ಮೈಸೂರು: ಸಾರ್ವಜನಿಕರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಮೈಸೂರುವಿಶ್ವವಿದ್ಯಾನಿಲಯದ ಸಂಶೋಧಕರ ನೆರವಿನೊಂದಿಗೆ ಹೈದರಾಬಾದ್ ಮೂಲದ ಕಂಪನಿಯೊಂದು ‘ಕೋವಿಡ್ -19 ‘ಪರೀಕ್ಷಿಸುವ ಅತ್ಯಂತ ಸರಳ ಹಾಗೂ ನೂತನ ಕಿಟ್ ಒಂದನ್ನು ಅಭಿವೃದ್ಧಿಪಡಿಸುವ ಮೂಲಕ ಗಮನಸೆಳೆದಿದೆ.
ಈ ಕುರಿತಂತೆ ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಮಾಹಿತಿನೀಡಿದ್ದು ಇದು ದೇಶದಲ್ಲಿಯೇ ಸರಕಾರಿ ಸ್ವಾಮ್ಯದ ವಿಶ್ವವಿದ್ಯಾನಿಲಯವೊಂದರ ಸಂಶೋಧಕರತಂಡವೊಂದು ಮಾಡಿದ ವಿನೂತನ ಪ್ರಯೋಗವಾಗಿದೆ. ಕೊರೊನಾ ಸಂಕಷ್ಟ ಕಾಲದಲ್ಲಿ ಸಾರ್ವಜನಿಕರಿಗೆಉಪಯೋಗವಾಗುವ ನಿಟ್ಟಿನಲ್ಲಿ ಸಂಶೋಧನೆ ನಡೆಸಿ ಹೊಸ ಕಿಟ್ ಬಳಕೆಗೆ ತರುವಲ್ಲಿ ಯಶಸ್ವಿಯಾಗಿರುವುದುಶ್ಲಾಘನೀಯ ಕಾರ್ಯ ಎಂದು ಅವರು ಹೇಳಿದ್ದಾರೆ.ಅಗತ್ಯ ನೆರವಿನೊಂದಿಗೆ ಮೈಸೂರು ವಿವಿ ಸಂಶೋಧನೆಗೆ ಬೆನ್ನೆಲುಬಾಗಿ ನಿಂತಿದ್ದರಿಂದ ಮೈಸೂರುವಿವಿ ವಿಶ್ರಾಂತ ಕುಲಪತಿ, ಖ್ಯಾತ ರಸಾಯನಶಾಸ್ತ್ರಜ್ಞ ಪ್ರೊ.ಕೆ.ಎಸ್.ರಂಗಪ್ಪ ಅವರಮಾರ್ಗದರ್ಶನದಲ್ಲಿ ಮೈಸೂರು ವಿವಿ ವಿಜ್ಞಾನ ಭವನದ ಸಂಚಾಲಕ ಡಾ.ಎಸ್.ಚಂದ್ರನಾಯಕ್ ಹಾಗೂ ಮೈಸೂರುವಿವಿ ಮಾಲಿಕ್ಯೂಲರ್ ಬಯಲಾಜಿಯ ಸಹಾಯಕ ಪ್ರಾಧ್ಯಾಪಕ ಡಾ.ಸಿ.ಡಿ.ಮೋಹನ್ ನೇತೃತ್ವದಲ್ಲಿ ಸಂಶೋಧನೆನಡೆಸಲು ಸಾಧ್ಯವಾಗಿದೆ ಎಂದು ಹೇಳಿದ್ದಾರೆ.
ಕೋವಿಡ್ ಪರೀಕ್ಷಿಸುವ ಕಿಟ್ ಕುರಿತಂತೆ ಮೈವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಮಾತನಾಡಿ ಕೋವಿಡ್ ತಂದೊಡ್ಡಿದ ಸಂಕಷ್ಟ ಮತ್ತು ಅದನ್ನು ಪರೀಕ್ಷಿಸುವ ಸಲುವಾಗಿ ಸರಳವಾದನೂತನ ಕಿಟ್ ಸಂಶೋಧಿಸುವ ಮೂಲಕ ಸಮಾಜಕ್ಕೊಂದು ಕೊಡುಗೆ ನೀಡಬೇಕೆನ್ನುವ ಉದ್ದೇಶದಿಂದ ತೆಲಂಗಾಣದಹೈದರಬಾದ್ ನ ಲಾರ್ವೆನ್ ಬಯೋಲಾಜಿಕ್ಸ್ ಪ್ರೈ.ಲೀ ಕಂಪನಿ ನಿರ್ದೇಶಕ ಡಾ. ವೆಂಕಟರಮಣ ಜತೆಗೆಮಾತುಕತೆ ನಡೆಸಿ ಅವರ ಸಹಭಾಗಿತ್ವದಲ್ಲಿ ಸಂಶೋಧನೆ ಕೈಗೊಂಡೆವು. ಇದಕ್ಕೆ ಬೇಕಾದ ನೆರವನ್ನು ಮೈಸೂರುವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಮಾಡಿದರು. ಜತೆಗೆ ಈಗಾಗಲೇ ಕ್ಯಾನ್ಸರ್ ಕ್ಷೇತ್ರದಲ್ಲಿಹಲವಾರು ಯಶಸ್ವಿ ಸಂಶೋಧನೆ ನಡೆಸಿದ ಅನುಭವ ಕೂಡ ಹೊಸ ಸಂಶೋಧನೆಗೆ ಪ್ರೇರಣೆ ನೀಡಿತು. ಕಳೆದ ಒಂದುವರ್ಷದಿಂದ ನಿರಂತರ ಸಂಶೋಧನೆ ನಡೆಸಿದ ಫಲವಾಗಿ ಇದೀಗ ಕೋವಿಡ್ 19 ಪತ್ತೆ ಹಚ್ಚುವ ಸುಲಭ ಸಾಧನಪತ್ತೆ ಹಚ್ಚಲು ಸಾಧ್ಯವಾಗಿದೆ ಎಂದು ಹೇಳಿದರು. ನೂತನವಾಗಿ ಸಂಶೋಧಿಸಿರುವ ಎ.ಆರ್.ಡಿ.ಟಿ ಕಿಟ್ (Antigen Rapid Detection Test Kit)ಅತ್ಯಂತ ಸುಲಭಾಗಿ ಬಳಸಬಹುದಾಗಿದೆ. ಜತೆಗೆ ಇದರಿಂದಪ್ರೆಗ್ನೆನ್ಸಿ ಟೆಸ್ಟ್ ರೀತಿ ಸ್ಥಳದಲ್ಲೇ ಕ್ಷಣಾರ್ಧದಲ್ಲಿ ಫಲಿತಾಂಶವನ್ನು ಪಡೆಯಬಹುದಾಗಿದೆ. ಇದು ಶೇ.90 ರಷ್ಟು ನಿಖರತೆ ಫಲಿತಾಂಶ ನೀಡಲಿದೆ. ಈಕಿಟ್ ಮೂಲಕ ಕೋವಿಡ್ ಟೆಸ್ಟ್ ನ್ನು ಗಂಟಲು ದ್ರವ ಹಾಗೂ ಮೂಗಿನ ಹೊಳ್ಳೆಯ ಸ್ವಾಬ್ ಮೂಲಕವೇ ಮನೆಯಲ್ಲೇ ಮಾಡಿ ಫಲಿತಾಂಶವನ್ನು ಪಡೆಯ ಬಹುದಾಗಿದೆ ಎಂದು ಹೇಳಿದರು.ಈ ಕಿಟ್ ಅನ್ನು ಭಾರತ ಸರ್ಕಾರಕ್ಕೆ ಅನುಮೋದನೆಗಾಗಿ ಕಳುಹಿಸಿದ್ದೇವೆ. ಕಿಟ್ ಅನ್ನು“ಮೇಕ್ ಇನ್ ಇಂಡಿಯಾ” ಮತ್ತು “ಆತ್ಮ ನಿರ್ಭರ್ ಭಾರತ್ ಅಭಿಯಾನ್” ಗೆ ಸಮಾನವಾದಧ್ಯೇಯವಾಕ್ಯದೊಂದಿಗೆ ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದರು