ಚಾಮರಾಜನಗರ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಗೆಲುವಿನ ಹಿನ್ನೆಲೆಯಲ್ಲಿ ಜನತೆಗೆ ನೀಡಿರುವ ಭರವಸೆಗಳ ಗ್ಯಾರಂಟಿ ಕಾರ್ಡ್‌ಅನ್ನು ಚಾಮರಾಜನಗರ ನಗರಸಭೆ ವ್ಯಾಪ್ತಿಯ ಚನ್ನಿಪುರಮೋಳೆ ಗ್ರಾಮದ ಮನೆಗಳಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ವಿತರಣೆ ಮಾಡಿದರು.
ಇದೇವೇಳೆ ಅವರು ಮಾತನಾಡಿ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು, ಅಧಿಕಾರಹಿಡಿದಲ್ಲಿ ಗೃಹಿಣಿಯರಿಗೆ ಮಾಸಿಕ ೨ ಸಾವಿರವೇತನ, ೨೦೦ ಯೂನಿಟ್‌ವರಗೆ ಉಚಿತ ವಿದ್ಯುತ್ ಸರಬರಾಜು, ೫೦೦ ರೂ.ಗೆ ಗ್ಯಾಸ್ ವಿತರಣೆ ಮಾಡುವ ಭರವಸೆ ನೀಡಿದೆ, ಅದರಂತೆ ಇಂದು ಚಾಮರಾಜನಗರ ನಗರಸಭೆ ವ್ಯಾಪ್ತಿಯ ಚನ್ನಿಪುರಮೋಳೆ ಮನೆಗಳಿಗೆ ಗ್ಯಾರಂಟಿಕಾರ್ಡ್ ವಿತರಣೆ ಮಾಡಲಾಗಿದೆ.
ಮನೆಯ ಗೃಹಿಣಿಯರು ತಮ್ಮ ವಿಳಾಸ, ದೂರವಾಣಿಸಂಖ್ಯೆ, ಬ್ಯಾಂಕ್ ಖಾತೆಯನ್ನು ತುಂಬಿಸಿಕೊಟ್ಟರೇ ಜಿಲ್ಲಾ ಕಾಂಗ್ರೆಸ್ ಸಮಿತಿ ನೇರವಾಗಿ ಕೆಪಿಸಿಸಿ ಕಚೇರಿಗೆ ತಲುಪಿಸಲಿದೆ ಎಂದರು.
ಇದೇವೇಳೆ ಶಾಸಕರು ವಾರ್ಡ್ ನಿವಾಸಿಗಳ ಕುಂದುಕೊರತೆ ಆಲಿಸಿದರು.
ಮುಖಂಡರಾದ ಮಂಜು, ನಂಜುಂಡಶೆಟ್ಟಿ ಮಹಿಳೆಯರು ಹಾಜರಿದ್ದರು.