ಚಾಮರಾಜನಗರ: ದೊಡ್ಡಮ್ಮತಾಯಿ ೭ ನೇವರ್ಷದ ಹಾಲರುವೆ ಮಹೋತ್ಸವ ಶುಕ್ರವಾರ ನಗರದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಹಾಲರುವೆ ಅಂಗವಾಗಿ ನಗರದ ಉಪ್ಪಾರ ಬಡಾವಣೆ ನಿವಾಸಿಗಳು ನಗರದ ದೊಡ್ಡರಸನಕೊಳದಲ್ಲಿ ಕಂಡಾಯಗಳಿಗೆ ಪೂಜೆಸಲ್ಲಿಸಿದರು.
ನಂತರ ದೊಡ್ಡಅಂಗಡಿ, ಚಿಕ್ಕಅಂಗಡಿಬೀದಿ ಮೂಲಕ ಹಾಲರುವೆ, ಕಂಡಾಯ, ಹುಲಿವಾಹನದ ಮೆರವಣಿಗೆ ಕಲಾತಂಡಗಳ ಜತೆ ಸಾಗಿತು. ದೊಡ್ಡಮ್ಮತಾಯಿ ಮೂಲವಿಗ್ರಹಕ್ಕೆ ವಿವಿಧ ಬಗೆಯ ಹೂಗಳ ಅಲಂಕಾರ ಮಾಡಲಾಗಿತ್ತು. ಭಕ್ತಾದಿಗಳು ಸರದಿಸಾಲಿನಲ್ಲಿ ನಿಂತು ಪೂಜೆ ಸಲ್ಲಿಸಿದರು.
ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಿತು.
ಮಂಟೇಸ್ವಾಮಿ. ಮಹದೇಶ್ವರಪದ ಹಾಡುವ ನೀಲಗಾರರು,
ಸಮುದಾಯದ ಯಜಮಾನರಾದ ಮಸಣಶೆಟ್ಟಿ, ಮಾದೇಶಶೆಟ್ಟಿ, ಪೈಲ್ವಾನ್ ನಂಜಪ್ಪಶೆಟ್ಟಿ, ನಂಜಶೆಟ್ಟಿ, ಮುತ್ತುರಾಜ್, ಕೋಟಿನಾಗಶೆಟ್ಟಿ, ಕೆ.ಟಿ.ನಾಗಶೆಟ್ಟಿ, ರಾಜಣ್ಣ, ಚನ್ನಿಗಶೆಟ್ಟಿ, ಕುಲಸ್ಥರು, ನಿವಾಸಿಗಳು ಹಾಜರಿದ್ದರು.