ಚಾಮರಾಜನಗರ: ಮುಸುಕಿನ ಜೋಳದ ಕಡ್ಡಿಯೊಳಗೆ ಮದ್ಯವನ್ನು ಕೇರಳಕ್ಕೆ ಸಾಗಾಣಿಕೆ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಬಂಧಿಸಿರುವ ಪೊಲೀಸರು 53 ಸಾವಿರ ರೂ. ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡಿರುವ ಘಟನೆ ಗುಂಡ್ಲುಪೇಟೆಯಲ್ಲಿ ನಡೆದಿದೆ.

ಕೇರಳದ ವೈನಾಡ್ ಜಿಲ್ಲೆಯ ಮಾರತ್ ಹೌಸ್ ನಿವಾಸಿ ರಂಜಿತ್ ರಾಮ್ ಮುರಳಿಧರನ್  (39) ಬಂಧಿತ. ಈತ ಜೋಳದ ಕಡ್ಡಿಯೊಳಗೆ ಮದ್ಯವನ್ನಿರಿಸಿ ಕೇರಳಕ್ಕೆ ಸಾಗಿಸಲು ಯತ್ನ ನಡೆಸಿದ್ದನು. ಈ ಸಂಬಂಧ ಖಚಿತ ಮಾಹಿತಿ ಬಂದ ಹಿನ್ನಲೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕರಿ ಕೆ.ಎಸ್. ಸುಂದರರಾಜ್  ಅವರ ಮಾರ್ಗ ದರ್ಶನದಲ್ಲಿ ಸರ್ಕಲ್ ಇನ್ ಪೆಕ್ಟರ್ ಮಹದೇವಸ್ವಾಮಿ ,ಸಬ್ ಇನ್ ಪೆಕ್ಟರ್ ರಾಜೇಂದ್ರ  ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.

ಈ ವೇಳೆ ಗುಂಡ್ಲುಪೇಟೆ ತಾಲೂಕಿನ ಮದ್ದಯ್ಯನಹುಂಡಿ ಗ್ರಾಮದ ಶಂಕರೇಗೌಡ ಜಮೀನಿನ ಬಳಿಯ ಗೌಡರ ಕಟ್ಟೆ ಬಳಿ ಮುಸುಕಿನ ಜೋಳದ ಕಡ್ಡಿಯೊಳಗೆ ವಿವಿಧ ಕಂಪನಿಯ ಬಾಟಲುಗಳ 146 ಲೀಟರ್ ಮದ್ಯವನ್ನು ವಶಕ್ಕೆ ಪಡೆಯಲಾಗಿದ್ದು, ಇದರ ಮೌಲ್ಯ 56713 ರೂಪಾಯಿಯಾಗಿದೆ.

ಆರೋಪಿ ಕೊರೊನಾ ಲಾಕ್ ಡೌನ್ ನ್ನು  ದುರುಪಯೋಗಪಡಿಸಿಕೊಂಡು ಹಣ ಮಾಡುವ ಉದ್ದೇಶ ಹೊಂದಿದ್ದನು ಎನ್ನುವುದು ವಿಚಾರಣೆಯಿಂದ ತಿಳಿದು ಬಂಧಿದೆ.

By admin