ಸರಗೂರು: ಕೋವಿಡ್-19 ಹಿನ್ನೆಲೆಯಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಸರಗೂರು ತಾಲೂಕಿನ ಇಟ್ನ ಗ್ರಾಮದ ಶ್ರಿಚಿಕ್ಕದೇವಮ್ಮನ ಜಾತ್ರಾ ಮಹೋತ್ಸವ ರದ್ದುಗೊಳಿಸಲಾಗಿದೆ ಎಂದು ಶ್ರೀ ಚಿಕ್ಕದೇವಮ್ಮನವರ ಸೇವಾಭಿವೃದ್ಧಿ ಹಾಗೂ ಹಾಲುಗಡ ಜಾತ್ರಾಭಿವೃದ್ಧಿ ಟ್ರಸ್ಟ್ನ ಅಧ್ಯಕ್ಷ ವಿ.ಸಿದ್ದರಾಜು ತಿಳಿಸಿದ್ದಾರೆ.
ಇತ್ತೀಚಿಗೆ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ನಿದರ್ೇಶನದಂತೆ ಮಾ.13ರಂದು ನಡೆಯುವ ಹಾಲುಗಡ ಜಾತ್ರೆಯನ್ನು ರದ್ದುಗೊಳಿಸಲಾಗಿದೆ. ಅದರಂತೆ ಮಾ.14ರಂದು ಇಟ್ನ ಗ್ರಾಮದಲ್ಲಿ ನಡೆಯಲಿರುವ ಚಿಕ್ಕದೇವಮ್ಮನ ಜಾತ್ರಾ ಮಹೋತ್ಸವವನ್ನೂ ರದ್ದುಗೊಳಿಸಲಾಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಪ್ರತಿವರ್ಷದಂತೆ ಈ ಬಾರಿಯೂ ಯುಗಾದಿ ಹಬ್ಬದ ದಿನದಂದು ಚಿಕ್ಕದೇವಮ್ಮನ ಹಾಲುಗಡ ಮತ್ತು ಇಟ್ನ ಗ್ರಾಮದ ಚಿಕ್ಕದೇವಮ್ಮನ ಜಾತ್ರಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿತ್ತು. ಕೊರೋನಾ ಹಿನ್ನೆಲೆಯಲ್ಲಿ ಜಾತ್ರಾ ಸಂದರ್ಭ ಅತಿ ಹೆಚ್ಚು ಭಕ್ತರು ಬಂದು ಒಂದೆಡೆ ಸೇರುವುದರಿಂದ ಕೋವಿಡ್-19 ಸೋಂಕು ಹರಡಬಹುದೆಂದು ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಜಾತ್ರೆ ರದ್ದುಗೊಳಿಸಿದೆ. ಹೀಗಾಗಿ ಭಕ್ತರು ಸಹಕರಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
ಗೋಷ್ಠಿಯಲ್ಲಿ ಟ್ರಸ್ಟ್ನ ಕಾರ್ಯದಶರ್ಿ ಎಸ್.ಸಿದ್ದನಾಯಕ, ಎನ್.ಬಸವನಾಯಕ, ದೊಡ್ಡವೀರನಾಯಕ, ಆರ್.ಕಾಳಿಂಗನಾಯಕ, ಬಿ.ರಾಮನಾಯಕ, ಸಿ.ಬೆಟ್ಟನಾಯಕ, ಬೀರನಾಯಕ, ಜಯರಾಮ, ಬಿ.ಬಸವರಾಜು, ಈರನಾಯಕ, ಆನಂದಕುಮಾರ್, ಬೆಟ್ಟನಾಯಕ, ಕೆ.ಶಿವರಾಮು, ಚಿನ್ನನಾಯಕ, ಸೋಮಣ್ಣ ಹಾಜರಿದ್ದರು.