ಮೈಸೂರು: ಕರ್ನಾಟಕದಲ್ಲಿ ಲಾಕ್ ಡೌನ್ ನಿಂದಾಗಿ ಆರ್ಥಿಕ ಸಂಕಷ್ಟದಲ್ಲಿರುವ ಕಲಾವಿದರ ನೆರವಿಗೆಂದು ರಾಜ್ಯ ಸರ್ಕಾರ ಆರ್ಥಿಕ ಪರಿಹಾರ ಪ್ಯಾಕೇಜ್ ಅಡಿಯಲ್ಲಿ ತಲಾ 3000ರೂಗಳನ್ನು ಬಿಡುಗಡೆ ಮಾಡಿದ್ದು ಜೀವಧಾರ ಪದವೀಧರ ಘಟಕದ ವತಿಯಿಂದ ಅರ್ಹ 50 ಕಲಾವಿದರಿಗೆ ಅದರ ಸವಲತ್ತು ತಲುಪಿಸಲು ಸೇವಾ ಸಿಂಧು ಮೂಲಕ ಆನಲೈನ್  ಪ್ರಕ್ರಿಯೆಗೆ ಅನುಕೂಲ ಮಾಡಿಕೊಡಲು ವಸ್ತುಪ್ರದರ್ಶನ ಆವರಣದಲ್ಲಿ ಸಹಾಯವಾಣಿಯನ್ನು  ತೆರೆಯಲಾಗಿದೆ.

ಈ ಸಂಬಂಧ  ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ  ಹೇಮಂತ್ ಕುಮಾರ್ ಗೌಡ ರವರು 50ಕಲಾವಿದರಿಗೆ ವಸ್ತುಪ್ರದರ್ಶನ ಆವರಣದಲ್ಲಿರುವ ಪಿ.ಕಾಳಿಂಗರಾವ್ ಗಾನ ಮಂಟಪದಲ್ಲಿ ಸ್ವೀಕೃತಿ ಪತ್ರ ವಿತರಿಸಿ

ಮಾತನಾಡಿ ರಾಜ್ಯ ಸರ್ಕಾರದಿಂದ ಕೋವಿಡ್ ಸಂಕಷ್ಟ ಆರ್ಥಿಕ ಪರಿಹಾರ ನಿಧಿ ನೀಡಲಾಗುತ್ತಿದ್ದು, ಕಲಾವಿದರು ಸೇರಿದಂತೆ ಕುಂಬಾರರು, ಅಗಸರು, ಕ್ಷೌರಿಕರು, ದರ್ಜಿಗಳು, ಮೆಕ್ಯಾನಿಕ್, ಹಮಾಲರು, ಅಲೆಮಾರಿಗಳು, ಭಟ್ಟಿ ಕಾರ್ಮಿಕರು ಅಕ್ಕಸಾಲಿಗರು, ಕಮ್ಮಾರರು, ಆಟೋ ಚಾಲಕರು ಗೃಹ ಕಾರ್ಮಿಕರ ವರೆಗೂ ಅಸಂಘಟಿತ ವಲಯದ ಅಡಿಯಲ್ಲಿ ಶ್ರಮಿಸುವ ವರ್ಗಕ್ಕೆ ಕರ್ನಾಟಕ ಸರ್ಕಾರ 2000ರೂಗಳ ಆರ್ಥಿಕ ಸಂಕಷ್ಟ ಪರಿಹಾರ ನಿಧಿ ನೀಡುತ್ತಿದ್ದು,

ಕರ್ನಾಟಕ ವಸ್ತುಪ್ರದರ್ಶನ ಆವರಣದಲ್ಲಿ ಜೀವಧಾರ ಪದವೀಧರ ಘಟಕ ಸಹಾಯವಾಣಿ ತೆರೆದಿದ್ದು, ಸೇವಾಸಿಂಧೂ ಪೋರ್ಟಲ್  ಆನ್ಲೈನ್ ನೊಂದಣಿ  ಪ್ರಕ್ರಿಯೆಯನ್ನ ಉಚಿತವಾಗಿ ಮಾಡಿಕೊಡಲಾಗುವುದು.  ಸೂಕ್ತ ದಾಖಲಾತಿಗಳಾದ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ವೃತ್ತಿ ಧೃಡಿಕರಣಪತ್ರ ಮತ್ತು ಭಾವಚಿತ್ರವನ್ನ ತಂದು ನಾಗರಿಕರು ಇದರ ಸವಲತ್ತನ್ನು ಪಡೆಯಬಹುದಾಗಿದೆ ಎಂದರು

ಕಲಾವಿದರಾದ ಮೈಕ್ ಚಂದ್ರು ಮಾತನಾಡಿ ಜೀವಧಾರ ಪದವೀಧರ ಘಟಕ ಕಲಾವಿದರ ನೆರವಿನಿಂದ ಻ರ್ಜಿ ಸಲ್ಲಿಕೆ ಆನ್ಲೈನ್ ಪ್ರಕ್ರಿಯೆಗೆ ಸಹಕರಿಸುತ್ತಿರುವುದು ಉತ್ತಮ ಕೆಲಸ. 35ವರ್ಷ  ಮೇಲ್ಪಟ್ಟ ಕಲಾವಿದರಿಗೆ ಸರ್ಕಾರ ಸಹಾಯಧನ ನೀಡಲು ವಯೋಮಿತಿ ವಿಧಿಸಿದ್ದು, ಲಾಕ್ ಡೌನ್ ಪ್ರದರ್ಶನವಿಲ್ಲದ ಕಾರಣ ಯುವಕಲಾವಿದರು ಸಹ ತೊಂದರೆಯಲ್ಲಿದ್ದು ಇದರ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗಮನಹರಿಸಿ ನೆರವು ನೀಡಲಿ ಎಂದರು

ಬಿಜೆಪಿ ವಕ್ತಾರ ಎಂ.ವಿ ಮೋಹನ್ ಮಾತನಾಡಿ ಜೀವ ಮೊದಲು ನಂತರ ಜೀವನ. ಹಾಗಾಗಿ ನಾವೆಲ್ಲರೂ ಕೋವಿಡ್ ನಿಯಂತ್ರಣ ಮಸರ್ಗಸೂಚಿ ಪಸಲಿಸಬೇಕು 20ಜನಕ್ಕೂ ಅಧಿಕ ಸೇರಲು ಅವಕಾಶವಿಲ್ಲದ ಕಾರಣ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿಲ್ಲ, ಸಂಘ ಸಂಸ್ಥೆಗಳು ಸಾಮಾಜಿಕ ಜಾಲತಾಣ ಮಾಧ್ಯಮ ಬಳಸಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲು ಮುಂದಾಗಬೇಕು ಇದರಿಂದ ಕಲಾವಿದರಿಗೆ ಅವಕಾಶ ಕಲ್ಪಿಸಿಕೊಡಬಹುದು ಎಂದು ಹೇಳಿದರು.

ಈ ಸಂದರ್ಭ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಎಂಎನ್ ನವೀನ್ ಕುಮಾರ್, ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್,  ಜೀವಧಾರ ಪದವೀಧರ ಘಟಕದ ಕಾರ್ಯದರ್ಶಿ ವರಲಕ್ಷ್ಮಿ, ಕಲಾವಿದರಾದ ಮೈಕ್ ಚಂದ್ರು, ವಿಶ್ವನಾಥ್, ಗಣೇಶ್, ಅಶ್ವಿನಿ ಶಾಸ್ತ್ರಿ, ಗುರುದತ್, ರವಿಶಂಕರ್, ರಾಜೇಶ್  ಪಡಿಯಾರ್, ಶೇಷಾಚಲ ಬಾಬು, ರಂಗಸ್ವಾಮಿ, ರಂಗಕರ್ಮಿ ರಂಜನ್,  ಉದಯ್ ಕುಮಾರ್,  ಇನ್ನಿತರರು ಇದ್ದರು.

By admin