ಚಾಮರಾಜನಗರ: ಕ್ಷೇತ್ರ ವ್ಯಾಪ್ತಿಯಲ್ಲಿ ಗ್ರಾಮೀಣ ರಸ್ತೆಗಳು ಮತ್ತು ಸಂಪರ್ಕ ರಸ್ತೆಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು, ರಸ್ತೆಗಳು ಗ್ರಾಮೀಣ ಅಭಿವೃದ್ದಿಯ ಪ್ರತೀಕವಾಗಿದೆ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ತಿಳಿಸಿದರು.
ಅವರು ಲೋಕೋಪಯೋಗಿ ಇಲಾಖೆ ವತಿಯಿಂದ ತಾಲ್ಲೂಕಿನ ಬಂಧೀಗೌಡನ ಹಳ್ಳಿ ಗ್ರಾಮದಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ದಿ ಕಾಮಾಗಾರಿಗೆ ಚಾಲನೆ ನೀಡಿ ಮಾತನಾಡಿದರು.
ನಂತರ ಮಾತನಾಡಿದ ಶಾಸಕರು ವಿಧಾನ ಸಬಾ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಲ್ಲಿ ಗ್ರಾಮಾಂತರ ರಸ್ತೆಡಗಳು,ಕುಡಿಯುವ ನೀರು,ಸಮುದಾಯ ಭವನ,ಸೇರಿದಂತೆ ನಾಗರೀಕರ ಬೇಡಿಕೆಗೆ ಪೂರಕವಾಗುವಂತೆ ಹಲವು ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ರಸ್ತೆಗಳು ಗ್ರಾಮೀಣ ಜೀವನಾಡಿಯಾಗಿದ್ದು ನಾಗರೀಕರು ಹಾಗೂ ವಾಹನ ಸವಾರರಿಗೆ ಉತ್ತಮ ರಸ್ತೆಗಳು ಅಗತ್ಯವಾಗಿದೆ.ಇದನ್ನು ಮನಗಂಡು ವಿವಿಧ ಯೋಜನೆಗಳಡಿ ಅನುದಾನ ಕ್ರೂಢಿಕರಿಸಿ ರಸ್ತೆ,ಚರಂಡಿ ಗಳನ್ನು ನಿರ್ಮಿಸಲಾಗುತ್ತಿದೆ ಎಂದ ಅವರು ಕಾಮಗಾರಿ ನಿರ್ವಹಣೆ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಬೇಕು ಎಂದರು
ಎ.ಪಿ.ಎಂಸಿ ಮಾಜಿ ಅಧ್ಯಕ್ಷ ಬಿ.ಕೆ ರವಿಕುಮಾರ್ ಗ್ರಾ,ಪಂ ಅಧ್ಯಕ್ಷೆ ಬೇಬಿ ಉಪಾಧ್ಯಕ್ಷ ಪುಟ್ಟಸ್ವಾಮಿ ಮುಖಂಡರಾದ ಬಿಸಲವಾಡಿ ರವಿ ನಾಗರಾಜು ಪ್ರಭುಸ್ವಾಮಿ ಅಶೋಕ್ ಎ.ಪಿ.ಎಂ.ಸಿ ಸದಸ್ಯ ಶಿವಕುಮಾರ್ ನಾರಾಯಣ್‌ನಾಯಕ್ಕ್ ಚನ್ನಂಜಪ್ಪ ಇಂಜೀನಿಯರ್ ಮದುಸೋದನ್. ಗ್ರಾಮದ ಮುಖಂಡರಿಗಳು ಗ್ರಾಮಸ್ಥರು ಇದ್ದಾರೆ.
