ನಾಳೆಯಿಂದ ಐಪಿಎಲ್ ಟಿ-20 ಪಂದ್ಯಗಳು ಆರಂಭ | ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್
ಮುಂಬೈ : ಬಹುನಿರೀಕ್ಷಿತ ೧೫ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ನಾಳೆಯಿಂದ ಬರುವ ಮೇ ೨೨ರವರೆಗೆ ನಡೆಯಲಿವೆ. ಈ ಪಂದ್ಯಗಳಿಗಾಗಿ ಆಟಗಾರರು ಮತ್ತು ಕ್ರೀಡಾಂಗಣಗಳು ಸಜ್ಜಾಗಿವೆ. ಆದರೆ ಟಿ-೨೦ ಕ್ರಿಕೆಟ್ ಪಂದ್ಯದ ಮೇಲೆ ಉಗ್ರರ ಕಣ್ಣು ಬಿದ್ದಿರುವ ಅಂಶ ಇದೀಗ ಬಹಿರಂಗಗೊಂಡಿದೆ. ಮುಂಬೈ, ನವಿ ಮುಂಬೈ ಮತ್ತು ಪುಣೆಯಲ್ಲಿ ಐಪಿಎಲ್ ನಡೆಯಲಿದ್ದು, ಐಪಿಎಲ್ ಟೂರ್ನಿ ಉಗ್ರರ ಹಿಟ್ ಲಿಸ್ಟ್‌ನಲ್ಲಿದೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಈ ಕುರಿತು ಬಂಧನಕ್ಕೆ ಒಳಗಾಗಿರುವ ಉಗ್ರನೊಬ್ಬ ಬಾಯಿ
ಬಿಟ್ಟಿರುವುದಾಗಿ ಭಯೋತ್ಪಾದನಾ ನಿಗ್ರಹ ದಳ ಹೇಳಿದೆ. ಈತನ ಪ್ರಕಾರ ವಾಂಖೆಡೆ ಸ್ಟೇಡಿಯಂ, ಟ್ರೈಡೆಂಟ್ ಹೋಟೆಲ್, ನಾರಿಮನ್ ಪಾಯಿಂಟ್ ಹಾಗೂ ಆಟಗಾರರ ಹೋಟೆಲ್ ಸ್ಟೇಡಿಯಂ
ಸುತ್ತಮುತ್ತಲ ಪ್ರದೇಶಗಳ ಮಾಹಿತಿಯನ್ನು ಸ್ಫೋಟಗೊಳಿಸುವ ಉದ್ದೇಶದಿಂದ ಸಂಗ್ರಹಿಸಿರುವುದಾಗಿ ಆತ ಹೇಳಿದ್ದಾನೆ. ಈ ಹಿನ್ನೆಲೆಯಲ್ಲಿ ಐಪಿಎಲ್ ತಂಡಗಳ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಕ್ವಿಕ್ ರೆಸ್ಪಾನ್ಸ್ ಟೀಮ್, ಬಾಂಬ್ ಸ್ಕ್ವಾಡ್, ರಾಜ್ಯ ಮೀಸಲು ಪೊಲೀಸ್ ಪಡೆಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.