ಸರಗೂರು: ಕ್ಷೇತ್ರದ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿಯೂ ತಮ್ಮ ಅಧ್ಯಕ್ಷತೆಯಲ್ಲಿ ‘ಗ್ರಾಮ ವಾಸ್ತವ್ಯ’ ಹೂಡುವುದರಿಂದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲು ಸಹಕಾರಿಯಾಗಲಿದೆ ಎಂದು ಶಾಸಕ ಅನಿಲ್ಚಿಕ್ಕಮಾದು ತಿಳಿಸಿದರು.
ತಾಲೂಕಿನ ಬಿ.ಮಟಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 3 ದಿನಗಳು ಶಾಸಕರು ಹಮ್ಮಿಕೊಂಡಿರುವ ‘ಗ್ರಾಮ ವಾಸ್ತವ್ಯ’ದ 2ನೇ ದಿನವಾದ ಸೋಮವಾರ ಗ್ರಾ.ಪಂ.ವ್ಯಾಪ್ತಿಯ ಮೊಳೆಯೂರು, ಕಾಂತನಹಾಡಿ, ಕೆಬ್ಬೆಪುರಹಾಡಿ, ಸಿಗೋಡಿ, ಹೊಸಕೋಟೆ, ದೊಡ್ಡಬರಗಿ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ನಾನಾ ಅಭಿವೃದ್ಧಿಗೆ ಕಾಮಗಾರಿಗೆ ಗುದ್ದಲಿ ಪೂಜೆ, ಗ್ರಾಮಸ್ಥರಿಂದ ಸಮಸ್ಯೆಗಳ ಕುರಿತು ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.
ತಾಲೂಕಿನಲ್ಲಿ ಶಾಸಕರಾಗಿರುವುದು ಹೆಮ್ಮೆ ಎನ್ನಿಸಲಿದೆ. ತಾಲೂಕಿನ ಜನತೆ ಮಾಜಿ ಶಾಸಕ ದಿ.ಚಿಕ್ಕಮಾದು, ಮಾಜಿ ಸಂಸದ ಆರ್.ಧ್ರುವನಾರಾಯಣ ಅವರ ಅಭಿವೃದ್ಧಿ ಕೆಲಸಗಳನ್ನು ನೋಡಿ ನನಗೆ ಹೆಚ್ಚು ಮತಗಳ ನೀಡಿ, ಅದರಲ್ಲೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಲು ಸಹಕಾರಿಯಾಗಿದ್ದೀರಿ. ಹೀಗಾಗಿ ಸದಾ ಅಭಾರಿಯಾಗಿರುತ್ತೇನೆ. ಹೀಗಾಗಿ ಮತದಾರ ಬಂಧುಗಳ ಹತ್ತಿರವೇ ಬಂದು ತಮ್ಮ ಕಷ್ಟ-ಸುಖಗಳನ್ನು ಆಲಿಸಲು ಬಂದಿದ್ದೇನೆ ಎಂದು ಶಾಸಕರು ವಿವರಿಸಿದರು.
ಹಾರ -ತುರಾಯಿ ಬೇಡ: ತಮ್ಮ ಗ್ರಾಮಗಳ ಭೇಟಿ ನೀಡಿ, ಸಮಸ್ಯೆಗಳನ್ನು ಆಲಿಸಲು ಬಂದಿರುವೆ. ಬದಲಿಗೆ ಹಾರ-ತುರಾಯಿ ಸ್ವೀಕರಿಸಲು ಅಲ್ಲ. ಹೀಗಾಗಿ ಕಾರ್ಯಕರ್ತರು, ಗ್ರಾಮಸ್ಥರು ಹಾರ-ತುರಾಯಿಗಳಿಗೆ ಹೆಚ್ಚು ಒತ್ತು ನೀಡದೆ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಿ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಮುಂದಾಗಿ. ತಾಲೂಕಿನ ಜನತೆ ಶಾಸಕರಾಗಿ ಆಯ್ಕೆ ಮಾಡಿವುರುದೇ ದೊಡ್ಡ ಸನ್ಮಾನ ಎಂದು ಹೇಳಿದರು.
ಕೇಂದ್ರ, ರಾಜ್ಯದಲ್ಲಿ ಪಕ್ಷ ಅಧಿಕಾರಲ್ಲಿಲ್ಲ. ಅಲ್ಲದೆ ಕ್ಷೇತ್ರದಲ್ಲಿ ಪಕ್ಷದ ಸಂಸದರಿಲ್ಲದೆ ಸಮರ್ಪಕವಾಗಿ ಅನುದಾನ ಬರುತ್ತಿಲ್ಲ. ಹಿಂದೆ ಸಮ್ಮಿಶ್ರ ಸರಕಾರವಿದ್ದಾಗ ನೀಡಲಾದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗುತ್ತಿದೆ. ಜತೆಗೆ ನರೇಗಾದ ಅನುದಾನವನ್ನೂ ಬಳಸಿಕೊಳ್ಳಲಾಗುತ್ತಿದೆ. ಇದಕ್ಕೆ ಗ್ರಾಮಸ್ಥರು ಸಹಕಾರ ನೀಡಬೇಕು. ಇಲ್ಲವಾದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಕುಂಠಿತವಾಗಲಿದೆ. ಹೀಗಾಗಿ ಗ್ರಾಮ ವಾಸ್ತವ್ಯದ ಮೂಲಕ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ಕಾಡು ಪ್ರಾಣಿಗಳ ಹಾವಳಿಗೆ ರೈಲ್ವೆ ಕಂಬಿ ಅಳವಡಿಸಬೇಕು. ಗ್ರಾಮಗಳಲ್ಲಿ ಜಾಗದ ಕೊರತೆ ಇದ್ದು, ಶವ ಸಂಸ್ಕಾರಕ್ಕೆ ಸ್ಮಶಾನದ ಜಾಗ ನೀಡಲು ಕಂದಾಯ ಇಲಾಖಾಧಿಕಾರಿಗಳೊಂದಿಗೆ ಚಚರ್ಿಸಿ ಅನುವು ಮಾಡಿಕೊಡಲಾಗುವುದು. ನಿರಂತರ ಜ್ಯೋತಿ ಸಂಪರ್ಕ ಕಲ್ಪಿಸಿಕೊಡಬೇಕು. ಹಕ್ಕು ಪತ್ರ ವಿತರಣೆ, ಸಾಗುವಳಿ ಪತ್ರ ನೀಡುವುದು. ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಇನ್ನಿತರ ಸಮಸ್ಯೆಯನ್ನು ಶೀಘ್ರದಲ್ಲೇ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಇಲ್ಲವಾದಲ್ಲಿ ಅಧಿಕಾರಿಗಳಿಗೆ ಶಿಸ್ತುಕ್ರಮ ಜರುಗಿಸಲಾಗುವುದು ಎಂದರು.
ಪಂಚಾಯಿತಿಯಲ್ಲಿ 10 ಕೋಟಿ ರೂ.ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ. ಈ ಪೈಕಿ ಮೊಳೆಯೂರು ಗ್ರಾಮಕ್ಕೆ 20 ಲಕ್ಷ ರೂ.ವೆಚ್ಚದ ಅನುದಾನದ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಗ್ರಾಮದ ಅಭಿವೃದ್ಧಿಗೆ ಮತ್ತಷ್ಟು ಅನುದಾನ ನೀಡಲಾಗುವುದು. ಕಾಡಂಚಿನ ಗ್ರಾಮಗಳಿಗೆ ಮೂಲ ಸೌಲಭ್ಯ ಒದಗಿಸಲು ಕ್ರಮವಹಿಸಲಾಗುವುದು. ಇದಲ್ಲದೆ ಮಾ.4ರಿಂದ ಶುರುವಾಗುವ ವಿಧಾನಸಭಾ ಅಧಿವೇಶನದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಚಚರ್ಿಸಲಾಗುವುದು ಎನ್ನುವ ಮೂಲಕ ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿದರು.
ಇದೇ ಸಂದರ್ಭದಲ್ಲಿ ಮೊಳೆಯೂರು ಕಾಲೋನಿಯಲ್ಲಿ ಕುಡಿಯುವ ನೀರಿನ ಟ್ಯಾಂಕ್ ನಿಮರ್ಾಣಕ್ಕೆ ನಿವೇಶನವನ್ನು ದಾನಗಳಿಗೆ ಸನ್ಮಾನಿಸಲಾಯಿತು. ಜಿ.ಪಂ.ಸದಸ್ಯ ಚಿಕ್ಕವೀರನಾಯಕ, ಬಿ.ಮಟಕೆರೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ದೇವದಾಸ್, ಸರಗೂರು ಯೂತ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವರಾಜು, ನಯಾಜ್, ಮುಖಂಡರಾದ ಮಲ್ಲೇಶ್ನಾಯಕ್, ಅಭಿಕುಮಾರ್, ಹರಿದಾಸ್, ಎಂ.ಎನ್.ಭೀಮರಾಜ್, ಅಣ್ಣಯ್ಯಸ್ವಾಮಿ, ಮಂಜುನಾಥ್, ತಾ.ಪಂ.ಸದಸ್ಯ ರಾಜು, ರಾಜನಾಯಕ, ಬೆಟ್ಟನಾಯಕ, ಬೆಟ್ಟಸ್ವಾಮಿ, ಸರಗೂರು ತಾಲೂಕು ಪ್ರಭಾರ ತಹಶೀಲ್ದಾರ್ ಅಪೇಕ್ಷಾ, ಉಪ ತಹಸೀಲ್ದಾರ್ ಸುನೀಲ್, ಪಿಡಿಒ ನಾಗರಾಜು, ಗ್ರಾ.ಪಂ.ಸದಸ್ಯರಾದ ಬೆಟ್ಟಸ್ವಾಮಿ, ಸೋಮ ಸೇರಿದಂತೆ ಇಲಾಖಾಧಿಕಾರಿಗಳು, ಗ್ರಾ.ಪಂ ಸದಸ್ಯರು, ಮುಖಂಡರು ಹಾಜರಿದ್ದರು.