ಚಾಮರಾಜನಗರ: ಚಾಮರಾಜನಗರ ತಾಲೂಕಿನ ಚಿಕ್ಕಮೋಳೆ ವಿಶೇಷ ಘಟಕ ಯೋಜನೆ ಯಡಿಯಲ್ಲಿ ರಸ್ತೆ,ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಗುದ್ದಲಿಪೂಜೆ ನೆರವೇರಿಸಿದರು.
ನಂತರ ಮಾತನಾಡಿ ಶಾಸರು ಚಿಕ್ಕಮೋಳೆ ಗ್ರಾಮದಲ್ಲಿ ವಿಶೇಷ ಘಟಕ ಯೋನಾಡಿಯಲ್ಲಿ ೪೦ಲಕ್ಷರೂ ವೆಚ್ಚದಲ್ಲಿ ರಸ್ತೆ ಚರಂಡಿ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಗ್ರಾಮೀಣ ಪ್ರದೇಶಗಳ ಜನರ ಅನುಕೂಲಕ್ಕಾಗಿ ತಮ್ಮ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಈಗಾಗಲೇ ರಸ್ತೆ ಅಭಿವೃದ್ದಿ ಕಾಮಗಾರಿಗಳು ಹಲವಾರು ಗ್ರಾಮಗಳಲ್ಲಿ ಪೂರ್ಣ ಗೂಂಡಿದು ಇನ್ನು ಕೆಲವು ಗ್ರಾಮಗಳಲ್ಲಿ ಪ್ರಗತಿಯಲ್ಲಿವೆ.ಎಂದರು
ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಜನರಿಗೆ ಅಗತ್ಯವಾಗಿ ಬೇಕಾದ ಗ್ರಾಮಗಳಿಗೆ ರಸ್ತೆ,ಚರಂಡಿ, ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಜನತೆಗೆ ತಲುಪಿಸುವುದೇ ಜನಪ್ರತಿನಿಧಿಗಳ ಕಾರ್ಯವಾಗಿದೆ, ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾರ್ಯವು ಶಾಶ್ವತವಾಗಿದ್ದು ಗುಣಮಟ್ಟವ ಕಾಯ್ಧುಕೊಳ್ಳುವಂತೆ ಸಂಬಂಧಿಸಿದ ಗುತ್ತಿಗೆದಾರರು ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.
ಗ್ರಾ,ಪಂ ಸದಸ್ಯ ಬಸವಪುರ ಕೆಂಪರಾಜ್ ಮುಖಂಡರಾದ ನಾಗರಾಜು ಚನ್ನಬಸವಶೆಟ್ಟಿ ಮಹೇಶ್ ಚಿನ್ನಿಗಶೆಟ್ಟಿ ಬಂಗಾರು ನಾಗೇಶ್ ಹಾಜರಿದ್ದರು
.