:- ಚಾಮುಂಡಿಬೆಟ್ಟದ ತಪ್ಪಲಿನ ಲಲಿತ್ರಾದಿಪುರದಲ್ಲಿರುವ ಮೈಸೂರು ನಗರಾಭಿವೃದ್ಧಿ
ಪ್ರಾಧಿಕಾರದ ಜಾಗದಲ್ಲಿ ಟೌನ್‌ಶಿಫ್ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ಮಾಡಲಾಯಿತು.
ಬೆಂಗಳೂರಿನಲ್ಲಿ ಯಶಶ್ವಿಯಾಗಿರುವ ಗುಂಪು ಮನೆ ಯೋಜನೆಯನ್ನು ಮೈಸೂರಿನಲ್ಲಿಯೂ ಜಾರಿಗೊಳಿಸುವ ಉದ್ದೇಶದಿಂದ ಲಲಿತಾದ್ರಿಪುರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮತ್ತು ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಎಂಜಿನಿಯರ್
ಮತ್ತು ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ಮಾಡಿದರು.
ಬಳಿಕ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಬೆಂಗಳೂರು ಮಾದರಿಯಲ್ಲೇ ಮೈಸೂರಿನ ಜನತೆಗೆ ಕೈ ಗೆಟುಕುವ ದರದಲ್ಲಿ ಮನೆ ನೀಡಲು ಈ ಯೋಜನೆ ರೂಪಿಸಲಾಗುತ್ತಿದೆ. ಲಲಿತಾದ್ರಿಪುರದ ೨೨ ಎಕರೆ ಪ್ರದೇಶದಲ್ಲಿ ೨೫೦೦ ಮನೆ ಕಟ್ಟುವ ಗುರಿ ಹೊಂದಲಾಗಿದೆ. ಈ ಟೌನ್‌ಶಿಪ್‌ನಲ್ಲಿ ಹಗ್ಗದ ದರದಲ್ಲಿ ಮನೆ ನೀಡಲಾಗುತ್ತದೆ.
ಟೌನ್‌ಶಿಫ್ ಒಳಗೆ ಕ್ಲಬ್ ಹಾಗೂ ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸುವ ಯೋಜನೆ ಇದೆ. ಇದಕ್ಕಾಗಿ ನಗರಾಭಿವೃದ್ಧಿ ಇಲಾಖೆಯ ಒಪ್ಪಿಗೆ ಪಡೆದು ೧೦-೧೫ ದಿನದೊಳಗೆ ಅನುಮತಿ ಪಡೆದು ಕೆಲಸ ಆರಂಭಿಸಲಾಗುವುದು. ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಅವರನ್ನು ಮೈಸೂರಿಗೆ ಕರೆಸಿ, ಅವರಿಂದಲೇ ಅನುಮೋದನೆ ಪಡೆದುಕೊಂಡು ಶಂಕು ಸ್ಥಾಪನೆ ನೆರವೇರಿಸಲಾಗುವುದು ಎಂದು ತಿಳಿಸಿದರು.
ಮೂಲ ಸೌಕರ್ಯ ಕಲ್ಪಿಸಿದರೆ ಅಪಾರ್ಟ್ಮೆಂಟ್ ಅನ್ನು ಜನರು ಇಷ್ಟ ಪಡುತ್ತಾರೆ. ನಿವೇಶಕ್ಕಾಗಿ ಮುಡಾಕ್ಕೆ ೮೫ ಸಾವಿರಕ್ಕೂ ಅಧಿಕ ಜನರು ಅರ್ಜಿ ಸಲ್ಲಿಸಿದ್ದಾರೆ. ಇವರೆಗೆ ನಿವೇಶನ ಕೊಡದಿದ್ದರೂ, ಮನೆಗಳನ್ನೇ ಕೊಡಬಹುದಾಗಿದೆ. ತಲಾಂತರದಲ್ಲೂ ನೆನಪಿಸಿಕೊಳ್ಳಬೇಕು. ಹಾಗೇ ಮನೆ ನಿರ್ಮಿಸಿಕೊಡುವ ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು.
ಬೆಂಗಳೂರಿನ ಹೊಲಗರನಹಳ್ಳಿಯಲ್ಲಿ ಗುಂಪು ಮನೆ ನಿರ್ಮಿಸಿದ್ದೇವೆ. ೧ಬಿಎಚ್‌ಕೆ, ೨ ಬಿಎಚ್‌ಕೆ, ೩ ಬಿಎಚ್‌ಕೆ ಉಳ್ಳ ಮನೆ ನಿರ್ಮಾಣ ಮಾಡಲಾಗಿತ್ತು. ಆರಂಭದಲ್ಲಿ ೨೫ ಲಕ್ಷ ರೂ. ಮಾರಾಟ ಆಗುತ್ತಿದ್ದ ಮನೆಗಳು, ಈಗ ೭೫ರಿಂದ ೮೫ ಲಕ್ಷ ರೂ. ವರೆಗೆ ಮಾರಾಟ ಆಗುವ ಮಟ್ಟಿಗೆ ಬೇಡಿಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಇದೇ ಮಾದರಿಯಲ್ಲೇ ಮೈಸೂರಿನಲ್ಲಿಯೂ ಜಾರಿಗೊಳಿಸಲಾಗುತ್ತದೆ.
ಈಗಾಗಲೇ ೮೫ ಸಾವಿರಕ್ಕೂ ಅಧಿಕ ಮಂದಿ ಮುಡಾದ ನಿವೇಶನಕ್ಕಾಗಿ ಕಾಯುತ್ತಿದ್ದಾರೆ. ಇವರೆಲ್ಲರಿಗೂ ನಿವೇಶನ ನೀಡಲು ಸಮಸ್ಯೆ ಆಗುತ್ತದೆ. ಹೀಗಾಗಿ ಕಡಿಮೆ ದರದಲ್ಲಿ ಮನೆ ನೀಡುವ ಉದ್ದೇಶದಿಂದ ಈ ಯೋಜನೆ ಆರಂಭಿಸಲಾಗುತ್ತಿದೆ ಎಂದು ತಿಳಿಸಿದರು.
ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್ ಮಾತನಾಡಿ, ಬೆಂಗಳೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿ ಸಾಮಾನ್ಯ ಜನರಿಗಾಗಿ ನಿರ್ಮಿಸಿರುವ ಗುಣಮಟ್ಟ ದ ಗುಂಪು ಮನೆಗಳಿಗೆ ಕಳೆದ ಹತ್ತು ದಿನದ ಹಿಂದೆ ನಮ್ಮ ತಂಡ ಭೇಟಿ ನೀಡಿತ್ತು. ಅಲ್ಲಿರುವ ಸವಲತ್ತುಗಳನ್ನು ಗಮನಿಸಿದ್ದೇವೆ.
ಒಂದು ವರ್ಗಕ್ಕೆ ಸೀಮಿತವಾಗಿರುವ ಗುಣಮಟ್ಟದ ಮನೆಗಳು ಮಧ್ಯಮ ಮತ್ತು ಕೆಳ ವರ್ಗದ ಜನರಿಗೆ ಸ್ಪರ್ಧಾತ್ಮಕ ದರದಲ್ಲಿ ಕೊಡಬಹುದು ಎಂಬ ವಿಶ್ವಾಸ ಬಂದಿದೆ. ಹೀಗಾಗಿ ಅದೇ ಮಾದರಿಯಲ್ಲಿ ಮೈಸೂರಿನಲ್ಲಿಯೂ ಜಾರಿಗೊಳಿಸಲು ಉದೇಶಿಸಲಾಗಿದೆ. ಬೆಂಗಳೂರಿನಲ್ಲಿ ೧೪ ಅಂತಸ್ತಿನ ಅಪಾರ್ಟ್ಮೆಂಟ್‌ಗಳಿವೆ. ದೊಡ್ಡ ಮಹಡಿ ಮನೆಗಳು ಮೈಸೂರಿನಲ್ಲಿ ಇಲ್ಲ. ಹೀಗಾಗಿ ಮುಡಾದ ಗುಂಪು ಮನೆ ಯೋಜನೆಯನ್ನು ಲಲಿತಾದ್ರಿಪುರದ ಮುಡಾ ಜಾಗವನ್ನು ಆಯ್ಕೆ ಮಾಡಿದ್ದೇವೆ.
ಚಾಮುಂಡಿ ಬೆಟ್ಟದ ಅಹ್ಲಾದಕರ ವಾತವರಣ, ನೀರು, ಒಳ ಚರಂಡಿಯ ಮಾರ್ಗ ಈಗಾಗಲೇ ಇದೆ. ಅಲ್ಲದೆ ಮೂಲ ಸೌಕರ್ಯ ಒದಗಿಸಿ ಟೌನ್‌ಶಿಫ್ ನಿರ್ಮಾಣಕ್ಕೆ ಇಲ್ಲಿ ಸೂಕ್ತವಾಗಿದೆ. ಯೋಜನೆಗೆ ಡಿಪಿಆರ್ ತಯಾರಿಸಿ ಸರಕಾರಕ್ಕೆ ಸಲ್ಲಿಸಲಾಗುವುದು. ಮೈಸೂರಿನ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದವರಿಗೆ ಕೈ ಗೆಟುಕುವ ದರದಲ್ಲಿ ಮನೆಗಳು ಸಿಗುವಂತಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತರಾದ ಡಾ. ಡಿ.ಬಿ.ನಟೇಶ್, ಅದೀಕ್ಷಕ ಇಂಜಿನೀಯರ್ ಶಂಕರ್, ಕಾರ್ಯಪಾಲ ಇಂಜಿನೀಯರ್ ಸತೀಶ್ ಪಾಂಡುರ0ಗ, ವಲಯ ಅಧಿಕಾರಿಗಳಾದ ರವಿಶಂಕರ್, ಭಾಸ್ಕರ್, ರವೀಂದ್ರ ಕುಮಾರ್, ರಾಘವೇಂದ್ರ, ನಗರ ಯೋಜಕ ಸದಸ್ಯರಾದ ಜಯಸಿಂಹ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.