ಚಾಮರಾಜನಗರ: ಭಾರತದ ಯುವಶಕ್ತಿ ಪ್ರಪಂಚದಲ್ಲಿ ಶ್ರೇ? ಶಕ್ತಿಯಾಗಿ ಬೆಳೆಯುತ್ತಿರುವುದು ಭವಿ?ದಲ್ಲಿ ಹೊಸ ದೃಷ್ಟಿಕೋನದೊಂದಿಗೆ ಸಂಸ್ಕೃತಿ, ಪರಂಪರೆ, ರಾಷ್ಟ್ರೀಯತೆ, ವ್ಯಕ್ತಿತ್ವ ವಿಕಾಸ, ಬೌದ್ಧಿಕ ಶಕ್ತಿಯನ್ನು ದೇಶಕ್ಕಾಗಿ ಅರ್ಪಿಸುವ ಮಾನಸಿಕತೆಯನ್ನು ಯುವಕರಲ್ಲಿ ಮತ್ತು ಮಕ್ಕಳಲ್ಲಿ ರೂಪಿಸುತ್ತಿರುವ ಯೂತ್ ಫಾರ್ ಸೇವಾ ಸಂಸ್ಥೆ ಭಾರತದ ಶಕ್ತಿಶಾಲಿ ಸಂಸ್ಥೆ ಆಗುತ್ತದೆ ಎಂದು ಕನ್ನಡ ಸಾಹಿತ್ಯ ಪರಿ?ತ್ತಿನ ಅಧ್ಯಕ್ಷರು ಹಾಗೂ ರಾ? ಯುವ ಪ್ರಶಸ್ತಿ ಪುರಸ್ಕೃತ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಸೇವಾ ಭಾರತಿ ಕಾಲೇಜು ಆವರಣದಲ್ಲಿ ಯೂಥ್ ಫಾರ್ ಸೇವಾ ಸಂಸ್ಥೆ ಚಾಮರಾಜನಗರ ತಾಲೂಕಿನ ೧೭ ಸರ್ಕಾರಿಶಾಲೆ ವಿದ್ಯಾರ್ಥಿಗಳ ಪ್ರತಿಭಾ ವಿಕಾಸಕ್ಕಾಗಿ ರೂಪಿಸಿದ್ದ ಚಿಗುರು ಜಾನಪದ ವೈಭವ ೨೩ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಸರ್ಕಾರಿ ಶಾಲೆಯ ಮಕ್ಕಳಲ್ಲಿ ಧೈರ್ಯ ,ಸಾಹಸ ,ಮನೋವಿಕಾಸ, ಪ್ರತಿಭೆ ಅಪಾರವಾಗಿದೆ . ವೇದಿಕೆಗಳ ಮೂಲಕ ಅವರೆಲ್ಲರ ಪ್ರತಿಭೆಯನ್ನು ಅನಾವರಣಗೊಳಿಸಿ ಉತ್ತಮ ವ್ಯಕ್ತಿಯಾಗಿ ರೂಪಿಸುವ ಹೊಣೆ ಹೊತ್ತಿರುವ ಯೂಥ್ ಫಾರ್ ಸೇವಾ ಸಂಸ್ಥೆ ಚಾಮರಾಜನಗರ ಜಿಲ್ಲೆಯಲ್ಲಿ ಹೆಮ್ಮರವಾಗಿ ಬೆಳೆಯಲಿ ಎಂದರು.
೬೦೦ಕ್ಕೂ ಹೆಚ್ಚು ಪ್ರತಿಭಾನ್ವಿತ ವಿದ್ಯಾರ್ಥಿಗಳು ರಂಗೋಲಿ ,ಜನಪದ ನೃತ್ಯ, ಜನಪದ ಗಾಯನ, ಕಸದಿಂದ ರಸ , ಚಿತ್ರಕಲೆ ಶ್ಲೋಕ ಪಠಣ ಚೀಟಿ ಎತ್ತಿ ಭಾ?ಣ, ವೇ?ಭೂ?ಣ, ಮಣ್ಣಿನ ಮಾದರಿ, ಯೋಗ, ಬೆಂಕಿ ಇಲ್ಲದ ಅಡಿಗೆ, ಕಬ್ಬಡ್ಡಿ ,ಗೋಣಿಚೀಲದ ಓಟ ರಿಲೇ ಓಟ ,ಚೋಟ ವಿಜ್ಞಾನಿ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವುದು ಹೆಮ್ಮೆಯ ವಿ?ಯವೆಂದು, ಪೋ?ಕರಿಗೆ ಹಾಗೂ ಶಿಕ್ಷಕರಿಗೆ ವಿಶೇ?ವಾಗಿ ಧನ್ಯವಾದಗಳನ್ನು ಅರ್ಪಿಸಬೇಕು. ಮಕ್ಕಳ ವಿಕಾಸಕ್ಕಾಗಿ ಪೋ?ಕರು ಮತ್ತು ಶಿಕ್ಷಕರು ಸದಾ ಕಾಲ ಅರ್ಪಣಾ ಭಾವನೆಯನ್ನು ಬೆಳೆಸಿಕೊಳ್ಳಬೇಕಿದೆ.
ಚಾಮರಾಜನಗರ ಜಿಲ್ಲೆ ಜಾನಪದ ವೈಭವದ ಶಕ್ತಿ ಕೇಂದ್ರ. ಜನಪದದ ಹೃದಯದ ಜೀವನ ನಮ್ಮದಾಗಲಿ, ಪರಸ್ಪರ ಪ್ರೀತಿಸುವ ಗುಣ ನಮ್ಮದಾಗಲಿ, ಮಕ್ಕಳು ಮುಂದಿನ ರಾ? ನಿರ್ಮಾಣದಲ್ಲಿ ಸದೃಢತೆ ,ರಾಷ್ಟ್ರೀಯತೆ, ರಾ?ಭಕ್ತಿ, ಸಂಸ್ಕೃತಿ ಚಿಂತನೆ ,ಪರಂಪರೆಯ ಉಳಿವಿಗಾಗಿ ಶಕ್ತಿಮೀರಿ ಪ್ರಯತ್ನಿಸೋಣ ಎಂದರು.
ಉದ್ಘಾಟಿಸಿದ ಸಮಾಜ ಸೇವಕರಾದ ಜಿ ಆರ್ ಅಶ್ವಥ್ ನಾರಾಯಣ್ ರವರು ಮಾತನಾಡಿ ಮಕ್ಕಳು ದೇವರ ಸಮಾನ. ಮಕ್ಕಳಲ್ಲಿರುವ ಎಲ್ಲಾ ಪ್ರತಿಭೆಯನ್ನು ಕೊರತರುವ ಜವಾಬ್ದಾರಿ ನಮ್ಮ ಮೇಲಿದೆ. ಸಾಂಸ್ಕೃತಿಕ ಮತ್ತು ಬೌದ್ಧಿಕ ಶಕ್ತಿಯ ಅನಾವರಣಕ್ಕೆ ಚಿಗುರು ಮೂಲಕ ಯೂತ್ ಫಾರ್ ಸೇವಾ ಸಂಸ್ಥೆ ಕಾರ್ಯನಿರ್ವಹಿಸುತ್ತಿರುವುದು ಅಭಿನಂದನೆ ವಾದದ್ದು ಎಂದರು.
ಯೂಥ್ ಫಾರ್ ಸೇವಾ ಸಂಸ್ಥೆಯ ದಕ್ಷಿಣ ಪ್ರಾಂತ್ಯದ ಮುಖ್ಯಸ್ಥರಾದ ರಾಘವೇಂದ್ರರವರು ಪ್ರಾಸ್ತಾವಿಕ ಮಾತನಾಡಿ ದೇಶಕ್ಕಾಗಿ ಸೇವೆಯನ್ನು ಸಲ್ಲಿಸುವ ಧ್ಯೇಯದೊಂದಿಗೆ ಯುವಕರಲ್ಲಿ ಸೇವಾಗುಣವನ್ನು ಬೆಳೆಸುವ ಜೊತೆಗೆ ಸಾಮಾಜಿಕ ಜವಾಬ್ದಾರಿಯನ್ನು ಬಲವಾಗಿ ಮೂಡಿಸುವ ದಿಕ್ಕಿನಲ್ಲಿ ಯೂತ್ ಫಾರ್ ಸೇವಾ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಚಿಗುರು ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸೇವಾ ಭಾರತೀ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿ ಎಸ್ ರಮೇಶ್, ಮಾನಸಿಕ ಆರೋಗ್ಯ ಪ್ರಾಧಿಕಾರದ ಸದಸ್ಯರಾದ ಕೆವಿ ರಾಜಣ್ಣ, ಯೂಥ್ ಫಾರ್ ಸೇವಾ ಸಂಸ್ಥೆಯ ದಕ್ಷಿಣ ಪ್ರಾಂತ್ಯದ ಮುಖ್ಯಸ್ಥರಾದ ರಾಘವೇಂದ್ರ, ಬೆಂಗಳೂರಿನ ಹರೀಶ್ ಭಟ್, ಉಪನ್ಯಾಸಕಿ ಮೇಘಶ್ರೀ ಶಿಕ್ಷಕರಾದ ರವಿಕುಮಾರ್, ಸೇವಾ ಸಂಸ್ಥೆಯ ವಿ? ,ತೇಜು ನಾಯಕ್ ಇದ್ದರು.
೧೭ ಸರ್ಕಾರಿ ಶಾಲೆಯ ೬೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ನೂರಾರು ಸಂಖ್ಯೆಯ ಯೂತ್ ಫಾರ್ ಸೇವಾ ಸಂಸ್ಥೆಯ ಕಾರ್ಯಕರ್ತರು ಹಾಗೂ ಪೋ?ಕರು, ಶಿಕ್ಷಕರು ಉಪಸ್ಥಿತರಿದ್ದರು.