ಬೇಲೂರು: ನೀರಿನ ಪೈಪ್ ವಿಚಾರಕ್ಕೆ ತಲೆಗೆ ಹೊಡೆದು ದೊಡ್ಡಮ್ಮನನ್ನೇ ಕೊಲೆಗೈದ ಘಟನೆ ತಾಲೂಕಿನ ಚಿನ್ನೆನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನಿವಾಸಿ ಚನ್ನೇಗೌಡರ ಪತ್ನಿ ಮಾಜಿ ಗ್ರಾಮಪಂಚಾಯಿತಿ ಉಪಾಧ್ಯಕ್ಷೆ ಮಂಜುಳಾ (52) ಎಂಬುವರೇ ಕೊಲೆಯಾದ ದುರ್ದೈವಿ. ಚನ್ನೇಗೌಡ ಹಾಗೂ ಸಹೋದರ  ರಾಜೇಗೌಡರಿಗೆ  ಜಮೀನಿನ ವಿಚಾರದಲ್ಲಿ ಜಗಳ ನಡೆದಿತ್ತು. ಈ ಬಗ್ಗೆ ದ್ವೇಷವಿಟ್ಟುಕೊಂಡಿದ್ದ ರಾಜೇಗೌಡರ ಪುತ್ರ ಗೌತಮ್ ಎಂಬಾತ ಮಂಜುಳಾ ಅವರು ಜಮೀನಿಗೆ ತೆರಳಿದ ಸಮಯದಲ್ಲಿ ದೊಣ್ಣೆ ಯಿಂದ ತಲೆಗೆ ಹೊಡೆದಿದ್ದು ಪರಿಣಾಮವಾಗಿ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾರೆ. ಇದನ್ನು ನೋಡಿದ ಸ್ಥಳೀಯರು ಅವರನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಿದರಾದರೂ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.

ಘಟನೆ ಬಳಿಕ ಆರೋಪಿ ಗೌತಮ್ ತಲೆ ಮರೆಸಿಕೊಂಡಿದ್ದು,ಬೇಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.

By admin