ಚಾಮರಾಜನಗರ: ಅಪರಾಧಿಗಳಲ್ಲಿಯೂ ಸಾಕ? ಕೌಶಲ್ಯಗಳಿದ್ದು, ಮುಂದಿನ ದಿನಗಳಲ್ಲಿ ಕಾರಾಗೃಹದಿಂದ ಬಂಧಮುಕ್ತರಾದ ಬಳಿಕ ಉತ್ತಮ ಜೀವನ ನಡೆಸಲು ಕೌಶಲ್ಯಾಭಿವೃದ್ಧಿ ತರಬೇತಿ ಸಹಕಾರಿಯಾಗಲಿದೆ ಎಂದು ಜಿಲ್ಲಾ ಕಾನೂ ಸೇವಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾ ಪ್ರಧಾನ ಮತ್ತು ಸೆ?ನ್ಸ್ ನ್ಯಾಯಾಧೀಶರಾದ ಸದಾಶಿವ ಸುಲ್ತಾನಪುರಿ ಅವರು ತಿಳಿಸಿದರು.

ಕಾರಾಗೃಹ ಮತ್ತು ಸುಧಾರಣಾ ಸೇವೆಗಳು, ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ, ಎಸ್.ಬಿ.ಐ ನ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ ಹಾಗೂ ಕೊಯಮತ್ತೂರಿನ ಇಶಾ ಫೌಂಡೇಶನ್ ಇವರ ಸಹಯೋಗದಲ್ಲಿ ನಗರದ ಜಿಲ್ಲಾ ಕಾರಾಗೃಹದಲ್ಲಿ ಬುಧವಾರ ಆಯೋಜಿಸಲಾಗಿದ್ದ ಬಂದಿಗಳಿಗಾಗಿ ಕೌಶಲ್ಯಾಭಿವೃದ್ಧಿ ಹಾಗೂ ಯೋಗ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಡಿದರು.

ಅಪರಾಧಗಳಿಗೆ ಸಾಕಷ್ಟು ಕಾರಣಗಳಿರುತ್ತವೆ. ಉದ್ದೇಶಪೂರ್ವಕವಾಗಿ ಯಾರು ಅಪರಾಧ ಮಾಡುವುದಿಲ್ಲ. ಅಪರಾಧಿಗಳ ಕೌಟುಂಬಿಕ ಪರಿಸ್ಥಿತಿ ಒಂದೇ ರೀತಿ ಇರುವುದಿಲ್ಲ. ಶಿಕ್ಷೆ ಅನುಭವಿಸಿದ ನಂತರದ ಜೀವನ ಸುಖಕರವಾಗಿ ನಡೆಸಲು ಉದ್ಯೋಗದ ಅವಶ್ಯಕತೆ ಇರುತ್ತದೆ. ಹಾಗಾಗಿ ಜೈಲಿನಿಂದ ಹೊರಬಂದ ಕೈದಿಗಳ ಜೀವನೋಪಾಯಕ್ಕಾಗಿ ಸರ್ಕಾರ ಕೌಶಲ್ಯ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಬಂಧನದಿಂದ ಹೊರಬಂದ ಅಪರಾಧಿಗಳ ನಂತರದ ಜೀವನ ಉತ್ತಮವಾಗಿರಲಿ ಎಂಬುದೇ ಈ ಕಾರ್ಯಗಾರದ ಉದ್ದೇಶವಾಗಿದೆ ಎಂದರು.

ಕಾರ್ಯಗಾರದಲ್ಲಿ ಮೇಣದಬತಿ, ಊದುಬತ್ತಿ, ಫಾಸ್ಟ್‌ಪುಡ್ ಹಾಗೂ ಇತರೆ ಉದ್ಯೋಗಗಳ ಕುರಿತು ತರಬೇತಿ ನೀಡಲಾಗುತ್ತಿದ್ದು, ಇದರ ಸದುಪಯೋಗ ಪಡೆದುಕೊಂಡು ಮತ್ತೆ ಯಾವುದೇ ರೀತಿಯ ತಪ್ಪುಗಳನ್ನು ಮಾಡದಂತೆ ಜಾಗರೂಕರಾಗಿರಿ. ಜೈಲಿನಿಂದ ಬಿಡುಗಡೆಯಾದ ನಂತರ ಈ ತರಬೇತಿಯು ಸಾಕ? ಸಹಕಾರಿಯಾಗಲಿದೆ ಎಂದು ನ್ಯಾಯಾಧೀಶರಾದ ಸದಾಶಿವ ಸುಲ್ತಾನಪುರಿ ಅವರು ತಿಳಿಸಿದರು.

ಭಾರತೀಯ ಸ್ಟೇಟ್ ಬ್ಯಾಂಕ್ ರಾಜ್ಯ ನಿರ್ದೇಶಕರಾದ ಕೆಎಂ ಮಂಜುನಾಥ್ ಮಾತನಾಡಿ ಸಾಕ? ಸಂದರ್ಭಗಳು ತಪ್ಪು ಮಾಡಲು ಕಾರಣವಾಗಿದ್ದು, ಶಿಕ್ಷೆಗೆ ಗುರಿಯಾಗಿ ಜೈಲಿನಿಂದ ಹೊರಬಂದವರಿಗೆ ಸಮಾಜದಲ್ಲಿ ಉದ್ಯೋಗಗಳು ಬಹುಬೇಗನೆ ಸಿಗುವುದಿಲ್ಲ. ಅದನ್ನು ತಪ್ಪಿಸುವ ಸಲುವಾಗಿ ತರಬೇತಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸ್ವಯಂ ಉದ್ಯೋಗದಿಂದ ಕೆಲಸಕ್ಕಾಗಿ ಅಲೆಯುವ ಪರಿಸ್ಥಿತಿ ತಪ್ಪುತ್ತದೆ ಅಲ್ಲದೆ ಮತ್ತ? ಜನರಿಗೆ ಉದ್ಯೋಗ ಕೊಡಲು ಸಾಧ್ಯವಾಗುತ್ತದೆ ಎಂದರು.

ಆರ್ಥಿಕ ಪರಿಸ್ಥಿತಿಗಳಿಗೂ ಮತ್ತು ಅಪರಾಧಕ್ಕೂ ನೇರ ಸಂಬಂಧವಿರುವುದರಿಂದ ಅಪರಾಧಕ್ಕೆ ಹೆಚ್ಚಿನ ಸಂದರ್ಭಗಳಲ್ಲಿ ಬಡತನವೇ ಕಾರಣವಾಗಿರುತ್ತದೆ. ಈ ನಿಟ್ಟಿನಲ್ಲಿ ಆರ್ಥಿಕ ನೆರವನ್ನು ನೀಡಲು ಸ್ವಯಂ ಉದ್ಯೋಗಗಳು ಸಹಕಾರಿಯಾಗಲಿದೆ ಎಂದು ಮಂಜುನಾಥ್ ಅವರು ತಿಳಿಸಿದರು.

ಭಾರತೀಯ ಸ್ಟೇಟ್ ಬ್ಯಾಂಕಿನ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯ ಮುಖ್ಯ ವ್ಯವಸ್ಥಾಪಕರು ಹಾಗೂ ನಿರ್ದೇಶಕರಾದ ಎಸ್. ಅರುಣ್ ಅವರು ಮಾತನಾಡಿ ಸ್ವಯಂ ಉದ್ಯೋಗಕ್ಕೆ ಸರ್ಕಾರದಿಂದ ಸಬ್ಸಿಡಿ ಮೂಲಕ ಸಾಲ ಸೌಲಭ್ಯ ಪಡೆಯಬಹುದಾಗಿದ್ದು ತರಬೇತಿಯನ್ನು ಸದುಪಯೋಗ ಪಡೆದು ಜೀವನ ರೂಪಿಸಿಕೊಳ್ಳಿ ಎಂದರು.

ಜಿಲ್ಲಾ ಕಾರಾಗೃಹದ ಅಧೀಕ್ಷಕರಾದ ವಿಜಯ್ ರೋಡ್‌ಕರ್, ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಮಹಮ್ಮದ್ ಅಕ್ಬರ್, ಇಶಾ ಫೌಂಡೇಶನ್ ಯೋಗ ಶಿಕ್ಷಕರಾದ ಪ್ರಮೋದ್ ಕಾರ್ಯಕ್ರಮದಲ್ಲಿ ಹಾಜರಿದ್ದರು.