ಮೈಸೂರು: ಮೈಸೂರು ಯುವ ಬಳಗದ ವತಿಯಿಂದ ಮಾಜಿ ಸಚಿವರು, ಬಿಜೆಪಿಯ ಹಿರಿಯ ನಾಯಕರು, ವಿಧಾನ ಪರಿಷತ್ ಸದಸ್ಯರಾದ ಅಡಗೂರು ಎಚ್ ವಿಶ್ವನಾಥ್ ರವರ  ಜನ್ಮದಿನವನ್ನು ಆಚರಿಸಿ ರೈಲ್ವೆ ಸ್ಟೇಷನ್ ಹಾಗೂ ಆಯುರ್ವೇದಿಕ್ ವೃತ್ತದಲ್ಲಿ ಹಾಗೂ ಸುತ್ತಮುತ್ತ ಪ್ರದೇಶದ   ನಿರಾಶ್ರಿತರಿಗೆ ಆಹಾರ ಮತ್ತು ನೀರು ಹಾಗೂ ಮಾಸ್ಕ್ ವಿತರಿಸಲಾಯಿತು.

ಈ ವೇಳೆ ಮಾತನಾಡಿದ ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯ  ಎಂ.ಎನ್.ನವೀನ್ ಕುಮಾರ್ ಅವರು, ಸರಳ ಸಜ್ಜನ ವ್ಯಕ್ತಿ ದೇವರಾಜ ಅರಸರ ನಡೆಯನ್ನು  ಕರ್ನಾಟಕದಲ್ಲಿ ಮುಂದುವರೆಸುತ್ತಿರುವ ಪ್ರಬುದ್ಧ-ಜನಪ್ರೇಮಿ-ಸುಸ್ಥಿತಿ ಪ್ರೇಮಿ-ಅಭ್ಯುದಯ ಪ್ರಿಯ- ಮಾರ್ಗದರ್ಶಕರಾದ ಹೆಚ್.ವಿಶ್ವನಾಥ್ ರವರ ಬಿಸಿ ಊಟ ಹಾಗೂ  ಯಶಸ್ವಿನಿ ಯೋಜನೆ ಸೇರಿದಂತೆ ನೂರಾರು ಕೊಡುಗೆಗಳನ್ನು ಸ್ಮರಿಸಬಹುದು. ಈ ಮಹಾಮಾರಿ ಕೊರೋನಾ ಈ ಸಂದರ್ಭದಲ್ಲಿ ಉಳ್ಳವರು ಇಲ್ಲದವರಿಗೆ ಸಹಾಯ ಮಾಡುವುದು ಮನುಷ್ಯನ ಆದ್ಯ ಕರ್ತವ್ಯ. ಹಾಗಾಗಿ ಈ ಸಂದರ್ಭದಲ್ಲಿ ಯಾರದೇ ಜನ್ಮದಿನಾಚರಣೆ ಬಂದರೂ ದಯಮಾಡಿ ಬಡವರಿಗೆ ಮತ್ತು ಅಸಹಾಯಕರಿಗೆ ಸಹಾಯ ಮಾಡುವ  ಮೂಲಕ ಸಾರ್ಥಕವಾದ ಜನ್ಮದಿನಾಚರಣೆ ಆಚರಿಸಿ ಎಂದು ಮನವಿ ಮಾಡಿದರು.  ಮೈಸೂರು ಯುವ ಬಳಗದ ಸದಸ್ಯರಾದ ನವೀನ್, ಪ್ರಮೋದ್ ಗೌಡ, ಕಾಂತಿಲಾಲ್ ಜೈನ್ ಇನ್ನಿತರರು ಇದ್ದರು

By admin