ಚಾಮರಾಜನಗರ: ತಾಲೂಕಿನ ಕೋಡಿಮೋಳೆ ಗ್ರಾಮದ ಸರಕಾರಿಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಗತ್‌ಸಿಂಗ್ ಯುವಸೇನೆ ಹಾಗೂ ಸ್ವಾಮಿವಿವೇಕಾನಂದ ಯುವಕಸಂಘದ ವತಿಯಿಂದ ಚಿತ್ರನಟ ದಿ. ಪುನೀತ್ ರಾಜ್ ಕುಮಾರ್ ಅವರ ೪೮ನೇ ಜನ್ಮದಿನಾಚರಣೆಯನ್ನು ಶಾಲಾಮಕ್ಕಳಿಗೆ ನೋಟ್‌ಬುಕ್ ಹಾಗೂಪೆನ್‌ವಿತರಿಸುವ ಮೂಲಕ ಆಚರಣೆ ಮಾಡಲಾಯಿತು.
ಚಿತ್ರನಟ ದಿ. ಪುನೀತ್ ರಾಜ್ ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದ ಜಿಲ್ಲಾ ಯುವಜನಸೇವೆ ಮತ್ತು ಕ್ರೀಡಾಇಲಾಖೆ ಯುವಸ್ಪಂದನ ಕೇಂದ್ರದ ಸಮಾಲೋಚಕಿ ಮಾದಲಾಂಬಿಕೆ ಮಾತನಾಡಿ, ಚಿತ್ರನಟ ಪುನೀತ್ ರಾಜ್‌ಕುಮಾರ್ ಅವರು ಚಲನಚಿತ್ರನಟರಾಗಿದ್ದುಕೊಂಡೇ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಅವರು ಬದುಕಿದ್ದಾಗ ಅವರ ಸೇವಾಕಾರ್ಯ ಜನರಿಗೆ ಗೋಚರವಾಗಲಿಲ್ಲ. ಅವರು ಕಾಲವಾದ ನಂತರ ಅವರ ಸೇವಾಕಾರ್ಯಗಳ ಬಗ್ಗೆ ಜನರಿಗೆ ಗೊತ್ತಾಯಿತು.
ಇಂದಿನ ಯುವಸಮೂಹ ಪುನೀತ್ ಅವರ ಸೇವಾಕಾರ್ಯಗಳನ್ನು ಮೈಗೂಡಿಸಿಕೊಳ್ಳಬೇಕು, ಗ್ರಾಮದ ಭಗತ್‌ಸಿಂಗ್ ಯುವಸೇನೆ ಹಾಗೂ ಸ್ವಾಮಿವಿವೇಕಾನಂದ ಯುವಕಸಂಘದವರು ಪುನೀತ್ ಜನ್ಮದಿನದಂದು
ಶಾಲಾಮಕ್ಕಳಿಗೆ ನೋಟ್ ಪುಸ್ತಕ, ಪೆನ್ ವಿತರಣೆ ಮಾಡುತ್ತಿರುವುದು ಪ್ರಶಂಸನೀಯ, ಮುಂದಿನದಿನಗಳಲ್ಲೂ ಇವರ ಸಮಾಜಮುಖಿ ಸೇವಾಕಾರ್ಯಗಳು ಮುಂದುವರೆಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.
ಇದೇವೇಳೆ ಜಿಲ್ಲಾ ಯುವಜನಸೇವೆ ಮತ್ತು ಕ್ರೀಡಾಇಲಾಖೆ ಯುವಸ್ಪಂದನ ಕೇಂದ್ರದ ಸಮಾಲೋಚಕಿ ಮಾದಲಾಂಬಿಕೆ ಅವರನ್ನು ಸನ್ಮಾನಿಸಲಾಯಿತು.
ಭಗತ್ ಸಿಂಗ್ ಯುವಸೇನೆ ಅಧ್ಯಕ್ಷ ಕಾಂತರಾಜು, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಮಹೇಶ್, ಶಾಲಾಮುಖ್ಯ ಶಿಕ್ಷಕ ಸೋಮಸುಂದರ್, ಸಹಶಿಕ್ಷಕರಾದ ಪ್ರಕಾಶ್, ಪುಷ್ಪಲತಾ, ಭಗತ್ ಸಿಂಗ್ ಯುವಸೇನ ಸಂಘದ ಸದಸ್ಯರಾದ ಮಲ್ಲೇಶ್,ಶಿವು, ಮನು, ರಾಜು, ವಿಜಯ್, ಡಿ.ಪಿ. ಪ್ರಕಾಶ್, ಮಹೇಶ್, ಶಾಲಾವಿದ್ಯಾರ್ಥಿಗಳು ಹಾಜರಿದ್ದರು.