ಸರಗೂರಿನ ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ನ ಅಂಗ ಸಂಸ್ಥೆಯಾದ ಜನಧ್ವನಿ ಸಮುದಾಯ ಬಾನುಲಿ ಕೇಂದ್ರವು 2012 ರಲ್ಲಿ ಫೆಬ್ರವರಿ 24 ರಂದು ಧ್ವನಿ ಇಲ್ಲದವರಿಗೆ ಧ್ವನಿ ನೀಡುವ ಉದ್ದೇಶದಿಂದ ಕಳೆದ 9 ವರ್ಷಗಳಿಂದ ಜನರ ಧ್ವನಿಯಾಗಿ, ಸಮುದಾಯ ಅಭಿವೃದ್ಧಿಯ ಸಾರಥಿಯಾಗಿ, ಜನರ ಜೀವನದ ಗುಣಮಟ್ಟವನ್ನು ಹೆಚ್ಚಿಸುವ ಧ್ವನಿಯಾಗಿ, ಜನರಿಗೆ ಶಿಕ್ಷಣ, ಆರೋಗ್ಯ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಅರಿವು ನೀಡುತ್ತಾ ಸದಾ ಸಮುದಾಯವನ್ನು ಅಭಿವೃದ್ಧಿಯ ಪಥದಲ್ಲಿಯೇ ಸಾಗಿಸಿಕೊಂಡು ತನ್ನ ಇರುವಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸುವತ್ತ ಸಾಗುತ್ತಿರುವ ಜನಧ್ವನಿ ಸಮುದಾಯ ಬಾನುಲಿ ಕೇಂದ್ರವು ಇಂದಿಗೆ 9 ವಸಂತಗಳನ್ನು ಪೊರೈಸಿ 10 ನೇ ವಸಂತಕ್ಕೆ ಕಾಲಿಟ್ಟಿದೆ.

9 ವರ್ಷದಿಂದಲೂ ಒಂದು ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರುವಂತಹ ನಿಟ್ಟಿನಲ್ಲಿ ತನ್ನ ಕಾರ್ಯವನ್ನು ನಿರಂತರವಾಗಿ ಮಾಡುತ್ತಾ ಬಂದಿರುವ ಜನಧ್ವನಿ ಸಮುದಾಯ ಬಾನುಲಿಯು ಪ್ರಾರಂಭದಲ್ಲಿ ವಾರದಲ್ಲಿ ಕೇವಲ ಅರ್ಧ ಗಂಟೆಗಳಿಗೆ ಮಾತ್ರ ಸೀಮಿತವಾಗಿದ್ದು, ಪ್ರಸ್ತುತ ದಿನದಲ್ಲಿ 14 ಗಂಟೆಗಳ ಕಾಲ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಾ ಸ್ಥಳೀಯ ಜನತೆಗೆ ಮಾಹಿತಿಯನ್ನು ನೀಡುತ್ತಾ ಅವರ ಅಭಿವೃದ್ಧಿಗೆ ಶ್ರಮಿಸುತ್ತಾ ಬಂದಿದೆ.

ಇಂದಿನ ತಾಂತ್ರಿಕ ಜಗತ್ತಿನಲ್ಲಿಯೂ ಅದರಲ್ಲೂ ಹಲವು ವಿದ್ಯುನ್ಮಾನ ಮಾಧ್ಯಮಗಳ ಹಾವಳಿಯಿದ್ದರೂ ಜನಧ್ವನಿ ಬಾನುಲಿಯು ಸಮುದಾಯಕ್ಕೆ ಸೀಮಿತವಾಗಿದೆ ಎಂದು ಸ್ಥಳೀಯ ಜನಸಮೂಹವೇ ಒಪ್ಪಿಕೊಂಡಿದ್ದು ಇದರ ನಿರಂತರ ಕೇಳುಗರರಾಗಿರುವುದು ಮತ್ತೊಂದು ಅಚ್ಚರಿಯ ಸಂಗತಿ.

ಈ ಬಾನುಲಿಯಲ್ಲಿ ಸಮುದಾಯದವರ ಭಾಗವಹಿಸುವಿಕೆಯೇ 85% ಇದ್ದು, ಸಮುದಾಯದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಂತಹ ಹಲವು ಕಾರ್ಯಕ್ರಮಗಳು ಪ್ರಸಾರವಾಗುತ್ತಿದೆ. ಸಮುದಾಯದ ಅಭಿವೃದ್ಧಿಗಾಗಿ ಜನಧ್ವನಿಯು ಪ್ರಸ್ತುತ ವಾರದಲ್ಲಿ 40ಕ್ಕೂ ಹೆಚ್ಚು ವಿವಿಧ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಾ ಬರುತ್ತಿದೆ. ಅದರಲ್ಲೂ ಹೆಚ್.ಡಿ ಕೋಟೆ ಮತ್ತು ಸರಗೂರು ತಾಲ್ಲೂಕಿನ ಎಲ್ಲಾ ಹಾಡಿಗಳ ಸಂಸ್ಕೃತಿ ಮತ್ತು ಅವರ ಆಚಾರ ವಿಚಾರಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ಅವರ ಸಂಸ್ಕೃತಿಯನ್ನು ಕಟ್ಟಿಕೊಡುವಂತಹ ‘ನಂಗ ಕಾಡು ನಂಗ ಜನ’ ಎಂಬ ಕಾರ್ಯಕ್ರಮವು ಪ್ರಸಾರವಾಗುತ್ತಿದೆ. ಅಷ್ಟೇ ಅಲ್ಲದೇ ವಿದ್ಯಾಥರ್ಿಗಳಿಗಾಗಿ ಕಲರವ, ಸ್ಪೋಕನ್ ಇಂಗ್ಲೀಷ್, ಸಾಮಾನ್ಯ ಜ್ಞಾನ, ಮನೆಯೇ ಮೊದಲ ಪಾಠಶಾಲೆ ಪ್ರಸಾರ ಮಾಡುತ್ತಿದೆ. ಇನ್ನು ಹೆಂಗಳೆಯರಿಗೆ ಮಹಿಳೆ ಕಾರ್ಯಕ್ರಮವನ್ನೂ ಪ್ರಸಾರ ಮಾಡುತ್ತಿದೆ, ಸಮುದಾಯದ ಆರೋಗ್ಯದ ದೃಷ್ಠಿಯಿಂದ ಆರೋಗ್ಯ ಮಂಥನ ಎಂಬ ನೇರ ಸಂದರ್ಶನ ಫೋನ್-ಇನ್ ಕಾರ್ಯಕ್ರಮ, ಆರೋಗ್ಯದಂಗಳ ಎಂಬ ಕಾರ್ಯಕ್ರಮಗಳು ಬಿತ್ತರಗೊಳ್ಳುತ್ತಿವೆ.

ಇನ್ನು ಸಕರ್ಾರದಿಂದ ಸಾರ್ವಜನಿಕರಿಗೆ ಲಭ್ಯವಿರುವ ಸವಲತ್ತುಗಳನ್ನು ತಿಳಿಸಲು ಸಾಮಾಜಿಕ ಸವಲತ್ತು ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಇಷ್ಟೇ ಅಲ್ಲದೆ ರೈತಧ್ವನಿ, ಯುವಚೇತನ, ಕಾನೂನು ಸಲಹೆ ಮುಕ್ತ ವ್ಯಸನ ಬದುಕ ಹಸನ ಯೋಗ ರೇಡಿಯೊ ಪಾಠ ಸ್ಥಳೀಯ ಸಂಸ್ಕೃತಿಯನ್ನು ಬಿಂಬಿಸುವ ಹಾಡುಹಸೆ ನಮ್ಮೂರು ಮುಂತಾದ ಅಭಿವೃದ್ಧಿಗೆ ಪೂರಕವೆನಿಸಿರುವ ಕಾರ್ಯಕ್ರಮಗಳು ಮೂಡಿಬರುತ್ತಿವೆ.
ಜನಧ್ವನಿಯ 9 ವರ್ಷದ ಸುಧೀರ್ಘ ಪಯಣದಲ್ಲಿ ಸ್ಥಳೀಯ ಸಮುದಾಯವನ್ನು ಸಕಾರಾತ್ಮಕ ಆಲೋಚನೆಗಳೆಡೆಗೆ ಕೊಂಡೊಯ್ಯುತ್ತಿದೆ. ಪ್ರಮುಖವಾಗಿ ಸಕರ್ಾರಿ ಅಧಿಕಾರಿಗಳು ಮತ್ತು ಸಾರ್ವಜನಿಕರಿಗೆ ಹಂಚಿಕೊಳ್ಳಲು ಸೇತುವೆಯಂತೆ ಜನಧ್ವನಿ ಸಮುದಾಯ ಬಾನುಲಿಯು ಕಾರ್ಯವನ್ನು ನಿರ್ವಹಿಸುತ್ತಿದೆ. ಈ ಪರಿಣಾಮದಿಂದಾಗಿ ಎಷ್ಟೋ ಸಕರ್ಾರಿ ಅಧಿಕಾರಿಗಳು ಹಾಡಿಗಳಿಗೆ ಭೇಟಿ ನೀಡಿ ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸುವಂತೆ ಭರವಸೆ ನೀಡುವುದರಿಂದ ಹಿಡಿದು ಆ ಮನವಿಯನ್ನು ಪೂರೈಸುವವರೆಗೂ ಜನಧ್ವನಿಯೇ ಮುಂದೆ ನಿಂತು ಧ್ವನಿ ಇಲ್ಲದವರ ಧ್ವನಿಯಾಗಿ ಹಾಗೂ ನೀರು ನೈರ್ಮಲ್ಯದ ಬಗ್ಗೆ ಸಕಾಲದಲ್ಲಿ ಮಾಹಿತಿಯನ್ನು ಒದಗಿಸುವ ನಿಟ್ಟಿನಲ್ಲಿ ಕೆಲಸವನ್ನು ನಿರ್ವಹಿಸುತ್ತಿದೆ.

ಅಭಿವೃದ್ಧಿಯತ್ತ 9 ವರ್ಷ ಪೂರೈಸಿ 10 ನೇ ವರ್ಷಕ್ಕೆ ಪಾದಾರ್ಪಣೆ ಮಾಡಿರುವ ಜನಧ್ವನಿ ಸಮುದಾಯ ಬಾನುಲಿಯು ಹೀಗೆ ತನ್ನ ಕಾರ್ಯವನ್ನು ಮುಂದುವರೆಸುತ್ತಾ ಸಮುದಾಯದ ಅಭಿವೃದ್ಧಿಯಲ್ಲಿ ಮುಖ್ಯವಾಹಿನಿಯಾಗಿ ರೂಪುಗೊಳ್ಳಲಿ ಹಾಗೆಯೇ ಇಂತಹ ಸಮಾಜಮುಖಿಯಾದ ಮಾಧ್ಯಮಗಳು ಇನ್ನಷ್ಟು ಬೆಳಕಿಗೆ ಬರಲಿ ಎಂದು ಆಶಿಸುತ್ತಾ ನಮ್ಮ ನಿಮ್ಮೆಲರ ಕಡೆಯಿಂದಲೂ ಜನಧ್ವನಿಯ 10ನೇ ವರ್ಷದ ವಾಷರ್ಿಕೋತ್ಸವಕ್ಕೆ ಶುಭ ಹಾರೈಸೋಣ.

By admin