
ಚಾಮರಾಜನಗರ: ನಗರದ ಉಪ್ಪಾರಬೀದಿ ಚಾಮುಂಡೇಶ್ವರಿ ಸೇವಾಸಮಿತಿ ವತಿಯಿಂದ ಬುಧವಾರ ನಗರದ ಚಾಮರಾಜೇಶ್ವರದೇವಾಲಯದ ಒಳಾವರಣದಲ್ಲಿರುವ ಚಾಮುಂಡೇಶ್ವರಿ ಸನ್ನಿದಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಇದೇವೇಳೆ ಚಾಮುಂಡೇಶ್ವರಿ ಅಮ್ಮನವರಿಗೆ ಹೂಗಳ ಅಲಂಕಾರ ಮಾಡಲಾಗಿತ್ತು. ಭಕ್ತಾದಿಗಳು ಚಾಮುಂಡಾಂಬೆಗೆ ನಿಂಬೆಹಣ್ಣು ದೀಪಹಚ್ಚಿ ಪೂಜೆಸಲ್ಲಿಸಿದರು.
ಚಾಮುಂಡೇಶ್ವರಿಸೇವಾಸಮಿತಿಯವರು ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿಸಿದರು.
ನಗರಸಭೆ ಮಾಜಿಉಪಾಧ್ಯಕ್ಷ ಶಿವನಂಜಯ್ಯ, ರಂಗಸ್ವಾಮಿ, ನಂಜುಂಡಸ್ವಾಮಿ, ಶಿವಕುಮಾರ್, ಜಿಲ್ಲಾ ಉಪ್ಪಾರ ಯುವಕರ ಸಂಘದ ಅಧ್ಯಕ್ಷ ಜಯಕುಮಾರ್, ಪ್ರಧಾನಕಾರ್ಯದರ್ಶಿ ಸಿ.ಎಸ್.ನಾಗರಾಜು ಹಾಜರಿದ್ದರು.
