ಚಾಮರಾಜನಗರ: ತಾಲ್ಲೂಕಿನ ಬಿಸಲವಾಡಿ ಗ್ರಾಮದ ಹೊರವಲಯದ ಬಿಳಿಕಲ್ಲು ಕ್ವಾರೆಯಲ್ಲಿ ಗುಡ್ಡಕುಸಿದು ಮೂರು ಮಂದಿ ಕಾರ್ಮಿಕರು ಮೃತಪಟ್ಟಿರುವ ಘಟನೆಯನ್ನು ಹೈಕೋರ್ಟ್ ನ್ಯಾಯಧೀಶ ರಿಂದ ತನಿಖೆ ನಡೆಸಬೇಕು, ಹಾಗೂ ಮೃತರ ಕುಟುಂಬಗಳಿಗೆ ತಲಾ ಒಂದು ಕೋಟಿ ರೂಪಾಯಿಗಳ ಪರಿಹಾರವನ್ನು ನೀಡಬೇಕೆಂದು ಆಗ್ರಹಿಸಿ ಅಖಿಲ ಕರ್ನಾಟಕ ಕನ್ನಡ ಮಹಾಸಭೆ ರಾಜ್ಯಾಧ್ಯಕ್ಷ ಚಾರಂ. ಶ್ರೀನಿವಾಸ ಗೌಡ ಹೆಚ್ಚುವರಿ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು
ಜಿಲ್ಲೆಯ ಬಿಸಲವಾಡಿ ಸುತ್ತಮುತ್ತಲಗ್ರಾಮಗಳಲ್ಲಿ ಹಲವಾರು ವರ್ಷಗಳಿಂದ ಅಕ್ರಮವಾಗಿ ಬಿಳಿಕಲ್ಲು ಗಣಿಗಾರಿಕೆ ನಡೆಯುತ್ತಿದೆ.
ಸಾರ್ವಜನಿಕರು ಅಕ್ರಮ ಗಣಿಗಾರಿಕೆ ನಿಯಂತ್ರಿಸುವಂತೆ ಅನೇಕ ಬಾರಿ ಜಿಲ್ಲಾಡಳಿತಕ್ಕೆ ದೂರು ನೀಡಿದ್ದರೂ,
ಸಂಬಂಧ ಪಟ್ಟ ಅಧಿಕಾರಿಗಳು ಇದರ ಬಗ್ಗೆ ಯಾವುದೇ ಕ್ರಮ ತೆಗೆದುಕೂಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ.
ಕಳೆದ ಮಾರ್ಚ್ ನಲ್ಲಿ ಗುಂಡ್ಲುಪೇಟೆಯ ಮಡಹಳ್ಳಿಯಲ್ಲಿ ಗುಡ್ಡ ಕುಸಿದು ಉತ್ತರಪ್ರದೇಶದ ಮೂಲದ ಕಾರ್ಮಿಕರು ಮೃತಪಟ್ಟಿರುತ್ತಾರೆ.
ಇದೇ ರೀತಿ ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿದರೆ ಬಿಟ್ಟರೆ ಮುಂದೆ ದೊಡ್ಡ ದೊಡ್ಡಮಟ್ಟದ ದುರಂತಗಳು ನಡೆಯುವ ಸಾಧ್ಯತೆಗಳಿವೆ. ಸರಕಾರ ಕೂಡಲೇ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು, ತಪ್ಪಿತಸ್ಥರ ವಿರುದ್ದ ಕ್ರಮಕೈಗೊಳ್ಳಬೇಕು. ಕಂದಾಯ, ಗಣಿ, ಕಂದಾಯ, ಕಾರ್ಮಿಕ, ಸಾರಿಗೆ ಇಲಾಖಾಧಿಕಾರಿಗಳನ್ನು ಅಮಾನತ್ತು ಪಡಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ನಿಜಧನಿಗೋವಿಂದರಾಜು, ಗಡಿನಾಡು ಕನ್ನಡರಕ್ಷಣಾ ವೇದಿಕೆ ಅಧ್ಯಕ್ಷ ಚಾ.ರ.ಕುಮಾರ್, ಎಸ್‌ಪಿಬಿ ಅಭಿಮಾನಿಗಳ ಸಂಘದ ಅಧ್ಯಕ್ಷ ಎಚ್.ಎಂ.ಶಿವಣ್ಣ, ಕನ್ನಡರಕ್ಷಣ ವೇದಿಕೆ ಅಧ್ಯಕ್ಷ ಅರ್ಜುನ್, ಸುರೇಶ್,ಆಟೋ ಆಕಾಶ್ ಹಾಜರಿದ್ದರು.
