ಲೇಖನ: ಮಾದೇಶ, ಮಾದಲವಾಡಿ, ಚಾಮರಾಜನಗರ.
ಕೊರೊನಾ ಎರಡನೇ ಅಲೆಯು ದೇಶದ ಬಹುತೇಕ ಜಿಲ್ಲೆಗಳನ್ನು ವ್ಯಾಪಿಸಿದೆ. ಕೊರೊನಾ ಇಲ್ಲದ ಜಿಲ್ಲೆ-ತಾಲೂಕುಗಳೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ತಮಿಳುನಾಡಿನ ಕೊಯಮತ್ತೂರಿನಲ್ಲಿ ಇರುವ ಸದ್ಗುರು ಜಗ್ಗಿ ವಾಸುದೇವ್ ರವರ ಆಶ್ರಮದಲ್ಲಿ ಯಾವುದೇ ಕೊರೊನಾ ಸೋಂಕು ಇದುವರೆಗೆ ಪತ್ತೆಯಾಗಿಲ್ಲ.
ಈ ಆಶ್ರಮದಲ್ಲಿ ಸುಮಾರು 3000ಕ್ಕೂ ಅಧಿಕ ಸ್ವಯಂಸೇವಕರು ಇದ್ದಾರೆ. ಅಷ್ಟೇ ಅಲ್ಲದೆ ಇವರ ಶಿಸ್ತುಬದ್ಧವಾದಂತಹ ಸೇವೆಯಿಂದಾಗಿ ಸುತ್ತಮುತ್ತಲಿನ 44 ಕ್ಕೂ ಅಧಿಕ ಗ್ರಾಮಗಳ ಸುಮಾರು ಒಂದು ಲಕ್ಷಕ್ಕೂ ಅಧಿಕ ಜನರು ಕೊರೊನಾ ಎರಡನೇ ಅಲೆಯಿಂದ ಪಾರಾಗಿದ್ದಾರೆ. ಹೀಗಾಗಿ ಈಶ ಯೋಗ ಕೇಂದ್ರದ ಸ್ವಯಂ ಸೇವಕರ ನಿರಂತರ ಶ್ರಮಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.
ಸದ್ಗುರುರವರ ಆಶ್ರಮದ 3000ಕ್ಕೂ ಹೆಚ್ಚು ಸ್ವಯಂ ಸೇವಕರ ಸೇವೆಯ ಪರಿಣಾಮ, ಯೋಗ ಕೇಂದ್ರ ಹಾಗೂ ಸುತ್ತಮುತ್ತಲಿನ 43 ಗ್ರಾಮಗಳ ಅಂದಾಜು 1 ಲಕ್ಷ ಜನರು ಕೋವಿಡ್ 2ನೇ ಅಲೆಯ ಭಾರೀ ಪರಿಣಾಮವನ್ನು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ನಿತ್ಯವೂ ವಿಶೇಷ ಯೋಗ ಕ್ರಮ, ಆರ್ಯುವೇದ ಉತ್ಪನ್ನಗಳ ಬಳಕೆ, ಹಿತಮಿತ ಆಹಾರ ಮತ್ತು ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಸ್ವಯಂಸೇವಕರು ತಮ್ಮನ್ನು ತಾವು ಕೋವಿಡ್‌ನಿಂದ ಕಾಪಾಡಿಕೊಂಡಿದ್ದು ಮಾತ್ರವಲ್ಲದೇ ನೆರೆಹೊರೆಯ ಗ್ರಾಮಗಳನ್ನೂ ಅಪಾಯದಿಂದ ಪಾರು ಮಾಡಿದ್ದಾರೆ. ಕಳೆದ 1 ವರ್ಷದಿಂದ ಯೋಗ ಕೇಂದ್ರಕ್ಕೆ ಹೊರಗಿನವರ ಪ್ರವೇಶ ಪೂರ್ಣ ಸ್ಥಗಿತಗೊಳಿಸಲಾಗಿದೆ.
ಹೊರಗಿನ ಎಲ್ಲಾ ಚಟುವಟಿಕೆ ನಿಷೇಧವಾಗಿದೆ. ಯಾರಾದರೂ ಮಾಸ್ಕ್ ಧರಿಸಿದೇ ಹೊರಬಂದದ್ದು ಕಂಡುಬಂದರೆ, ತಮ್ಮ ತಪ್ಪಿನ ಮಾಹಿತಿ ಇರುವ ಬೋರ್ಡ್ ಹಿಡಿದು 2 ಗಂಟೆ ನಿಲ್ಲಬೇಕು. ಎಲ್ಲಾ ಸ್ವಯಂಸೇವಕರಿಂದ 3 ನಿಮಿಷಗಳ ಸಿಂಹ ಕ್ರಿಯಾ ಯೋಗ. ಇದರಿಂದ ಶ್ವಾಸಕೋಶದ ಸಾಮರ್ಥ್ಯ ಹೆಚ್ಚಳ, ರೋಗ ನಿರೋಧಕ ಶಕ್ತಿ ಅಭಿವೃದ್ಧಿ. ಸ್ವಚ್ಛ ಆಹಾರ ಸೇವನೆ. ಸಾತ್ವಿಕ ಆಹಾರ ಸೇವನೆ. ಬಹುತೇಕ ದಿನಕ್ಕೆ 2 ಬಾರಿ ಕಚ್ಚಾ ತರಕಾರಿ ಮತ್ತು ಹಣ್ಣು ಸೇವನೆ. ಮುಂಜಾನೆ 4.30ಕ್ಕೆ ಬೇವಿನ ಎಲೆ, ಅರಿಶಿನ ಸೇರಿಸಿದ ಬಿಸಿ ನೀರು ಸೇವನೆ. ದಿನಕ್ಕೆ 2 ಬಾರಿ ಖಾಲಿ ಹೊಟ್ಟೆಗೆ ‘ನಿಲವೆಂಬು’ ಎಂಬ ಕಷಾಯ ಸೇವನೆ. ಸುತ್ತಮುತ್ತಲ 43 ಗ್ರಾಮಗಳ 90,000 ಜನರಿಗೂ ನಿತ್ಯ ಎರಡು ಬಾರಿ ಕಷಾಯ ವಿತರಣೆ. ಕೋವಿಡ್ ಮಾರ್ಗಸೂಚಿ ಪಾಲಿಸಲು ನೆರವು ಇಂತಹ ಹಲವು ನಿಯಮಗಳನ್ನು ಪಾಲಿಸುವ ಮೂಲಕ ಕೊರೊನಾವನ್ನು ಯಶಸ್ವಿಯಾಗಿ ಮಣಿಸಿರುವುದು ನಿಜಕ್ಕೂ ಮೆಚ್ಚಬೇಕಾದ ಕಾರ್ಯವೇ ಆಗಿದೆ.