ಚಾಮರಾಜನಗರ: ಚಾಮರಾಜನಗರ ದಸರಾ ಮಹೋತ್ಸವದ ಅಂಗವಾಗಿ ಸೆಪ್ಟೆಂಬರ್ ೨೭ ರಿಂದ ೩೦ ರವರೆಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಸೆಪ್ಟೆಂಬರ್ ೨೭ ರಂದು ಬೆಳಿಗ್ಗೆ ೯.೩೦ ರಿಂದ ೯.೪೫ರವರೆಗೆ ಸುತ್ತೂರಿನ ಎನ್. ಮಂಜುನಾಥ್ ಮತ್ತು ತಂಡದವರಿಂದ ನಾದಸ್ವರ, ೯.೪೫ರಿಂದ ೧೦ರವರೆಗೆ ಉಮ್ಮತ್ತೂರಿನ ಕುಮಾರ್ ಮತ್ತು ತಂಡದವರಿಂದ ನಾದಸ್ವರ, ೧೦ ರಿಂದ ೧೦.೧೫ರವರೆಗೆ ರಾಮಸಮುದ್ರದ ಮಲ್ಲೇಗೌಡ ಮತ್ತು ತಂಡದವರಿಂದ ಡೊಳ್ಳುಕುಣಿತ, ೧೦.೧೫ರಿಂದ ೧೦.೩೦ರವರೆಗೆ ಕೊಂಗರಹಳ್ಳಿ ಕೆ.ಹೆಚ್. ವಿನ್ಮಯಿ ಅವರಿಂದ ಭರತನಾಟ್ಯ, ೧೦.೩೦ ರಿಂದ ೧೦.೪೫ರವರೆಗೆ ಕೆ.ಕೆ. ಹುಂಡಿ ಮುದ್ದು ಮತ್ತು ತಂಡದವರಿಂದ ಗೊರವರಕುಣಿತ, ೧೦.೪೫ರಿಂದ ೧೧ ರವರೆಗೆ ಕೊಳತ್ತೂರು ಪಿ. ಮಹದೇವಸ್ವಾಮಿ ಮತ್ತು ತಂಡದವರಿಂದ ಭಕ್ತಿಗೀತೆಗಳು, ೧೧ರಿಂದ ೧೧.೧೫ರವರೆಗೆ ರಾಮಸಮುದ್ರದ ಕಾಳಪ್ಪ ಮತ್ತು ತಂಡದವರಿಂದ ತಂಬೂರಿಪದ, ೧೧.೧೫ರಿಂದ ೧೧.೩೦ರವರೆಗೆ ಹೆಚ್.ಡಿ. ಕಾಳನಾಯ್ಕ ಮತ್ತು ತಂಡದವರಿಂದ ತಂಬೂರಿಪದ, ೧೧.೩೦ರಿಂದ ೧೧.೪೫ರವರೆಗೆ ಹನೂರು ತಾಲ್ಲೂಕಿನ ಮಂಗಲ ಗ್ರಾಮದ ಮಹದೇವಶೆಟ್ಟಿ ಮತ್ತು ತಂಡದವರಿಂದ ತಂಬೂರಿಪದ, ೧೧.೪೫ರಿಂದ ೧೨ರವರಗೆ ಹೊಂಗನೂರು ಗ್ರಾಮದ ನಾಗರಾಜು ಮತ್ತು ತಂಡದವರಿಂದ ಹರಿಕಥೆ, ಮಧ್ಯಾಹ್ನ ೧೨ರಿಂದ ೧೨.೧೫ರವರೆಗೆ ಕರ್ನಾಟಕ ರಾಜ್ಯ ಸಿಳ್ಳೇಕ್ಯಾತಾಸ್ ಜನಾಂಗ ಅಭಿವೃದ್ದಿ ವೇದಿಕೆಯ ಬಿ.ಹೆಚ್. ಮಂಜುನಾಥ್ ಅವರಿಂದ ತೊಗಲುಗೊಂಬೆ ಕಲಾ ಪ್ರದರ್ಶನ, ೧೨.೧೫ರಿಂದ ೧೨.೩೦ರವರೆಗೆ ಗುಂಡ್ಲುಪೇಟೆ ಪೃಥ್ವಿ ಬುದ್ದಿಮಾಂಧ್ಯ ಶಾಲೆಯವರಿಂದ ನೃತ್ಯರೂಪಕ, ೧೨.೩೦ರಿಂದ ೧ ರವರೆಗೆ ಕೊಳ್ಳೇಗಾಲ ತಾಲ್ಲೂಕಿನ ಹೊಸಅಣಗಳ್ಳಿಯ ಜೋಗಪ್ಪ ಮತ್ತು ತಂಡದವರಿಂದ ಜನಪದ ಸಂಗೀತ, ೧ರಿಂದ ೧.೩೦ರವರೆಗೆ ಚಾಮರಾಜನಗರದ ಶಾರದ ನೃತ್ಯ ಶಾಲೆಯವರಿಂದ ನೃತ್ಯರೂಪಕ, ೧.೩೦ರಿಂದ ೨ರವರೆಗೆ ಚಾಮರಾಜನಗರದ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಕಲಾ ವೇದಿಕೆಯ ನಾಗಮಹದೇವ್ ಅವರಿಂದ ಸಂಗೀತಗಂಗೆ, ೨ರಿಂದ ೨.೩೦ರವರೆಗೆ ಕೂಸಯ್ಯ, ಬಸವಯ್ಯ, ರಂಗಯ್ಯ, ರಾಚಯ್ಯ ತಂಡದವರಿಂದ ಭಜನೆ, ತತ್ವಪದ ಕಾರ್ಯಕ್ರಮ, ೨.೩೦ ರಿಂದ ೨.೪೫ ರವರೆಗೆ ಉಡಿಗಾಲದ ಶ್ರೀ ಶರಣೆ ನೀಲಾಂಬಿಕೆ ಭಜನೆ ತಂಡದವರಿಂದ ಭಜನೆ ಸಂಭ್ರಮ, ೨.೪೫ ರಿಂದ ೩ ರವರೆಗೆ ಶಾರದ ಭಜನಾ ಮಂಡಳಿಯ ವಿ.ಬಿ. ಲಕ್ಷ್ಮಿ ಅವರಿಂದ ಭಜನೆ ಸಂಭ್ರಮ, ೩ ರಿಂದ ೫ ಗಂಟೆಯವರೆಗೆ ಸ್ಥಳೀಯ ೧೬ ಕಲಾತಂಡಗಳಿಂದ ಸೋಬಾನೆ ಸಂಭ್ರಮ, ಸಂಜೆ ೫ ರಿಂದ ೫.೩೦ ರವರೆಗೆ ಉಮ್ಮತ್ತೂರಿನ ಎಂ. ಚಂದ್ರಶೇಖರ್ ಮತ್ತು ತಂಡದವರಿಂದ ಗೀತಾಗಾಯನ, ೫.೩೦ ರಿಂದ ೬ ರವರೆಗೆ ಚಾಮರಾಜನಗರದ ಎಸ್. ರಾಜಮೂರ್ತಿ ಮತ್ತು ತಂಡದವರಿಂದ ಸುಗಮ ಸಂಗೀತ, ೬ ರಿಂದ ೬.೩೦ ರವರೆಗೆ ಮಂಗಲದ ಎನ್. ಮಹದೇವಸ್ವಾಮಿ ಮತ್ತು ತಂಡದವರಿಂದ ಜನಪದ ಗೀತೆ ಕಾರ್ಯಕ್ರಮ ನಡೆಯಲಿದೆ.
ಸೆಪ್ಟೆಂಬರ್ ೨೮ ರಂದು ಬೆಳಿಗ್ಗೆ ೯.೪೫ ರಿಂದ ೧೦ರವರೆಗೆ ಚಾಮರಾಜನಗರದ ನಾಗೇಂದ್ರ ಮತ್ತು ತಂಡದಿಂದ ನಾದಸ್ವರ, ೧೦ರಿಂದ ೧೦.೧೫ರವರೆಗೆ ಅಂಬಳೆ ಗುರುಸಿದ್ದಯ್ಯ ಮತ್ತು ತಂಡದಿಂದ ನಾದಸ್ವರ, ೧೦.೩೦ ರಿಂದ ೧೦.೪೫ರವರೆಗೆ ರಾಮಸಮುದ್ರದ ರಾಜಶೇಖರ ಮತ್ತು ತಂಡದವರಿಂದ ಗೊರವರ ಕುಣಿತ, ೧೦.೪೫ರಿಂದ ೧೧.೧೫ರವರೆಗೆ ಆರ್. ಮಂಜುನಾಥ್, ಬಿ. ಸೋಮಶೇಖರ್, ಎಸ್. ಆನಂದನಾಯಕ್, ಬಿ.ಮಹೇಶ್, ಬಿ.ಕೆ.ರಾಜೇಂದ್ರ ತಂಡದಿಂದ ಭಕ್ತಿಗೀತೆಗಳು, ೧೧.೧೫ರಿಂದ ೧೧.೩೦ರವರೆಗೆ ಕೊಳ್ಳೇಗಾಲ ತಾಲ್ಲೂಕಿನ ಸಿದ್ದಯ್ಯನಪುರದ ಎಂ.ಕೈಲಾಶಮೂರ್ತಿ ಮತ್ತು ತಂಡದಿಂದ ತಂಬೂರಿಪದ, ೧೧.೩೦ರಿಂದ ೧೧.೪೫ರವರೆಗೆ ಗುಂಡ್ಲುಪೇಟೆ ತಾಲ್ಲೂಕಿನ ಕೆಬ್ಬೇಪುರದ ನಾಗಯ್ಯ ಮತ್ತು ತಂಡದಿಂದ ತಂಬೂರಿಪದ, ೧೧.೪೫ರಿಂದ ೧೨ರವರೆಗೆ ಯಳಂದೂರು ತಾಲ್ಲೂಕಿನ ಹೊನ್ನೂರಿನ ಮರಿಮಾದಶೆಟ್ಟಿ ಮತ್ತು ತಂಡದಿಂದ ತಂಬೂರಿಪದ, ಮಧ್ಯಾಹ್ನ ೧೨ರಿಂದ ೧೨.೧೫ರವರೆಗೆ ಕಾವುದವಾಡಿ ಬಿ. ಮಹದೇವಸ್ವಾಮಿ ಮತ್ತು ತಂಡದಿಂದ ತಂಬೂರಿಪದ, ೧೨.೧೫ರಿಂದ ೧೨.೩೦ರವರೆಗೆ ಕುಂತೂರು ಮೋಳೆಯ ದೊಡ್ಡಸ್ವಾಮಿ ಮತ್ತು ತಂಡದಿಂದ ನೀಲಗಾರರಪದ, ೧೨.೩೦ರಿಂದ ೧ ರವರೆಗೆ ನಗರದ ಚಾಲೆಂಜರಸ್ಸ್ ನೃತ್ಯ ಶಾಲೆಯಿಂದ ನೃತ್ಯರೂಪಕ, ೧ರಿಂದ ೧.೩೦ರವರೆಗೆ ಯಳಂದೂರು ಕಂದಳ್ಳಿ ನಾರಾಯಣ ಮತ್ತು ತಂಡದಿಂದ ಕ್ರಾಂತಿ ಗೀತೆ, ೧.೩೦ರಿಂದ ೨ರವರೆಗೆ ದೊಡ್ಡರಾಯಪೇಟೆಯ ಮಲ್ಲಣ್ಣ ಮತ್ತು ತಂಡದಿಂದ ಮಿಮಿಕ್ರಿ, ೨ರಿಂದ ೨.೩೦ರವರೆಗೆ ಕುಮಾರನಪುರದ ಜಗಜ್ಯೋತಿ ಬಸವೇಶ್ವರ ಕಲಾ ಸಂಘದ ಕೆ.ಎಸ್. ಮಹದೇವಸ್ವಾಮಿ ಮತ್ತು ತಂಡದಿಂದ ಜನಪದಗೀತೆ ಗಾಯನ, ೨.೩೦ ರಿಂದ ೩.ರವರೆಗೆ ದೊಡ್ಡಿಂದುವಾಡಿಯ ಮಹಂತಯ್ಯ ಮತ್ತು ತಂಡದಿಂದ ವಚನ ಗಾಯನ, ೩ರಿಂದ ೫ರವರೆಗೆ ಸ್ಥಳೀಯ ಸೋಬಾನೆ ಕಲಾವಿದರ ೧೬ ತಂಡಗಳಿಂದ ಸೋಬಾನೆ ಸಂಭ್ರಮ, ಸಂಜೆ ೫ರಿಂದ ೫.೩೦ರವರೆಗೆ ಕಾಳನಹುಂಡಿ ರಾಜಶೇಖರ ಮತ್ತು ತಂಡದಿಂದ ಜನಪದನೃತ್ಯ, ೫.೩೦ ರಿಂದ ೬ ರವರೆಗೆ ಶ್ರೀ ಚಾಮರಾಜೇಶ್ವರ ಸಾಂಸ್ಕೃತಿಕ ವೇದಿಕೆಯ ರವಿಗುರು ಸಿದ್ದಪ್ಪ ಅವರಿಂದ ಭಕ್ತಿಗೀತೆ, ೬ರಿಂದ ೬.೩೦ರವರೆಗೆ ಪ್ರಕಾಶ್, ಆರ್.ಶಿವಣ್ಣ, ಬಿ. ಮಹದೇವಸ್ವಾಮಿ ತಂಡದಿಂದ ಜನಪದಗೀತೆ ಹಾಗೂ ೬.೩೦ ರಿಂದ ೭ರವರೆಗೆ ಸಾಯಿರಾಮ್ ಫೌಂಡೇಶನ್ ಆರ್. ರಾಚಪ್ಪ ಮತ್ತು ತಂಡದಿಂದ ನೃತ್ಯರೂಪಕ ಕಾರ್ಯಕ್ರಮಗಳು ಜರುಗಲಿವೆ.
ಸೆಪ್ಟೆಂಬರ್ ೨೯ ರಂದು ಬೆಳಿಗ್ಗೆ ೯.೪೫ ರಿಂದ ೧೦ರವರೆಗೆ ಹರದನಹಳ್ಳಿ ಪಿ. ರವಿಕುಮಾರ್ ಮತ್ತು ತಂಡದಿಂದ ನಾದಸ್ವರ, ೧೦ರಿಂದ ೧೦.೧೫ರವರೆಗೆ ಉಮ್ಮತ್ತೂರಿನ ಸಿದ್ದರಾಜು ಮತ್ತು ತಂಡದಿಂದ ನಾದಸ್ವರ, ೧೦.೧೫ರಿಂದ ೧೦.೩೦ರವರೆಗೆ ನೇನೆಕಟ್ಟೆಯ ಏಳುಮಲೆ ಮಾದಪ್ಪ ಜನಪದ ನೃತ್ಯ ತಂಡದಿಂದ ಕಂಸಾಳೆ, ೧೦.೩೦ರಿಂದ ೧೧ರವರೆಗೆ ಕೆಸ್ತೂರಿನ ಡಾ. ಶ್ರೀ ಶಿವಕುಮಾರಸ್ವಾಮಿಯವರ ಕಲಾ ಸಂಘದಿಂದ ಭಕ್ತಿಗೀತೆಗಳು, ೧೧ರಿಂದ ೧೧.೩೦ರವರೆಗೆ ಪ್ರಜ್ಞಾ ಪರಿವರ್ತನಾ ಕಲಾತಂಡದ ಶೇಷಣ್ಣಸ್ವಾಮಿ ಅವರಿಂದ ಪರಿವರ್ತನಾ ಗೀತೆ, ೧೧.೩೦ರಿಂದ ೧೧.೪೫ರವರೆಗೆ ಗುಂಡ್ಲುಪೇಟೆ ತಾಲ್ಲೂಕಿನ ಕೆ.ಎಂ. ಹಳ್ಳಿ ಎ. ಬಸವರಾಜು ಮತ್ತು ತಂಡದಿಂದ ತಂಬೂರಿಪದ, ೧೧.೪೫ರಿಂದ ೧೨ರವರಗೆ ಹೆಗ್ಗವಾಡಿಯ ಆರ್. ಸಿದ್ದರಾಜು ಮತ್ತು ತಂಡದಿಂದ ತಂಬೂರಿಪದ, ಮಧ್ಯಾಹ್ನ ೧೨ರಿಂದ ೧೨.೧೫ರವರೆಗೆ ಬ್ಯಾಡಮೂಡ್ಲು ಮಾದಶೆಟ್ಟಿ ಮತ್ತು ತಂಡದಿಂದ ತಂಬೂರಿಪದ, ೧೨.೧೫ರಿಂದ ೧೨.೩೦ರವರೆಗೆ ದೊಡ್ಡಮೋಳೆ ಸಣ್ಣಶೆಟ್ಟಿ ಮತ್ತು ತಂಡದಿಂದ ತಂಬೂರಿಪದ, ೧೨.೩೦ರಿಂದ ೧ರವರೆಗೆ ಗುಂಡ್ಲುಪೇಟೆ ತಾಲ್ಲೂಕಿನ ಕೆಬ್ಬೇಪುರದ ಆರ್. ಸಿದ್ದರಾಜು ಮತ್ತು ತಂಡದಿಂದ ತಂಬೂರಿಪದ, ೧ ರಿಂದ ೧.೧೫ರವರೆಗೆ ಮಲೆಯೂರು ಎಸ್. ಮಹೇಶ್ ಮತ್ತು ತಂಡದಿಂದ ತಂಬೂರಿಪದ, ೧.೧೫ರಿಂದ ೧.೩೦ರವರೆಗೆ ನಲ್ಲೂರಿನ ಬಿ. ಶಂಕರ್ ಮತ್ತು ತಂಡದಿಂದ ಭಜನೆ, ೧.೩೦ರಿಂದ ೨ರವರೆಗೆ ಕೊಡಸೋಗೆ ಬೆಟ್ಟನಾಯಕ ಮತ್ತು ತಂಡದಿಂದ ಭಜನೆ, ೨ರಿಂದ ೨.೩೦ರವರೆಗೆ ಎಸ್. ಮಂಜುನಾಥ್ ಶೆಟ್ಟಿ, ಪರಶಿವಮೂರ್ತಿ, ಎಸ್. ರತ್ನಕುಮಾರಿ, ಎಸ್. ಚರಣ್, ಬಿ. ರಾಜೇಶ್ ತಂಡದಿಂದ ಸುಗಮ ಸಂಗೀತ, ೨.೩೦ ರಿಂದ ೩ರವರೆಗೆ ನಗರದ ನಾಟ್ಯ ಪ್ರವೀಣ ನೃತ್ಯ ಶಾಲೆಯ ಮಹೇಂದ್ರ ಮತ್ತು ತಂಡದಿಂದ ಜನಪದ ನೃತ್ಯ, ೩ರಿಂದ ೫ರವರೆಗೆ ಸ್ಥಳೀಯ ಸೋಬಾನೆ ಕಲಾವಿದರ ೧೬ ತಂಡಗಳಿಂದ ಸೋಬಾನೆ ಸಂಭ್ರಮ, ೫ರಿಂದ ೫.೩೦ರವರೆಗೆ ನಗರದ ಸಿ.ಎಸ್. ಮನೋಜ್ ಮತ್ತು ತಂಡದಿಂದ ಜನಪದ ನೃತ್ಯ, ೫.೩೦ ರಿಂದ ೬ರವರೆಗೆ ನಗರದ ಸುಶೀಲ ಮತ್ತು ತಂಡದಿಂದ ಹೋರಾಟದ ಗೀತೆ, ೬ರಿಂದ ೬.೩೦ರವರೆಗೆ ಎಲ್. ವಿಶ್ವನಾಥ್, ಪುಟ್ಟಣ, ಎಂ. ಮಹದೇವಸ್ವಾಮಿ, ಎಂ. ಶಶಿಕುಮಾರ್, ಕೆ.ಎಂ. ಮಹೇಶ್ ತಂಡದಿಂದ ಜನಪದ ಗೀತ ಗಾಯನ ಕಾರ್ಯಕ್ರಮಗಳು ಜರುಗಲಿವೆ.
ಸೆಪ್ಟೆಂಬರ್ ೩೦ ರಂದು ಬೆಳಿಗ್ಗೆ ೯ ರಿಂದ ೯.೧೫ ರವರೆಗೆ ಕಿಲಗೆರೆ ಎಂ. ಚೌಡಯ್ಯ ಮತ್ತು ತಂಡದಿಂದ ನಾದಸ್ವರ, ೯.೧೫ ರಿಂದ ೯.೩೦ರವರೆಗೆ ವೈ.ಕೆ ಮೋಳೆಯ ಪಿ. ಮಹೇಶ್ ಮತ್ತು ತಂಡದಿಂದ ನಾದಸ್ವರ, ೯.೩೦ರಿಂದ ೧೦.೧೫ರವರೆಗೆ ಮೈಸೂರಿನ ಸಿ.ವಿ. ಮಂಜುಳಾ ಮತ್ತು ತಂಡದವರಿಂದ ಕರ್ನಾಟಕ ಸಂಗೀತ, ೧೦.೧೫ರಿಂದ ೧೦.೩೦ರವರೆಗೆ ಕೂತನೂರು ಶ್ರೀ ಮದೇಶ್ವರ ಕಲಾ ಸಂಘದಿಂದ ಕಂಸಾಳೆ, ೧೦.೩೦ರಿಂದ ೧೦.೪೫ರವರೆಗೆ ಮಂಗಲದ ಪಿ. ನಾಗರಾಜು ಮತ್ತು ತಂಡದಿಂದ, ತಂಬೂರಿಪದ, ೧೦.೪೫ರಿಂದ ೧೧ರವರೆಗೆ ಚಿಲಕವಾಡಿ ಎಂ. ಶಿವಮೂರ್ತಿ ಮತ್ತು ತಂಡದಿಂದ ತಂಬೂರಿಪದ, ೧೧ರಿಂದ ೧೧.೧೫ರವರೆಗೆ ಮಲೆಯೂರು ಮಹೇಶ್ ಮತ್ತು ತಂಡದಿಂದ ತಂಬೂರಿಪದ, ೧೧.೧೫ರಿಂದ ೧೨ರವರಗೆ ಅಲ್ಕೆರೆ ಅಗ್ರಹಾರದ ಎಂ. ಶಿವಕುಮಾರ್ ಮತ್ತು ತಂಡದಿಂದ ತಂಬೂರಿಪದ, ಮಧ್ಯಾಹ್ನ ೧೨ರಿಂದ ೧೨.೧೫ರವರೆಗೆ ಬಾಚಳ್ಳಿ ಮಾದೇಶ್ ಮತ್ತು ತಂಡದಿಂದ ತಂಬೂರಿಪದ, ೧೨.೧೫ರಿಂದ ೧೨.೩೦ರವರೆಗೆ ನಗರದ ಮಹೇಶ್ ಮತ್ತು ತಂಡದಿಂದ ತಂಬೂರಿಪದ, ೧೨.೩೦ರಿಂದ ೧೨.೪೫ರವರೆಗೆ ಹೆಗ್ಗೋಠಾರ ಹೆಚ್.ಎಲ್. ರಾಜೇಂದ್ರ ಮತ್ತು ತಂಡದಿಂದ ತಂಬೂರಿಪದ, ೧೨.೪೫ರಿಂದ ೧ರವರೆಗೆ ರಾಮಸಮುದ್ರದ ಗೌರಿಶಂಕರ್ ಮತ್ತು ತಂಡದಿಂದ ತಂಬೂರಿಪದ, ೧ ರಿಂದ ೧.೧೫ರವರೆಗೆ ಮೈಸೂರಿನ ಡಾ. ಎಂ.ಪಿ. ಪ್ರೀತಮ್ ಮತ್ತು ತಂಡದಿಂದ ಸುಗಮ ಸಂಗೀತ, ೧.೧೫ರಿಂದ ೧.೪೫ರವರೆಗೆ ನಗರದ ರಾಕ್ಸ್ಟಾರ್ ನೃತ್ಯ ಶಾಲೆ ವತಿಯಿಂದ ನೃತ್ಯ ರೂಪಕ, ೧.೪೫ರಿಂದ ೨.೩೦ರವರೆಗೆ ಎಸ್.ಪಿ. ಬಾಲಸುಬ್ರಮಣ್ಯಂ ಗಾನ ಗಂಧರ್ವ ಸಾಂಸ್ಕೃತಿಕ ಕಲಾ ವೇದಿಕೆಯ ಎಚ್.ಎಂ. ಶಿವಣ್ಣ ಅವರಿಂದ ಜಾನಪದ ಗೀತಗಾಯನ, ೨.೩೦ ರಿಂದ ೩ರವರೆಗೆ ಬೆಂಡರವಾಡಿ ಮಹೇಂದ್ರ ವರ್ಮ ಮತ್ತು ತಂಡದಿಂದ ವಾದ್ಯ ಸಂಗೀತ, ೩ರಿಂದ ೫ರವರೆಗೆ ಸ್ಥಳೀಯ ಸೋಬಾನೆ ಕಲಾವಿದರ ೧೬ ತಂಡಗಳಿಂದ ಸೋಬಾನೆ ಸಂಭ್ರಮ, ಸಂಜೆ ೫ರಿಂದ ೫.೩೦ರವರೆಗೆ ನರಸೀಪುರದ ಶ್ರೀ ಶಾರದ ಡ್ಯಾನ್ಸ್ ಕ್ಲಾಸ್ ನ ಪುಷ್ಪಲತಾ ಅವರಿಂದ ನೃತ್ಯರೂಪಕ, ೫.೩೦ ರಿಂದ ೬ರವರೆಗೆ ಎಸ್. ಗುರುರಾಜು, ಎನ್. ಪ್ರಸಾದ್, ಎಂ. ಲೋಕೇಶ್, ಪಿ.ಎಂ. ಬ್ರಹ್ಮೇಶ್, ವಿ. ಸುಂದರಮೂರ್ತಿ, ಎಸ್. ಗಿರೀಶ್, ಜಿ. ಸಿದ್ದಾಪ್ಪಾಜಿ ತಂಡದಿಂದ ಸಂಗೀತ ಸಂಜೆ ಕಾರ್ಯಕ್ರಮಗಳು ಜರುಗಲಿವೆ.