ಚಾಮರಾಜನಗರ; ತಾಲ್ಲೂಕಿನ ಜ್ಯೋತಿಗೌಡನಪುರ ಗ್ರಾಮದ ಸಮೀಪದ ಕಥಾನಾಯಕನಕೆರೆ ಈಚೆಗೆ ಸುರಿದ ಮಳೆಯಿಂದ ಕೋಡಿಬಿದ್ದಿದ್ದು, ಸುತ್ತಮುತ್ತಲ ಗ್ರಾಮಗಳ ಜಮೀನು ಜಲಾವೃತವಾದ ಹಿನ್ನೆಲೆಯಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಅಧಿಕಾರಿಗಳ ಜತೆ ಭೇಟಿನೀಡಿ, ಪರಿಶೀಲಿಸಿದರು.
ನಂತರ ಮಾತನಾಡಿ, ಜಿಲ್ಲೆಯಾದ್ಯಂತ ಒಂದು ವಾರಕಾಲಸುರಿದ ಮಳೆಯ ಪರಿಣಾಮ ಈ ಭಾಗದ ಕಥಾನಾಯಕನ ಕೋಡಿಬಿದ್ದಿದೆ. ಇದು ಒಂದುಕಡೆ ಸಂತಸ ತರುವ ವಿಚಾರ, ಮತ್ತೊಂದೆಡೆ ಕೆರೆಯ ನೀರು ಜಮೀನಿಗೆ ನುಗ್ಗಿ. ರೈತರುಬೆಳೆದಿರುವ ಅರಿಶಿಣ, ಬಾಳೆ, ಮುಸುಕಿನಜೋಳ ಬೆಳೆಗಳು ಹಾಳಾಗಿದ್ದು, ರೈತರಿಗೆ ಅಪಾರಪ್ರಮಾಣದ ನಷ್ಟಸಂಭವಿಸಿದೆ. ಮಳೆಯಿಂದಾಗಿ ಅಕ್ಕಪಕ್ಕದ ಸೇತುವೆಗಳು ಮುಳುಗಡೆಯಾಗಿವೆ. ಸರಕಾರ ಬೆಳೆಹಾನಿಗೆ ಕೇವಲ ೧೦ಸಾವಿರ ಪರಿಹಾರ ವಿತರಣೆ ಮಾಡಿದೆ, ಈ ಪರಿಹಾರ ಸಾಲುವುದಿಲ್ಲ. ಸರಕಾರ ಪರಿಹಾರದ ಮೊತ್ತವನ್ನು ಹೆಚ್ಚಳ ಮಾಡಬೇಕು, ನಷ್ಟದ ಅಂದಾಜನ್ನು ಪರಿಶೀಲಿಸಿ ಸೂಕ್ತ ಪರಿಹಾರ ಕೊಡಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ಸೂಚಿಸಿದರು.
ಇದೇವೇಳೆ ಶಾಸಕರು ಕೆರೆಕೋಡಿಬಿದ್ದ ಸ್ಥಳ ಜತೆಗೆ ಕುಂಟಗುಡಿ, ಹೊಂಡರಬಾಳು
ಬಳಿಯ ಶಿಥಿಲಾವಸ್ಥೆ ಸೇತುವೆ, ಜ್ಯೋತಿಗೌಡನಪುರ ಸಮೀಪದ ಸಿಲ್ವಾರ್‌ಕಟ್ಟೆ ಪರಿಶೀಲಿಸಿದರು. ತಹಸೀಲ್ದಾರ್ ಬಸವರಾಜು, ರಾಜಸ್ವನಿರೀಕ್ಷಕರು, ಗ್ರಾಮಲೆಕ್ಕಿಗರು, ನಾಗವಳ್ಳಿನಾಗಯ್ಯ, ಮಹದೇವಸ್ವಾಮಿ, ಮಹದೇವಯ್ಯ, ರಮೇಶ್ ಸ್ವಾಮಿ ಮಹೇಶ್ sಸೇರಿದಂತೆ ಇತರರು ಹಾಜರಿದ್ದರು.