ಮೈಸೂರು: ಕೊರೊನಾ ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ಜಿಮ್ ಟ್ರೈನರ್ ಗಳಿಗೆ ಮೈಸೂರು ಜಿಮ್ ಅಂಡ್ ಫಿಟ್ ನೆಸ್ ಮಾಲೀಕರ ಸಂಘದ ವತಿಯಿಂದ ದಿನಸಿ ಕಿಟ್ ಗಳನ್ನು ವಿತರಿಸಲಾಯಿತು.
ಸರಸ್ವತಿ ಪುರಂನಲ್ಲಿರುವ ಸಂಘದ ಕಚೇರಿಯಲ್ಲಿ 100ಕ್ಕೂ ಹೆಚ್ಚು ಜಿಮ್ ಟ್ರೈನರ್ ಗಳಿಗೆ ಕಿಟ್ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅಧ್ಯಕ್ಷ ಎಂ.ಎಸ್.ಹರ್ಷ ಅವರು, ಜಿಮ್ ವೃತ್ತಿಯನ್ನೇ ನಂಬಿ ಬದುಕುತ್ತಿದ್ದ ಟ್ರೈನರ್ ಗಳು ಲಾಕ್ ಡೌನ್ ನಿಂದ ತೊಂದರೆಯಲ್ಲಿದ್ದಾರೆ. ಆದ್ದರಿಂದ ಸಂಘದ ವತಿಯಿಂದ ಮೈಸೂರಿನ ಎಲ್ಲ ಜಿಮ್ ಟ್ರೈನರ್ ಗಳಿಗೆ ಕಿಟ್ ಹಂಚಿಕೆ ಮಾಡಿದ್ದೇವೆ. ಮುಂದಿನ ದಿನಗಳಲ್ಲೂ ಜಿಮ್ ಟ್ರೈನರ್ ಗಳ ಜೊತೆ ನಾವಿದ್ದೇವೆ ಎಂದು ಭರವಸೆ ನೀಡಿದರು.
ಈ ವೇಳೆ ಮೈಸೂರು ಜಿಮ್ ಅಂಡ್ ಫಿಟ್ ನೆಸ್ ಮಾಲೀಕರ ಸಂಘದ ಕಾರ್ಯದರ್ಶಿ ಸುರೇಶ್ ಚಂದ್ರ, ಖಜಾಂಚಿ ಆಕಾಶ್ ದೀಪ್, ನಿರ್ದೇಶಕರಾದ ಅರುಣ್ ರಂಗ, ಶಾಮರಾವ್, ಅಭಯ್ ಸೂರ್ಯ, ರವಿಕುಮಾರ್, ಪದಾಧಿಕಾರಿಗಳು ಹಾಗೂ ಇನ್ನಿತರ ಜಿಮ್ ಟ್ರೈನರ್ ಗಳು ಇದ್ದರು.