅಧ್ಯಕ್ಷ ಬೆಟ್ಟಸ್ವಾಮಿ, ತನ್ನನ್ನು ಸವರ್ಾನುಮತದಿಂದ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದುದಕ್ಕೆ ಪಂಚಾಯಿತಿ ಅಧ್ಯಕ್ಷರಾದ ರೂಪಬಾಯಿ ಮಲ್ಲೇಶ್, ಉಪಾಧ್ಯಕ್ಷರಾದ ದೇವದಾಸ್, ಸದಸ್ಯರಾದ ನಾಗೇಂದ್ರ, ಬಸವರಾಜು, ಕಾಳಸ್ವಾಮಿ, ಎಸ್.ಕೃಷ್ಣ, ನಾಗೇಶ್, ಎಂ.ಸೋಮ, ಬೊಮ್ಮ, ನಾಗರತ್ನ, ಸುಮತಿ, ರತ್ನಮ್ಮ, ಭಾರತಿ, ಮೀನಾಕುಮಾರಿ, ಅಶ್ವಿನಿ, ರಾಣಿಬಾಯಿ, ಗೌರಿಬಾಯಿ, ಅಜೀತ್ಕುಮಾರ್, ನಾಗಯ್ಯ, ಎಂ.ಡಿ.ರತ್ನಯ್ಯ, ವಿನೋದ, ಚಿನ್ನಮ್ಮ, ಸುನೀತಾಬಾಯಿ, ಪಿಡಿಓ ನಾಗರಾಜ್ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
ಇದಲ್ಲದೆ ಪಂಚಾಯಿತಿ ಅಭಿವೃದ್ಧಿಗೆ ಪಿಡಿಒ, ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರಿಗೂ ಸಹಕಾರ ನೀಡುತ್ತೇನೆ. ಜತೆಗೆ ಗ್ರಾಮಗಳ ಅಭಿವೃದ್ಧಿಗೆ ಎಲ್ಲರೂ ಪಣ ತೊಟ್ಟು. ಮಾದರಿ ಪಂಚಾಯಿತಿಯತ್ತ ಮುನ್ನಡೆಯೋಣ ಎಂದು ತಿಳಿಸಿದರು.