ಮೈಸೂರು: ಕೋವಿಡ್ ಸೊಂಕು ನಿಯಂತ್ರಣಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಕೊರೊನಾ ವಾರಿಯರ್ಸ್ ಗಳಾದ ಆರಕ್ಷಕರಿಗೆ ಅಪೂರ್ವ ಸ್ನೇಹ ಬಳಗದ ವತಿಯಿಂದ ಜೆ.ಎಲ್.ಬಿ ರಸ್ತೆಯಲ್ಲಿರುವ ಕೆ.ಆರ್. ಪೊಲೀಸ್ ಉಪವಿಭಾಗ ಆಯುಕ್ತರ ಕಚೇರಿ ಮತ್ತು ಕೆ.ಆರ್ ಸಂಚಾರಿ ಠಾಣೆಯ ಆರಕ್ಷಕ ಸಿಬ್ಬಂದಿಗೆ ಕಷಾಯ ಮತ್ತು ಆರ್ಗಾನಿಕ್ ಬಾಳೆಹಣ್ಣು ಬನ್ ಪೌಷ್ಠಿಕ ಆಹಾರ ವಿತರಿಸಲಾಯಿತು
ಕೆ.ಆರ್. ಸಂಚಾರಿ ಠಾಣೆ ವೃತ್ತ ನಿರೀಕ್ಷಕರಾದ ವಿನಯ್ ಮಾತನಾಡಿ ಕೊರೊನಾ ನಿಯಂತ್ರಿಸಲು ಸಾರ್ವಜನಿಕರು ಸಾಮಾಜಿಕ ಅಂತರ ಮತ್ತು ಕಡ್ಡಾಯವಾಗಿ ಮಾಸ್ಕ್ ಧರಿಸುವ ಮೂಲಕ ನಿಯಮ ಪಾಲಿಸಬೇಕು, ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಯುವಕರು ಮುಂದಾಗಬೇಕು, ಪ್ರತಿನಿತ್ಯ ಆಯುರ್ವೇದ ಪೌಷ್ಠಿಕ ಆಹಾರ ಸೇವನೆಯೊಂದಿಗೆ, ದಿನನಿತ್ಯ ಮನೆಯಲ್ಲಿ ವ್ಯಾಯಾಮ ಮತ್ತು ಧ್ಯಾನ ಮಾಡಿದರೆ ಮಾನಸಿಕ ಸ್ಥೈರ್ಯ ಹೆಚ್ಚುತ್ತದೆ ಎಂದರು
ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಎಂ.ಎನ್ ನವೀನ್ ಕುಮಾರ್, ಕೃಷ್ಣರಾಜೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಬಸವರಾಜು ಬಸಪ್ಪ, ರವಿಶಂಕರ್, ಅಜಯ್ ಶಾಸ್ತ್ರಿ ನವೀನ್ ಇದ್ದರು.